ಹೈಲೈಟ್ಸ್:
- ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ ‘ಪುಷ್ಪ’ ಸಿನಿಮಾ
- ‘ಪುಷ್ಪ’ ಸಿನಿಮಾ ‘ಹು ಅಂಟವಾ ಮಾವ.. ಹೂ ಹೂ ಅಂಟವಾ ವಾ..’ ಹಾಡು ಸಖತ್ ವೈರಲ್
- ‘ಪುಷ್ಪ’ ಸಿನಿಮಾದ ಐಟಂ ಹಾಡಿನ ಮೂಲಕ ಜನಪ್ರಿಯರಾದ ಮಂಗ್ಲಿ ಸಹೋದರಿ
ಯಾರು ಈ ಇಂದ್ರವತಿ ಚೌಹಾಣ್?
‘ಹು ಅಂಟವಾ ಮಾವ.. ಹೂ ಹೂ ಅಂಟವಾ ವಾ..’ ಹಾಡು ಕೇಳಿದ ಪ್ರತಿಯೊಬ್ಬರು, ಅದರಲ್ಲಿನ ಮಾದಕ ವಾಯ್ಸ್‌ಗೆ ಮರುಳಾಗಿದ್ದಾರೆ. ‘ಈ ಧ್ವನಿ ಯಾರದ್ದು, ಸಖತ್ ಆಗಿದೆ’ ಅಂತ ಫೀಲ್ ಮಾಡ್ತಾ ಇದ್ದಾರೆ. ಅಂದಹಾಗೆ, ಈ ಹಾಡನ್ನು ಹಾಡಿರುವ ಇಂದ್ರವತಿ ಚೌಹಾಣ್ ಬೇರಾರೂ ಅಲ್ಲ, ಗಾಯಕಿ ಮಂಗ್ಲಿ ಅವರ ಸಹೋದರಿ. ‘ರಾಬರ್ಟ್’ ಚಿತ್ರದ ತೆಲುಗು ವರ್ಷನ್‌ನಲ್ಲಿ ‘ಕಣ್ಣೆ ಅದಿರಿಂದಿ..’ ಸಾಂಗ್ ಹೇಳಿ ಫೇಮಸ್ ಆಗಿದ್ದ ಮಂಗ್ಲಿಗೆ ಈಗ ಕರ್ನಾಟಕದಲ್ಲೂ ಫ್ಯಾನ್ಸ್ ಇದ್ದಾರೆ. ಇದೀಗ ಅವರ ಸಹೋದರಿ ಇಂದ್ರವತಿ ಚೌಹಾಣ್ ಕೂಡ ಗಾಯಕಿಯಾಗಿ ಭರ್ಜರಿ ಬ್ರೇಕ್ ಪಡೆದುಕೊಂಡಿದ್ದಾರೆ.
ಕನ್ನಡ ವರ್ಷನ್‌ಗೆ ಮಂಗ್ಲಿ ಗಾಯಕಿ
‘ಪುಷ್ಪ’ ಸಿನಿಮಾವು ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ, ಚಿತ್ರದ ಎಲ್ಲ ಹಾಡುಗಳು ಐದು ವರ್ಷನ್‌ನಲ್ಲಿ ಸಿದ್ಧವಾಗಬೇಕು. ಹಾಗಾಗಿ, ಇಂದ್ರವತಿ ಹಾಡಿರುವ ‘ಹು ಅಂಟವಾ ಮಾವ.. ಹೂ ಹೂ ಅಂಟವಾ ವಾ..’ ಹಾಡಿನ ಕನ್ನಡ ವರ್ಷನ್ ‘ಹು ಅಂತೀಯಾ ಮಾವ.. ಹೂ ಹೂ ಅಂತೀಯಾ ಮಾವ..’ ಹಾಡಿಗೆ ಮಂಗ್ಲಿ ಧ್ವನಿ ನೀಡಿದ್ದಾರೆ. ಈಚೆಗಷ್ಟೇ ‘ಏಕ್ ಲವ್ ಯಾ’ ಚಿತ್ರದ ಹಾಡೊಂದಕ್ಕೆ ಅವರು ಧ್ವನಿಯಾಗಿದ್ದರು. ಈಗ ತಂಗಿ ಹಾಡಿದ್ದ ಹಾಡಿನ ಕನ್ನಡ ವರ್ಷನ್ ಹಾಡಿದ್ದಾರೆ. ಅಂದಹಾಗೆ, ಈ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿರುವುದು ಸಮಂತಾ. ಈ ಹಾಡಿನಲ್ಲಿ ನರ್ತಿಸಲು ಬಾಲಿವುಡ್‌ನ ಬಹುಬೇಡಿಕೆಯ ನಟಿಯರ ಹೆಸರೆಲ್ಲ ಕೇಳಿಬಂತು. ಅಂತಿಮವಾಗಿ ಸಮಂತಾ ಹೆಸರು ಫೈನಲ್ ಆಯ್ತು. ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಅವರು ಬರೋಬ್ಬರಿ 1.5 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಹೈದರಾಬಾದ್‌ನಲ್ಲಿ ಅದ್ದೂರಿ ಕಾರ್ಯಕ್ರಮ
ಡಿ.17ರಂದು ವಿಶ್ವಾದ್ಯಂತ ‘ಪುಷ್ಪ’ ಸಿನಿಮಾವು ತೆರೆಗೆ ಬರುತ್ತಿರುವುದರಿಂದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಇದೀಗ ಡಿ.12ರಂದು ಸಂಜೆ 6 ಗಂಟೆಗೆ ‘ಪುಷ್ಪ’ ಚಿತ್ರವು ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅದರಲ್ಲಿ ಚಿತ್ರದ ಹೀರೋ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್, ‘ಡಾಲಿ’ ಧನಂಜಯ್, ಸುನೀಲ್, ಅನಸೂಯಾ, ಫಹಾದ್ ಫಾಸಿಲ್, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮುಂತಾದವರು ಇರಲಿದ್ದಾರೆ. ಚಿತ್ರದ ಹಾಡುಗಳಿಗೆ ಲೈವ್ ಪರ್ಫಾಮೆನ್ಸ್ ನೀಡಲಿದ್ದಾರೆ ಗಾಯಕರು.
ಅಲ್ಲು ಅರ್ಜುನ್, ರಶ್ಮಿಕಾ ನಟನೆಯ ‘ಪುಷ್ಪ’ ಟ್ರೈಲರ್ ಇಂದೇ ನಿಮ್ಮೆಲ್ಲರ ಮುಂದೆ..