Karnataka news paper

Happy New Year 2022: ಅಭಿಮಾನಿಗಳಿಗೆ ಶುಭಾಶಯ ಕೋರಿದ ಸಿನಿಮಾ ತಾರೆಯರು…


ಬೆಂಗಳೂರು: ಬಾಲಿವುಡ್‌ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ತಾರೆಯರು ಅಭಿಮಾನಿಗಳು ಮತ್ತು ದೇಶದ ಸಮಸ್ತ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ಕೂ ಸೇರಿದಂದತೆ ಇತರೆ ವೇದಿಕೆಗಳ ಮೂಲಕ 2022ರ ನೂತನ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. 

ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌, ರಣವೀರ್‌ ಸಿಂಗ್‌, ಅನುಪಮ್‌ ಖೇರ್‌, ಹೃತಿಕ್‌ ರೋಷನ್‌, ಆಲಿಯಾ ಭಟ್‌, ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವರು ಶುಭಾಶಯಗಳನ್ನು ಹೇಳಿದ್ದಾರೆ.

ದಕ್ಷಿಣ ಭಾರತದ ಸ್ಟಾರ್ ನಟ, ನಟಿಯರು ಕೂಡ ವಿಶ್‌ ಮಾಡಿದ್ದಾರೆ. ತೆಲುಗಿನ ಚಿರಂಜೀವಿ, ಮಹೇಶ್‌ ಬಾಬು, ನಟಿ ಸಮಂತಾ, ಮಲಯಾಳಂನ ಮೋಹನ್‌ ಲಾಲ್‌, ತಮಿಳಿನಿ ಕಾರ್ತಿ ಸೇರಿದಂತೆ ಹಲವರು ಶುಭಾಶಯ ಹೇಳಿದ್ದಾರೆ. r)





Read More…Source link