Karnataka news paper

ಕುಮಾರಸ್ವಾಮಿ ಆಕಸ್ಮಿಕ ಸಿಎಂ ಅಲ್ಲ : ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಎನ್‌. ನಬಿ


ಹೈಲೈಟ್ಸ್‌:

  • ಕುಮಾರಸ್ವಾಮಿ ಆಕಸ್ಮಿಕ ಸಿಎಂ ಅಲ್ಲ ಎಂದ ನಬಿ
  • ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಎನ್‌. ನಬಿ
  • ರಾಷ್ಟ್ರೀಯ ಪಕ್ಷದವರೇ ಅವರನ್ನ ಸಿಎಂ ಮಾಡಿದ್ರು

ವಿಜಯನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಕಸ್ಮಿಕವಾಗಿ ಸಿಎಂ ಆದವರಲ್ಲ. ಅವರನ್ನು ರಾಷ್ಟ್ರೀಯ ಪಕ್ಷದವರೇ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ದರು ಎಂದು ಮಾಜಿ ಸಚಿವ, ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಎನ್‌. ನಬಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಭಾನುವಾರ ಮಾತನಾಡಿ, ಕುಮಾರಸ್ವಾಮಿಯವ ರನ್ನು ಹುಡುಕಿ ಸಿಎಂ ಮಾಡಿದ್ದರು. ಆದರೆ, ಯಡಿಯೂರಪ್ಪ ಅವರು ಸಿಎಂ ಆಗಲು ಎರಡು ಬಾರಿಯೂ ಶಾಸಕರನ್ನು ಖರೀದಿ ಮಾಡಿದ್ದರು. ಆದರೆ, ಕುಮಾರಸ್ವಾಮಿ ಯವರನ್ನು ಅವರೇ ಸಿಎಂ ಮಾಡಿ ಕೊನೆಗೆ ಅವರೇ ಕಾಲೆಳೆದರು ಎಂದು ದೂರಿದರು.

ಗ್ರಾಮ ವಾಸ್ತವ್ಯ!
ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಶ್ರೇಷ್ಠ ಮುಖ್ಯಮಂತ್ರಿ, ದಕ್ಷ ಆಡಳಿತಗಾರರಾಗಿದ್ದರು. ಅವರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ರಾಜ್ಯದ ಜನರ ಗಮನ ಸೆಳೆದಿದ್ದರು. ರಾಜ್ಯದಲ್ಲಿಮೊದಲಿಗೆ ಗ್ರಾಮ ವಾಸ್ತವ್ಯ ಮಾಡಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದರು.ಇದೊಂದು ಉತ್ತಮ ಯಶಸ್ವಿ ಪ್ರಯೋಗವಾಗಿದ್ದು,ಇದೇ ಗ್ರಾಮವಾಸ್ತ್ಯವನ್ನು ರಾಜ್ಯದಲ್ಲೀಗ ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈಗ ಚುನಾವಣೆ ಮಾಡುವುದು ಸುಲಭವಲ್ಲ. ಅಂದಿನ ಕಾಲದಲ್ಲಿಅಭ್ಯರ್ಥಿಗಳ ಅರ್ಹತೆ, ಸೇವೆ ಆಧಾರದ ಮೇಲೆ ಆಯ್ಕೆಯಾಗುತ್ತಿದ್ದರು. ಆದರೀಗ ಮಾನದಂಡಗಳೇ ಬೇರೆ ಇವೆ. ಬೇರೆ ಪಕ್ಷಗಳಲ್ಲಿಹಣ ಬಲ ಇರುವ ಕಡೆ ಅಭ್ಯರ್ಥಿಗಳನ್ನು ಹಾಕುತ್ತಾರೆ. ನಾವು ಜನಬಲ ಇರುವ ಕಡೆ ಅಭ್ಯರ್ಥಿ ಹಾಕುತ್ತೇವೆ. ಈಗ ಚುನಾವಣೆಗಳಲ್ಲಿಹಣದ ಹೊಳೆಯೇ ಹರಿಸಲಾಗುತ್ತಿದೆ. ಹಣ ಇಲ್ಲದವರು ರಾಜಕೀಯ ಕಡೆ ಮುಖ ಮಾಡುವ ಪರಿಸ್ಥಿತಿಯೇ ಇಲ್ಲಎಂದು ಮಾರ್ಮಿಕವಾಗಿ ನುಡಿದರು.

ನೂತನ ವಿಜಯನಗರ ಜಿಲ್ಲೆಯಾದ ನಂತರ ಎರಡು ಜಿಲ್ಲೆಗಳಿಗೆ ಜೆಡಿಎಸ್‌ಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಬಳ್ಳಾರಿಗೆ ಮೀನಳ್ಳಿ ತಾಯಣ್ಣ, ವಿಜಯನಗರಕ್ಕೆ ಕೆ.ಕೊಟ್ರೇಶ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದೇ ಹೊತ್ತಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಬಂದಿದೆ. ಎಲ್ಲಕಡೆ ಪ್ರಬಲ ಸ್ಪರ್ಧೆಗೆ ಪ್ರಯತ್ನ ಮಾಡಲಾಗುತ್ತದೆ.ನಾಯಕತ್ವದ ಕೊರತೆ ಇರುವುದು ನಿಜ. ಕೆಲವು ಕಡೆ ಪಕ್ಷ ಸಂಘಟನಾ ಶಕ್ತಿ ಕುಸಿದಿದೆ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್‌ ಮಾತನಾಡಿ, ಪಕ್ಷದಿಂದ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಎಲ್ಲ ಕ್ಷೇತ್ರಗಳಲ್ಲಿಪಕ್ಷದ ಅಭ್ಯರ್ಥಿ ಇರುವ ಧಾವಂತ ಇಲ್ಲ. ನಮ್ಮ ಶಕ್ತಿ ಇರುವಷ್ಟು ಸ್ಪರ್ಧೆ ಮಾಡಲಾಗುವುದು. ಈಗಾಗಲೇ ಹೊಸಪೇಟೆಯಲ್ಲಿ8 ಜನರು ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು. ಜೆಡಿಎಸ್‌ ತಾಲೂಕು ಅಧ್ಯಕ್ಷ ಎ.ನಾರಾಯಣ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವೈ.ಮಲ್ಲಿಕಾರ್ಜುನ, ರಾಜ್ಯ ಯುವ ಜನತಾದಳ ಕಾರ್ಯಾಧ್ಯಕ್ಷ ನೂರ್‌ ಅಹ್ಮದ್‌, ಬಿ.ಎಂ.ಸೋಮಶೇಖರ, ಪಾಂಡುರಂಗಶೆಟ್ಟಿ ಇದ್ದರು.



Read more