Karnataka news paper

‘ಏಕ್ ಲವ್ ಯಾ’ ಸಿನಿಮಾ ನಟ ರಾಣಾ, ನಟಿ ರೀಷ್ಮಾ ನಾಣಯ್ಯರ ಹೊಸ ವರ್ಷದ ಯೋಜನೆ ಏನು?


ಹೈಲೈಟ್ಸ್‌:

  • ‘ಏಕ್ ಕವ್ ಯಾ’ ಸಿನಿಮಾ ನಟ ರಾಣಾ, ರೀಷ್ಮಾ ನಾಣಯ್ಯ
  • ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ ರಾಣಾ, ರೀಷ್ಮಾ
  • ರಾಣಾಗೆ ರಕ್ಷಿತಾ ಪ್ರೇಮ್ ಬೆನ್ನೆಲುಬು

ಹೊಸ ವರ್ಷವೆಂದರೆ ನಿರೀಕ್ಷೆ, ಒಳಿತಾಗುತ್ತದೆಂಬ ಆಶಾಭಾವ. ವಿಕ-ಲವಲvk ಕಚೇರಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ‘ಏಕ್‌ ಲವ್‌ ಯಾ’ ಚಿತ್ರದ ಲವಲವಿಕೆಯ ಜೋಡಿ ರಾಣಾ ಹಾಗೂ ರೀಶ್ಮಾ ನಾಣಯ್ಯ ಮಾತಿನಲ್ಲೂ ಇದ್ದುದು ಇದೇ ಭರವಸೆಯ ನೋಟ. ಜೊತೆಗೆ ಪುಟಿಯುವ ಉತ್ಸಾಹ, ನಾಳಿನ ದಿನಗಳತ್ತ ಎಚ್ಚರಿಕೆಯ ನೋಟ, ಕಳೆದ ದಿನಗಳತ್ತ ಎಲ್ಲಆದುದು ಒಳ್ಳೆಯದಕ್ಕೇ ಎಂಬ ಭಾವ. ಅವರಿಬ್ಬರೂ ಜತೆಯಾಗಿ ಕೇಕ್‌ ಕತ್ತರಿಸಿ, ತಮ್ಮಿಬ್ಬರ ಸಿನಿ ಜರ್ನಿಯ ಕುರಿತು ಮಾತಾಡಿ, ನಗೆ ಹಂಚಿದ ಬಗೆ ಹೀಗೆ:

ಕನಸು ನನಸಾಗುವ ಹೊತ್ತು…:

2019ರಲ್ಲಿ ಪ್ರಾರಂಭವಾದ ತಮ್ಮ ಚಿತ್ರ 2022ರ ಮೊದಲ ತಿಂಗಳಲ್ಲೇ ಬಿಡುಗಡೆಯಾಗುತ್ತಿರುವ ಕಾರಣ ರಾಣಾ, ರೀಶ್ಮಾ ಬಹುದೊಡ್ಡ ಸಂಭ್ರಮದಲ್ಲಿರುವುದು ಅವರ ಪ್ರತಿ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು. ‘2020ರ ವೇಳೆಗೆ ಸಿನಿಮಾ ಮುಗಿಸಿ ರಿಲೀಸ್‌ ಮಾಡಲು ಪ್ಲಾನ್‌ ಮಾಡಿಕೊಂಡಿದ್ದೆವು ಎಲ್ಲವೂ ಉಲ್ಪಾಪಲ್ಟಾ ಆಯಿತು. ಇದು ನಮಗೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೆ ಬಂದ ಕಷ್ಟ. ಹಾಗಾಗಿ ಎಲ್ಲವನ್ನು ಒಪ್ಪಿಕೊಂಡು ಪ್ರಕೃತಿ ಹೇಗೆ ಕರೆದುಕೊಂಡು ಹೋಯಿತೋ ಹಾಗೇ ಹೋಗಿದ್ದೇವೆ. ಮುಂದಿನ ದಿನಗಳು ಒಳ್ಳೆಯ ದಿನಗಳಾಗಲಿ ಎಂದುಕೊಳ್ಳುತ್ತಾ ನಾವು 2022ನ್ನು ಬರಮಾಡಿಕೊಳ್ಳುತ್ತಿದ್ದೇವೆ’ ಎಂದರು ರಾಣಾ ಮತ್ತು ರೀಷ್ಮಾ.

ಹಿಟ್ ಹಾಡುಗಳ ‘ಏಕ್‌ ಲವ್ ಯಾ’: ಹೊಸ ಪ್ರತಿಭೆಗೆ ಅವಕಾಶ ಕೊಟ್ಟ ಪ್ರೇಮ್

ರೀಶ್ಮಾ, ರಾಣಾ ಇಬ್ಬರಿಗೂ ಹೊಸ ವರ್ಷದೊಂದಿಗೆ ಮೊದಲ ಚಿತ್ರದ ಕನಸು ನನಸಾಗುತ್ತಿರುವ ಉಡುಗೊರೆ ಸಿಕ್ಕಿದೆ. ತಮ್ಮ ವೃತ್ತಿಯ ಬೆಳವಣಿಗೆಯತ್ತ ಗಮನ ಹರಿಸಿರುವುದನ್ನು ಅವರಿಬ್ಬರೂ ಕನಸುಕಂಗಳಿಂದ ಹೇಳಿಕೊಂಡರು. ‘2022 ಜನವರಿ 21ರಂದು ನನ್ನ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಜನ ಹರಸುತ್ತಾರೆ ಎಂಬ ನಂಬಿಕೆ ಇದೆ. ಜತೆಯಲ್ಲಿ ಹೊಸ ಕಥೆ ಕೇಳುವುದು, ಮುಂದಿನ ಸಿನಿಮಾ ತಯಾರಿಯತ್ತ ಚಿತ್ತ ಹರಿಸಿದ್ದೇನೆ. ಮೊದಲ ಸಿನಿಮಾ ಬಿಡುಗಡೆಯಾದ ನಂತರ ಹೊಸ ಸಿನಿಮಾದ ಅನೌನ್ಸ್‌ ಮಾಡುತ್ತೇನೆ’ ಎಂದು ಮಾತಿನಲ್ಲೇ ಮೋಡಿ ಮಾಡಿದರು ರಾಣಾ.

‘ನಾನು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಜತೆಗೆ ಒಂದು ಸಿನಿಮಾ ಶೂಟಿಂಗ್‌ ಶೇ. 80ರಷ್ಟು ಮುಗಿದಿದೆ. ಹೀಗಾಗಿ, 2021 ನನ್ನ ಪಾಲಿಗೆ ಒಳ್ಳೆಯದನ್ನೇ ಮಾಡಿದೆ. ಇದೀಗ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ 2022ರ ಆರಂಭವೂ ಸೂಪರ್‌ ಎನ್ನುತ್ತೇನೆ. ಒಬ್ಬ ಹೊಸ ನಟಿಗೆ ಇದಕ್ಕಿಂತಲೂ ಅದೃಷ್ಟ ಇನ್ನೇನು ಸಿಗುತ್ತದೆ. ಜತೆಗೆ ಇನ್ನಷ್ಟು ಕಥೆ ಕೇಳುತ್ತಿದ್ದೇನೆ. ಒಳ್ಳೊಳ್ಳೆ ಕಥೆಗಳ ನಿರೀಕ್ಷೆಯಲ್ಲಿದ್ದೇನೆ’ ಎನ್ನುವಾಗ ರೀಷ್ಮಾ ಕಣ್ಣಲ್ಲಿ ಹೊಸ ಹೊಳಪು.

ಪುನೀತ್ ಫೋಟೋ ಎದುರು ಶಾಂಪೇನ್ ಬಾಟಲಿ ಓಪನ್; ಅಪ್ಪು ಫ್ಯಾನ್ಸ್‌ಗೆ ಕ್ಷಮೆ ಕೇಳಿದ ‘ಜೋಗಿ’ ಪ್ರೇಮ್

ರಕ್ಷಿತಾ, ಪ್ರೇಮ್‌ ಬೆನ್ನೆಲುಬು
ನಟಿ ರಕ್ಷಿತಾ ಅವರ ಸೋದರನಾದ ರಾಣಾ ಅವರಿಗೆ ಮುಂದಿನ ಸಿನಿಮಾಗಳ ಕಥೆಗಳ ಆಯ್ಕೆಯಲ್ಲಿ ನಿರ್ದೇಶಕ ಪ್ರೇಮ್‌ ಮತ್ತು ರಕ್ಷಿತಾ ಇಬ್ಬರೂ ನೆರವಾಗುತ್ತಿದ್ದಾರಂತೆ. ‘ಮೊದಲು ಕಥೆ ಕೇಳಿ ಇಷ್ಟವಾದ ಮೇಲೆ ನಮ್ಮ ಭಾವನವರ ಮುಂದಿಡುತ್ತೇನೆ, ಬಳಿಕ ಫ್ಯಾಮಿಲಿ ಎಲ್ಲ ಕುಳಿತು ಕೇಳುತ್ತೇವೆ. ಎಲ್ಲರ ಜತೆ ಚರ್ಚೆ ಮಾಡದೇ ನಾನು ಮುಂದೆ ಹೋಗುವುದಿಲ್ಲ’ ಎಂದೆಲ್ಲ ಹೇಳಿಕೊಂಡ ರಾಣಾ ಉತ್ಸಾಹದ ಪ್ರತಿರೂಪವಾದರು. ಇನ್ನೂ ದ್ವಿತೀಯ ಪದವಿ ಓದುತ್ತಿರುವ ರೀಶ್ಮಾ, ‘ಓದಿನ ಜೊತೆಗೆ ಸಿನಿಮಾ ವೃತ್ತಿಯನ್ನೂ ನಿಭಾಯಿಸುತ್ತೇನೆ’ ಎನ್ನುತ್ತಾ ಮೆಲುಮಾತಿನೊಂದಿಗೆ ಮನಗೆದ್ದರು.



Read more