Karnataka news paper

‘ಪ್ರಾಜೆಕ್ಟ್‌ ಕೆ’ ಸಿನೆಮಾದ ಶೂಟಿಂಗ್‌ನಲ್ಲಿ ಪ್ರಭಾಸ್‌, ದೀಪಿಕಾ ಭಾಗಿ


ಹೈದರಾಬಾದ್‌: ಬಾಹುಬಲಿ ಖ್ಯಾತಿಯ ಪ್ರಭಾಸ್‌ ಹಾಗೂ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ‘ಪ್ರಾಜೆಕ್ಟ್‌ ಕೆ’ ಸಿನೆಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಇಬ್ಬರು ಜನಪ್ರಿಯ ನಟ–ನಟಿಯರು ದೊಡ್ಡ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವೈಜಯಂತಿ ಮೂವೀಸ್‌ ತಂಡ ಹೇಳಿದೆ. 

‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್‌ ‘ಪ್ರಾಜೆಕ್ಟ್‌ ಕೆ’ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಇದು ಪ್ರಭಾಸ್ ಅವರ 21ನೇ ಚಿತ್ರವಾಗಿದೆ. ಈ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ.

ಪ್ರಾಜೆಕ್ಟ್‌ ಕೆ ಚಿತ್ರವು ಸೈಂಟಿಫಿಕ್‌ ಕಥನವನ್ನು ಹೊಂದಿದೆ. ಭವಿಷ್ಯದಲ್ಲಿ ನಡೆಯಲಿರುವ ಥರ್ಡ್‌ ವರ್ಲ್ಡ್‌ ವಾರ್‌ನ ಕಲ್ಪನೆಯಡಿ ಇದರ ಚಿತ್ರಕಥೆ ಹೆಣೆಯಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 



Read More…Source link