Karnataka news paper

ಐಪಿಎಲ್ 2022: ವಿರಾಟ್ ಕ್ಕಿಂತ ಹೆಚ್ಚು ರೋಹಿತ್; ಸಂಭಾವನೆಯಲ್ಲಿ ಧೋನಿ ಹಿಂದಿಕ್ಕಿದ ಪಂತ್


Source : Online Desk

ಮುಂಬೈ: ಐಪಿಎಲ್ 2022ಕ್ಕೆ ಉಳಿಸಿಕೊಳ್ಳಬೇಕಾದ 27 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಾಯಕ ಎಂಎಸ್ ಧೋನಿ ಸೇರಿದಂತೆ 4 ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ.

ಧೋನಿ ಚೆನ್ನೈನಿಂದ ರಿಟೇನ್ ಆಗಿರುವ ಎರಡನೇ ಆಟಗಾರನಾಗಿದ್ದು, ಕೂಲ್ ಕ್ಯಾಪ್ಟನ್ 12 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಕಳೆದ ಋತುವಿನಲ್ಲಿ ಅಂದರೆ 2021ರಲ್ಲಿ ಧೋನಿ 15 ಕೋಟಿ ಗಳಿಸಿದ್ದರು. ರವೀಂದ್ರ ಜಡೇಜಾ ಅವರಿಗೆ ಗರಿಷ್ಠ 16 ಕೋಟಿ ರೂಪಾಯಿ ಪಡೆಯಲಿದ್ದಾರೆ. ಈ ಸೀಜನ್ ನಲ್ಲಿ ಉಳಿಸಿಕೊಂಡಿರುವ 27 ಆಟಗಾರರ ಪೈಕಿ 5 ಆಟಗಾರರು ಸಂಭಾವನೆಯಲ್ಲಿ ಧೋನಿಯನ್ನು ಹಿಂದಿಕ್ಕಿದ್ದಾರೆ.

ಸಂಜು ಸ್ಯಾಮ್ಸನ್ 14 ಕೋಟಿಗೆ ಸಂಭಾವನೆ!

ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸೇರಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಿಂದ ಸ್ಯಾಮ್ಸನ್ 14 ಕೋಟಿ ರೂಪಾಯಿ, ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ 16 ಕೋಟಿ, ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ 14 ಕೋಟಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 16 ಕೋಟಿ ಮತ್ತು ಆರ್‌ಸಿಬಿ ಪ್ರಾಂಚೈಸಿ 15 ಕೋಟಿಗೆ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ, ಕೆಕೆಆರ್ ಆಂಡ್ರಾ ರಸೆಲ್ ಮತ್ತು ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ ಅವರನ್ನು 12 ಕೋಟಿಗೆ ಉಳಿಸಿಕೊಂಡಿದ್ದು, ಅದು ಧೋನಿ ಪಡೆಯುವ ಸಂಭಾವನೆಗೆ ಸಮನಾಗಿದೆ.

ಪಂಜಾಬ್ 2 ಆಟಗಾರರನ್ನು ಉಳಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ ಅವರನ್ನು 14 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಅರ್ಷದೀಪ್ ಸಿಂಗ್ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಸನ್ ರೈಸರ್ಸ್ ಹೈದರಾಬಾದ್ 3 ಆಟಗಾರರನ್ನು ಉಳಿಸಿಕೊಂಡಿದೆ. ಕೇನ್ ವಿಲಿಯಮ್ಸನ್ 14 ಕೋಟಿಗೆ ಉಳಿಸಿಕೊಂಡರು. ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ ತಲಾ 4 ಕೋಟಿಗೆ ಉಳಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ರಿಷಬ್ ಪಂತ್, 16 ಕೋಟಿ ರೂ., ಅಕ್ಷರ್ ಪಟೇಲ್ 9 ಕೋಟಿ ರೂ. ಪೃಥ್ವಿ ಶಾ – 7.5 ಕೋಟಿ ಮತ್ತು ಎನ್ರಿಕ್ ನಾರ್ಕಿಯಾ 6.5 ಕೋಟಿ ರೂ. ಕೋಲ್ಕತ್ತಾ ನೈಟ್ ರೈಡರ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ಆಂಡ್ರೆ ರಸೆಲ್ 12 ಕೋಟಿಗೆ ಉಳಿಸಿಕೊಂಡಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿ ತಲಾ 8 ಕೋಟಿಗೆ ಉಳಿಸಿಕೊಂಡಿದ್ದಾರೆ. ಸುನಿಲ್ ನರೈನ್ 6 ಕೋಟಿಗೆ ಉಳಿಸಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 3 ಆಟಗಾರರನ್ನು ಉಳಿಸಿಕೊಂಡಿದೆ. ಸಂಜು ಸ್ಯಾಮ್ಸನ್ 14 ಕೋಟಿ ಪಡೆಯಲಿದ್ದಾರೆ. 10 ಕೋಟಿಗೆ ಜೋಸ್ ಬಟ್ಲರ್ ಅವರನ್ನು ಉಳಿಸಿಕೊಳ್ಳಲಾಗಿದೆ. ಯಶಸ್ವಿ ಜೈಸ್ವಾಲ್ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಕೆಎಲ್ ರಾಹುಲ್‌ಗೆ 20 ಕೋಟಿ ರೂ. ಆಫರ್ ಕೊಟ್ಟ ಲಖನೌ: ಐಪಿಎಲ್ ಇತಿಹಾಸದಲ್ಲೇ ಇದು ದುಬಾರಿ ಮೊತ್ತ; ಆಗಾದ್ರೆ RCB ಕಥೆ ಏನು?

ಅಹಮದಾಬಾದ್ ಮತ್ತು ಲಕ್ನೋ ತಂಡಗಳು ತಲಾ 3 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಈ ಮೂವರು ಆಟಗಾರರಲ್ಲಿ ಇಬ್ಬರಿಗಿಂತ ಹೆಚ್ಚು ಭಾರತೀಯರು ಇರುವಂತಿಲ್ಲ ಅಥವಾ ಒಬ್ಬರಿಗಿಂತ ಹೆಚ್ಚು ವಿದೇಶಿ ಆಟಗಾರರು ಇರುವಂತಿಲ್ಲ. ಅಲ್ಲದೆ, ಒಬ್ಬ ಅನ್‌ಕ್ಯಾಪ್ಡ್ ಆಟಗಾರನನ್ನು ಹೊಸ ತಂಡಗಳು ಆಯ್ಕೆ ಮಾಡಬಹುದು. ರಿಟೆನ್ಷನ್ ಮುಗಿದ ನಂತರ, ಹೊಸ ತಂಡಗಳು ತಮ್ಮ 3 ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಐಪಿಎಲ್ 2022ರಲ್ಲಿ 8 ತಂಡಗಳ ಬದಲಿಗೆ 10 ತಂಡಗಳು, 10 ತಂಡಗಳು ಗ್ರೌಂಡ್ ಗೆ ಇಳಿಯಲಿವೆ. ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಲಕ್ನೋದಿಂದ 20 ಕೋಟಿ ಪಡೆಯುವ ಸಾಧ್ಯತೆ ಇದೆ ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೊತ್ತಕ್ಕೆ ಬಿಕರಿಯಾದ್ರೆ, ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಕೆ.ಎಲ್.ರಾಹುಲ್ ಆಗಲಿದ್ದಾರೆ.



Read more…