Karnataka news paper

ಹೊರ ರೋಗಿಗಳ ವಿಭಾಗದ ಮೇಲೆ ಭಾರಿ ಹೊರೆ ಬೀಳಲಿದೆ: ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ


ಹೈಲೈಟ್ಸ್‌:

  • ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ
  • ವೈದ್ಯಕೀಯ ಆರೈಕೆಯ ಹಠಾತ್ ಅಗತ್ಯ ಭಾರತಕ್ಕೆ ದೊಡ್ಡ ಸವಾಲಾಗಿ ಬರಲಿದೆ
  • ಐಸಿಯುಗಳಿಗಿಂತಲೂ ಜನರು ಹೊರ ರೋಗಿ ವಿಭಾಗಕ್ಕೆ ಹೆಚ್ಚು ಬರಲಿದ್ದಾರೆ
  • ಕೋವಿಡ್ ಪ್ರಕರಣಗಳ ಏರಿಕೆಯನ್ನು ಎದುರಿಸಲು ಈಗಲೇ ತಯಾರಿ ಮಾಡಬೇಕು

ಹೊಸದಿಲ್ಲಿ: ಓಮಿಕ್ರಾನ್ ತಳಿ ಬಿಕ್ಕಟ್ಟಿನ ನಡುವೆ ಭಾರತ ಎದುರಿಸಲಿರುವ ಅತ್ಯಂತ ದೊಡ್ಡ ಸವಾಲು ಎಂದರೆ ವೈದ್ಯಕೀಯ ಆರೈಕೆಯ ಹಠಾತ್ ಅಗತ್ಯವನ್ನು ಪೂರೈಸುವುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಕೋವಿಡ್ 19 ಪ್ರಕರಣಗಳ ಏರಿಕೆ ಬಹಳ ವೇಗವಾಗಿ ಇರಲಿದೆ. ಅನೇಕ ಜನರು ಕಾಯಿಲೆಗೆ ತುತ್ತಾಗಲಿದ್ದಾರೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಓಮಿಕ್ರಾನ್ ತಳಿಯು ಜಗತ್ತಿನಾದ್ಯಂತ ಹೊಸ ಆತಂಕಗಳನ್ನು ಮೂಡಿಸಿದೆ. ಹಾಗೆಯೇ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದೆ. ಇದು ಆಸ್ಪತ್ರೆಗಳಿಗಿಂತ ಹೊರ ರೋಗಿಗಳ ವಿಭಾಗಗಳಿಗೆ ಐಸಿಯುದಿಂದ ಮನೆಯಲ್ಲಿನ ಆರೈಕೆಯವರೆಗೆ ಹೊರೆಯನ್ನು ವರ್ಗಾವಣೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
Omicron: ಬರಲಿದೆ ಕೋವಿಡ್ ‘ಸುನಾಮಿ’, ನೆಲಕಚ್ಚಲಿದೆ ಆರೋಗ್ಯ ವ್ಯವಸ್ಥೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
‘ಜನರು ಚಿಂತೆಗೀಡಾಗಿದ್ದಾರೆ. ನಿಮ್ಮಲ್ಲಿ ಲಕ್ಷಣಗಳು ಇರದೇ ಇರಬಹುದು. ಆದರೆ ನೀವು ವೈದ್ಯರ ಜತೆಗೆ ಮಾತನಾಡಬೇಕಾಗುತ್ತದೆ. ನೀವು ಆರೋಗ್ಯ ಕಾರ್ಯಕರ್ತರನ್ನು ನೋಡಬೇಕಾಗುತ್ತದೆ, ಮತ್ತು ನಿಮಗೆ ಸಲಹೆ ಬೇಕಾಗುತ್ತದೆ. ಅದಕ್ಕಾಗಿ ನಾವು ಸಿದ್ಧತೆ ನಡೆಸಬೇಕಿದೆ’ ಎಂದಿದ್ದಾರೆ.

‘ಬಹುಶಃ ಟೆಲಿ ಹೆಲ್ತ್ ಮತ್ತು ಟೆಲಿ ಮೆಡಿಸಿನ್ ಸೇವೆಗಳನ್ನು ಹೆಚ್ಚಿಸುವುದಕ್ಕೆ ನಿಜಕ್ಕೂ ಸಮಯ ಬಂದಿದೆ ಎನಿಸುತ್ತಿದೆ. ಹೊರ ರೋಗಿಗಳ ಕ್ಲಿನಿಕ್‌ಗಳಲ್ಲಿ ಸಾಕಷ್ಟು ವೈದ್ಯರು ಮತ್ತು ದಾದಿಯರು ಇರುವಂತೆ ನೋಡಿಕೊಳ್ಳಬೇಕಿದೆ. ನಾವು ಜನರಿಗೆ ಸಾಧ್ಯವಾದಷ್ಟು ಹೆಚ್ಚು ಮನೆಯಲ್ಲಿಯೇ ಅಥವಾ ಪ್ರಾಥಮಿಕ ಆರೈಕೆ ಸಿಗುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
2022ಕ್ಕೆ ಕೊರೊನಾ ಅಂತ್ಯಗೊಳಿಸೋಣ: ದೃಢ ಸಂಕಲ್ಪ, ಸಂಘಟಿತ ಹೋರಾಟಕ್ಕೆ ಡಬ್ಲ್ಯೂಎಚ್‌ಒ ಕರೆ
‘ಈ ಪಿಡುಗಿನ ಸಂಪೂರ್ಣ ಹೊರೆಯು ತೀವ್ರವಾಗಿ ಅಸ್ವಸ್ಥರಾದವರಿಗಿಂತ ಐಸಿಯು ಹಾಗೂ ಆಸ್ಪತ್ರೆ ಬೆಡ್‌ಗಳ ಬದಲು, ಹೊರ ರೋಗಿಗಳು ಮತ್ತು ಗೃಹ ಆಧಾರಿತ ಸೇವೆಗಳ ಮೇಲೆ ಉಂಟಾಗಲಿದೆ. ಆದರೆ ಜನರು ನೆಮ್ಮದಿಯಿಂದ ಇರುವುದು ಮತ್ತು ಹೊಸ ತಳಿಯು ಸಾಮಾನ್ಯ ಶೀತದಂತೆ ಇರಲಿದ್ದು, ಚಿಂತೆ ಪಡುವ ಅಗತ್ಯವಿಲ್ಲ ಎಂದು ಭಾವಿಸುತ್ತಿರುವುದು ಕಳವಳಕಾರಿ. ನಾವು ಈ ಹಂತದಲ್ಲಿಯೇ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ’ ಎಂದು ಅವರು ಹೇಳಿದ್ದಾರೆ.



Read more