ಬೆಂಗಳೂರು: ಬಾಲಿವುಡ್‌ನ ಸೆಲೆಬ್ರಿಟಿ ಜೋಡಿಗಳು ಹೊಸ ವರ್ಷದ ಮೊದಲ ದಿನವನ್ನು ಜೊತೆಯಾಗಿ ಸಂಭ್ರಮಿಸುವುದು ಹೊಸದೇನಲ್ಲ. ನಟಿ ಆಲಿಯಾ ಭಟ್ ಅವರು ಸಹ ತಮ್ಮ ಬಾಯ್‌ಫ್ರೆಂಡ್, ನಟ ರಣಬೀರ್ ಕಪೂರ್ ಜೊತೆಗೆ 2022ರ ನೂತನ ದಿನವನ್ನು ಒಟ್ಟಿಗೆ ಬರಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿರುವ ಆಲಿಯಾ ಭಟ್, ‘2022ಕ್ಕೆ ಶಕ್ತಿಯನ್ನು ತುಂಬೋಣ. ಎಲ್ಲರೂ ಸುರಕ್ಷಿತವಾಗಿರಿ. ಖುಷಿಯಾಗಿರಿ. ಸರಳವಾಗಿರಿ ಮತ್ತು ಹೆಚ್ಚು ಪ್ರೀತಿಸಿ. ಹೊಸ ವರ್ಷದ ಶುಭಾಶಯಗಳು’ ಎಂದು ತಿಳಿಸಿದ್ದಾರೆ.
ಆಲಿಯಾ ಅವರು ಹಂಚಿಕೊಂಡಿರುವ ಫೋಟೊಗಳಲ್ಲಿ ರಣಬೀರ್ ಕಪೂರ್ ಸಹ ಇದ್ದಾರೆ.
ಇದಕ್ಕೆ ಆಲಿಯಾ ತಾಯಿ ಸೋನಿ ರಾಜ್ದಾನ್ ಕಾಮೆಂಟ್ ಮಾಡಿದ್ದು, ‘ಬುದ್ದಿವಂತಿಕೆಯಿಂದ ಕೂಡಿದ ಮಾತುಗಳು’ ಎಂದು ಪ್ರತಿಕ್ರಿಯಿಸಿದ್ದಾರೆ.
ರಣಬೀರ್ ತಾಯಿ ನೀತು ಕಪೂರ್ ಅವರು ಹೃದಯದ ಎಮೋಜಿಗಳ ಮೂಲಕ ಕಾಮೆಂಟಿಸಿದ್ದಾರೆ.
ಬಿಗ್ ಬಜೆಟ್ ಚಿತ್ರಗಳಾದ ಆರ್‌ಆರ್‌ಆರ್ ಮತ್ತು ಗಂಗೂಬಾಯಿ ಕಥಿಯಾವಾಡಿಗಳಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.