
ಹೌದು, ಇನ್‌ಸ್ಟಾಗ್ರಾಮ್‌ನ ಜನಪ್ರಿಯ ಫೀಚರ್ಸ್‌ಗಳಲ್ಲಿ ಆರ್ಕೈವ್ ಫೀಚರ್ಸ್ ಕೂಡ ಒಂದಾಗಿದೆ. ಈ ಫೀಚರ್ಸ್ ಮೂಲಕ ನಿಮ್ಮ ಫೋಸ್ಟ್‌ಗಳನ್ನು ಹೈಡ್ ಮಾಡುವುದು ಸುಲಭವಾಗಿದೆ. ಸದ್ಯ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡಿದ ನಂತರ, ದೀಪಿಕಾ ಪಡುಕೋಣೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಮದುವೆಯ ಫೋಟೋಗಳನ್ನು ಅನ್ ಆರ್ಕೈವ್ ಮಾಡಿದ್ದಾರೆ. ಇದು ಇನ್‌ಸ್ಟಾಗ್ರಾಮ್‌ಪ್ರಿಯರ ಕುತೂಹಲಕ್ಕೆ ಕಾರಣವಾಗಿದ್ದು, ಎಲ್ಲರೂ ಆರ್ಕೈವ್ ಫೀಚರ್ಸ್ ಬಗ್ಗೆ ಮಾತನಾಡುವಂತಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಆರ್ಕೈವ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಆರ್ಕೈವ್ ಮಾಡುವುದು ಹೇಗೆ?
ಇನ್‌ಸ್ಟಾಗ್ರಾಮ್ ಆರ್ಕೈವ್ ಫೀಚರ್ಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಅನ್ನೊದು ಗಮನಿಸಬೇಕಾದ ವಿಚಾರ. ನಿಮ್ಮ ಮೊಬೈಲ್ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ಆರ್ಕೈವ್ ಫೀಚರ್ಸ್ ಬಳಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್ ಮೊಬೈಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್‌ಗೆ ಹೋಗಿ
ಹಂತ:2 ನಂತರ ನೀವು ಆರ್ಕೈವ್ ಮಾಡಲು ಬಯಸುವ ಫೋಟೋದ ಮೇಲೆ ಕ್ಲಿಕ್ ಮಾಡಿ
ಹಂತ:3 ನಿಮ್ಮ ಪೋಸ್ಟ್‌ನ ಮೇಲಿನ ಬಲ ಮೂಲೆಯಲ್ಲಿ ಪ್ರದರ್ಶಿಸಲಾದ ಮೂರು ಚುಕ್ಕೆಗಳನ್ನು ಆಯ್ಕೆಮಾಡಿ.
ಹಂತ:4 ಇದರಲ್ಲಿ ಆರ್ಕೈವ್ ಆಯ್ಕೆಯನ್ನು ಆರಿಸಿ
ಹಂತ:5 ನಂತರ ನಿಮ್ಮ ಫೋಟೋವನ್ನು ಆರ್ಕೈವ್ ಮಾಡಲಾಗುತ್ತದೆ. ಈ ಪೋಸ್ಟ್ ನಿಮ್ಮ ಪ್ರೊಫೈಲ್‌ನಲ್ಲಿ ಗೋಚರಿಸುವುದಿಲ್ಲ.

ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಅನ್‌ಆರ್ಕೈವ್ ಮಾಡುವುದು ಹೇಗೆ?
ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ನಿಮ್ಮ ಪ್ರೊಫೈಲ್‌ಗೆ ಹೋಗಿ
ಹಂತ:3 ಇದೀಗ ನಿಮ್ಮ ಪೋಸ್ಟ್‌ನ ಮೇಲಿನ ಬಲ ಮೂಲೆಯಲ್ಲಿ ಪ್ರದರ್ಶಿಸಲಾದ ಮೂರು-ಡಾಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:4 ಇದರಲ್ಲಿ ಅನ್ ಆರ್ಕೈವ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:5 ಫೋಟೋ ಈಗ ನಿಮ್ಮ ಪ್ರೊಫೈಲ್‌ನಲ್ಲಿ ಗೋಚರಿಸುತ್ತದೆ.
ಇಲ್ಲಿ ನೀವು ಗಮನಿಸಬೇಕಾದ ಪ್ರಮುಖ ವಿಚಾರ ಎಂದರೆ ನಿವು ಈಗಾಗಲೇ ಆರ್ಕೈವ್ ಮಾಡಲಾದ ಪೋಸ್ಟ್‌ಗಳನ್ನು ಮಾತ್ರ ಅನ್ ಆರ್ಕೈವ್ ಮಾಡಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಆರ್ಕೈವ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸುವುದು ಹೇಗೆ?
ಇನ್ನು ನೀವು ಮರೆಮಾಡಿದ ಅಥವಾ ಆರ್ಕೈವ್ ಮಾಡಿದ ಫೋಟೋಗಳನ್ನು ಪ್ರವೇಶಿಸಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಹೋಗಿ
ಹಂತ:2 ನಂತರ ಮೂರು ಸಾಲುಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:3 ಇದರಲ್ಲಿ ಆರ್ಕೈವ್ ಮೇಲೆ ಟ್ಯಾಪ್ ಮಾಡಿ
ಹಂತ:4 ಮೇಲ್ಭಾಗದಲ್ಲಿರುವ ಪೋಸ್ಟ್‌ಗಳು/ಸ್ಟೋರೀಸ್ ಆರ್ಕೈವ್ ಮೇಲೆ ಕ್ಲಿಕ್ ಮಾಡಿ
ಹಂತ:5 ನಂತರ, ಸ್ಟೋರೀಸ್ ಆರ್ಕೈವ್, ಪೋಸ್ಟ್‌ಗಳ ಆರ್ಕೈವ್ ಅಥವಾ ಲೈವ್ ಆರ್ಕೈವ್ ಆಯ್ಕೆಮಾಡಿ.
ಹೀಗೆ ಮಾಡುವ ಮೂಲಕ ಆರ್ಕೈವ್ ಮಾಡಿದ ಚಾಟ್‌ಗಳನ್ನು ನೀವು ಪ್ರವೇಶಿಸಬಹುದಾಗಿದೆ.

ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
ಹಂತ:1 ಮೊದಲನೆಯದಾಗಿ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ instagram.com ಗೆ ಲಾಗ್ ಇನ್ ಮಾಡಿ.
ಹಂತ:2 ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆದ ತಕ್ಷಣ ಮೇಲಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ, ಇದರಲ್ಲಿ ಎಡಿಟ್ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
ಹಂತ:4 ಈಗ ಕೆಳಗೆ ಸ್ಕ್ರಾಲ್ ಮಾಡಿ, ನಂತರ ಕೆಳಗಿನ ಬಲಭಾಗದಲ್ಲಿರುವ Temporarily disable my account ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ನೀವು ನಿಮ್ಮ ಖಾತೆಯನ್ನು ಏಕೆ ನಿಷ್ಕ್ರಿಯಗೊಳಿಸುತ್ತಿದ್ದೀರಿ ಅನ್ನೊದನ್ನ ಡ್ರಾಪ್-ಡೌನ್ ಮೆನುವಿನ ಆಯ್ಕೆಯನ್ನು ಆರಿಸಿ?
ಹಂತ:6 ನಂತರ ನಿಮ್ಮ ಪಾಸ್‌ವರ್ಡ್ ಅನ್ನು ರಿ-ಎಂಟ್ರಿ ಮಾಡಿ. ನೀವು ಮೆನುವಿನಿಂದ ಕಾರಣವನ್ನು ಆಯ್ಕೆಮಾಡಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರವೇ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯು ಗೋಚರಿಸುತ್ತದೆ.
ಹಂತ:7 ಇದೆಲ್ಲವೂ ಮುಗಿದ ನಂತರ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ

ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?
ಒಂದು ವೇಳೆ ನೀವು ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡುವ ಮುನ್ನ ಅದರಲ್ಲಿರುವ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳನ್ನು ಬಳಸಬಹುದು. ಈ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ 4 ಕೆ ವಿಡಿಯೋ ಡೌನ್ಲೋಡರ್ ಸರಳ ಸೈಟ್‌ಗಳಲ್ಲಿ ಒಂದಾಗಿದೆ ಇದು ವಿಂಡೋಸ್, ಮ್ಯಾಕೋಸ್ ಅಥವಾ ಲಿನಕ್ಸ್‌ನಲ್ಲಿ ಬಳಸಬಹುದಾಗಿದೆ. ಅದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ .
ಹಂತ:1 ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆಯಿರಿ, ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊದ ಲಿಂಕ್ ಅನ್ನು ಕಾಪಿ ಮಾಡಿ. ಡೆಸ್ಕ್‌ಟಾಪ್‌ನಲ್ಲಿ ಯಾವುದೇ ವೀಡಿಯೊ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ನಂತರ ಲಿಂಕ್ ಕಾಪಿ ಆಯ್ಕೆಮಾಡಿ.
ಹಂತ:2 ನಂತರ ಬ್ರೌಸರ್‌ನಲ್ಲಿ 4K ವಿಡಿಯೋ ಡೌನ್‌ಲೋಡರ್ ಓಪನ್ ಮಾಡಿ, ಗ್ರಿನ್ ಪೇಸ್ಟ್ ಲಿಂಕ್ ಬಟನ್ ಕ್ಲಿಕ್ ಮಾಡಿ.
ಹಂತ:3 ಫಾರ್ಮ್ಯಾಟ್ ಅನ್ನು ವೀಕ್ಷಿಸಲು ಮತ್ತು ಫೈಲ್ ಸೇವ್ ಮಾಡಲು ಲೊಕೆಶನ ಕೇಳಲು ,ಅಪ್ಲಿಕೇಶನ್ ಸಣ್ಣ ಟೈಲ್ ಅನ್ನು ಪಾಪ್ ಅಪ್ ಮಾಡುತ್ತದೆ.
ಹಂತ:4 ಆಯ್ಕೆ ಮಾಡಿದ ನಂತರ, ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ಡೌನ್‌ಲೋಡ್ ಪೂರ್ಣಗೊಂಡ ನಂತರ, 4K ವಿಡಿಯೋ ಡೌನ್‌ಲೋಡರ್‌ನಲ್ಲಿನ ವೀಡಿಯೊ ಹೆಸರಿನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ವೀಕ್ಷಿಸಲು ಪ್ಲೇ ಆಯ್ಕೆಮಾಡಿ.