Karnataka news paper

ಕಟ್ಟೀಮನಿ ಪ್ರತಿಷ್ಠಾನದ ಪ್ರಶಸ್ತಿಗೆ ಸಾರಾ ಅಬೂಬಕರ್ ಆಯ್ಕೆ


ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2021ನೇ ಸಾಲಿನ ಕಾದಂಬರಿ ವಿಭಾಗದ ಪ್ರಶಸ್ತಿಗೆ ಕಾದಂಬರಿಕಾರ್ತಿ ಹಾಗೂ ಪ್ರಗತಿಪರ ಚಿಂತಕಿ ಸಾರಾ ಅಬೂಬಕರ್ ಆಯ್ಕೆಯಾಗಿದ್ದಾರೆ.

‘ಜೀವಮಾನ ಸಾಧನೆ ಗುರುತಿಸಿ ಸಾರಾ ಅಬೂಬಕರ್‌ ಅವರಿಗೆ ಪ್ರಶಸ್ತಿ ನೀಡಲು ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ. ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. 2022ರ ಜನವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.



Read more from source