Karnataka news paper

ತೈವಾನ್ ವಿಚಾರವಾಗಿ ಅತ್ಯಂತ ದೊಡ್ಡ ಬೆಲೆ ತೆರಬೇಕಾಗುತ್ತದೆ: ಅಮೆರಿಕಕ್ಕೆ ಚೀನಾ ಧಮ್ಕಿ!!


Reuters

ವಾಷಿಂಗ್ಟನ್: ತೈವಾನ್ ವಿಚಾರವಾಗಿ ಅತ್ಯಂತ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಜೋ ಬೈಡನ್ ಅಮೆರಿಕದ ಚುಕ್ಕಾಣಿ ಹಿಡಿದ ಮೇಲೆ ಚೀನಾ ಪ್ರಭಾವ ಅಧಿಕಗೊಳ್ಳುತ್ತಿದೆ. ಶಸ್ತ್ರಾಸ್ತ್ರ, ಮಾರುಕಟ್ಟೆ, ಆರ್ಥಿಕತೆ, ವೈದ್ಯಕೀಯ, ಗಗನಯಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗದಲ್ಲೂ ಅಮೆರಿಕ ತನ್ನ ಹಿಡಿತ ಇದೆ. ಆದರೆ, ಪ್ರಸಕ್ತ ವಿದ್ಯಮಾನಗಳಲ್ಲಿ ಚೀನಾ, ಅಮೆರಿಕಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ. ಮಾರುಕಟ್ಟೆ ವಿಸ್ತೀರ್ಣ, ಸಾಗರ ವ್ಯಾಪಾರ, ದಕ್ಷಿಣ ಏಷ್ಯಾದಲ್ಲಿ ಗಡಿ ಹಂಚಿಕೆ ವಿಚಾರದಲ್ಲಿ ನೆರೆ ರಾಷ್ಟ್ರಗಳೊಂದಿಗೆ ಚೀನಾ ಕ್ಯಾತಿ ತೆಗೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ತೈವಾನ್ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದೆ. ಈ ಮಧ್ಯೆ ತೈವಾನ್ ವಿಷಯದಲ್ಲಿ ಚೀನಾ ವಿದೇಶಾಂಗ ಸಚಿವ ವೆಂಗ್ ಯಿ ಅಮೆರಿಕಕ್ಕೆ ನೇರ ಬೆದರಿಕೆ ಹಾಕಿದ್ದಾರೆ. 

ಸಂದರ್ಶನವೊಂದರಲ್ಲಿ ವೆಂಗ್, ‘ತೈವಾನ್ ವಿಚಾರದಲ್ಲಿ ಅಮೆರಿಕದ ವರ್ತನೆ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿದೆ. ಅಮೆರಿಕದ ನೀತಿ ಇದೇ ರೀತಿ ಮುಂದುವರಿದರೆ ಆ ರಾಷ್ಟ್ರ ಭಾರೀ ಬೆಲೆ ತೆರಬೇಕಾಗುತ್ತದೆ. ಯಾವಾಗಲೂ ತೈವಾನ್ ಚೀನಾದ ಅಂಗವಾಗಿರುತ್ತದೆ. ಇದನ್ನು ವಿಶ್ವದ ಬೇರೇ ಬೇರೆ ರಾಷ್ಟ್ರಗಳ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದೇವೆ. ಜಗತ್ತಿನ ಯಾವ ಶಕ್ತಿಯೂ ತೈವಾನ್ ಅನ್ನು ಚೀನಾದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅಮೆರಿಕ ಯತ್ನಿಸುತ್ತಿರುವ ಎಲ್ಲ ರೀತಿಯ ಕ್ರಮಗಳು ಆ ರಾಷ್ಟ್ರಕ್ಕೆ ಸಾಕಷ್ಟು ಹಾನಿ ಉಂಟು ಮಾಡಲಿದೆ. ನಾವು ಯಾವುದೇ ಒತ್ತಡಕ್ಕೆ ಮಣಿಯಲ್ಲ. ತೈವಾನ್ ಗೆ ಒಂದೇ ಒಂದು ಮಾರ್ಗವಿದ್ದು, ಚೀನಾದ ಭಾಗವಾಗಬೇಕು. ಬೇರೆ ದಾರಿ ಇಲ್ಲ. ಈ ವಿಚಾರವನ್ನು ಚೀನಾ ಹಾಗೂ ತೈವಾನ್ ಅರ್ಥ ಮಾಡಿಕೊಳ್ಳಬೇಕಿದೆ ಎಂಬ ನೇರ ಎಚ್ಚರಿಕೆಯನ್ನು ವಾಂಗ್ ನೀಡಿದ್ದಾರೆ.

ಇರಾನ್‌ನಲ್ಲಿ ಚೀನಾದ ರಾಯಭಾರ ಕಚೇರಿ; ಮೂಕ ಪ್ರೇಕ್ಷಕನಾದ ಅಮೆರಿಕ
ಇನ್ನು ಇರಾನ್‌ನಲ್ಲಿಯೂ ಚೀನಾ ಸರ್ಕಾರ ತನ್ನ ಹಸ್ತಕ್ಷೇಪವನ್ನು ಕ್ರಮೇಣ ಹೆಚ್ಚಿಸುತ್ತಿದೆ. ಅಮೆರಿಕ ಆರ್ಥಿಕ ದಿಗ್ಬಂಧನದಿಂದ ಕಂಗಾಲಾಗಿರುವ ಇರಾನ್, ಚೀನಾದ ತೆಕ್ಕೆಯತ್ತ ಹೊರಳುತ್ತಿದೆ. ಈ ಬಗ್ಗೆ ಇರಾನ್ ಸರ್ಕಾರ ಅನೇಕ ಹೊಸ ನೀತಿಗಳನ್ನು ಕೈಗೊಳ್ಳುತ್ತಿದ್ದು, ಚೀನಾಕ್ಕೆ ಕೆಂಪು ಹಾಸಿಗೆಯ ಸ್ವಾಗತ ನೀಡುತ್ತಿದೆ. ಬಂದರು ನಗರವಾದ “ಬಂದರ್ ಅಬ್ಬಾಸ್‌”ನಲ್ಲಿ ಕಾನ್ಸುಲೇಟ್ ತೆರೆಯಲು ಬೀಜಿಂಗ್ ಅನುಮೋದನೆಯನ್ನು ಪಡೆದುಕೊಂಡಿದೆ. ಬಂದರ್ ಅಬ್ಬಾಸ್ ಕಡಲತೀರದ ರಾಜ್ಯವಾಗಿದ್ದು, ಹಾರ್ಮೋಜಾಗಾನ್‌ನ ಪ್ರಮುಖ ನಗರ ಮತ್ತು ವ್ಯಾಪಾರಿ ಕೇಂದ್ರವಾಗಿದೆ. ಈ ಬಂದರು ನಗರಿ ಮೇಲೆ ಚೀನಾ ಹಲವು ದಿನಗಳಿಂದ ಕಣ್ಣಿಟ್ಟಿತ್ತು. ಇದಕ್ಕಾಗಿ ಇರಾನ್ ಗೆ ಸಾಕಷ್ಟು ಪ್ರಮಾಣದಲ್ಲಿ ಚೀನಾ ಹಣದ ಆಮಿಷ ತೋರಿದೆ.

ಟೆಹ್ರಾನ್ ಟೈಮ್ಸ್ ಪ್ರಕಾರ, ಇರಾನ್ ಸರ್ಕಾರವು ಗುರುವಾರ ನಡೆಸಿದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ, ಬಂದರ್ ಅಬ್ಬಾಸ್‌ನಲ್ಲಿ ಕಾನ್ಸುಲೇಟ್ ತೆರೆಯಲು ಚೀನಾಕ್ಕೆ ಅನುಮೋದನೆ ನೀಡಲಾಯಿತು. ಕಳೆದ ಮಾರ್ಚ್ ನಲ್ಲಿ ಚೀನಾ ಮತ್ತು ಇರಾನ್ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರಡಿ ಎರಡೂ ದೇಶಗಳು ಹಲವು ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದ್ದವು. ಚೀನಾ ಹಾಗೂ ಇರಾನ್ ಮಧ್ಯೆದ ಒಪ್ಪಂದಗಳನ್ನು ಅಮೆರಿಕ ಗಮನಿಸುತ್ತಿದೆ.
 



Read more