Karnataka news paper

ಬೀದರ್‌ನ ನಿಂಬೂರಿನಲ್ಲಿ ಭೂಕಂಪ : 3.1 ತೀವ್ರತೆ ದಾಖಲು


ಹೈಲೈಟ್ಸ್‌:

  • ಬೀದರ್‌ನ ನಿಂಬೂರಿನಲ್ಲಿ ಭೂಕಂಪ
  • 3.1 ರಷ್ಟು ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲು
  • ಆತಂಕದಲ್ಲಿ ದಿನದೂಡುತ್ತಿರುವ ನಿಂಬೂರ ಗ್ರಾಮಸ್ಥರು

ಹುಮನಾಬಾದ : ತಾಲೂಕಿನ ನಿಂಬೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 1.58 ಕ್ಕೆ ಭೂಕಂಪ ಸಂಭವಿಸಿದ್ದು, 3.1 ರಷ್ಟು ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ನಿಂಬೂರ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಭೂಮಿ ಕಂಪಿಸುತ್ತಿರುವ ಅನುಭವ ಹಾಗೂ ಭೂಮಿಯಿಂದ ನಿಗೂಢ ಶಬ್ದ ಕೇಳಿಬರುತ್ತಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಕಳೆದ ಎರೆಡು ದಿನಗಳ ಹಿಂದೆ ಗ್ರಾಮಸ್ಥರು 112ಗೆ ಕರೆಮಾಡಿ ಮಾಹಿತಿ ಕೂಡ ನೀಡಿರುವ ಕುರಿತು ತಿಳಿಸಿದ್ದಾರೆ.

ಇದೀಗ ಗ್ರಾಮದಲ್ಲಿ ಭೂಕಂಪನ ಸಂಭವಿಸಿರುವ ಸುದ್ದಿ ತಿಳಿದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಕೆಲ ಸಮಯ ಭೂಮಿಯಿಂದ ನಿಗೂಢ ಶಬ್ದಗಳು ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ,ಗ್ರಾಮದಲ್ಲಿ ಯಾವುದೇ ಅನಾಹುತ, ಜೀವಹಾನಿ ಸಂಭವಿಸಿಲ್ಲ.

ಶಾಸಕ ರಾಜಶೇಖರ ಪಾಟೀಲ್,ತಹಸೀಲ್ದಾರ್‌ ನಾಗಯ್ಯ ಹಿರೇಮಠ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ನಿಂಬೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಹಾಮಳೆಯಿಂದ ಭೂ ಕಂಪಿಸಿದೆ, ಆತಂಕ ಬೇಡ ಎಂದ ವಿಜ್ಞಾನಿಗಳು..

ಚಿಕ್ಕಬಳ್ಳಾಪುರದಲ್ಲಿ ಭೂಕಂಪ ಡಿಸೆಂಬರ್ 23 ರಂದು ಮಧ್ಯಾಹ್ನ 2.16ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿ ರಿಕ್ಟರ್‌ ಮಾಪನದಲ್ಲಿ 3.6 ತೀವ್ರತೆ ದಾಖಲಾಗಿತ್ತು. ಇದರಿಂದ ಇಲ್ಲಿನ ಜನ ಬೆಚ್ಚಿಬಿದ್ದಿದ್ದರು. ಆದರೆ ಪರಿಶೀಲನೆ ಬಳಿಕ ಅದು ಮಳೆಯಿಂದ ಉಂಟಾದ ಭೂಕಂಪನ ಎಂದು ತಿಳಿದುಬಂದಿದೆ.



Read more