
ಬೀಜಿಂಗ್: ಚೀನಾ ಪೂರ್ವ ಭಾಗದ ಶಾನ್ಡಾಂಗ್ ಪ್ರಾಂತ್ಯದಲ್ಲಿ ಯಾನ್‌ತೆಯ್ ನಗರದ ಕರಾವಳಿ ಪ್ರದೇಶದಲ್ಲಿ ಭಾನುವಾರ ಸರಕು ಸಾಗಣೆ ಹಡಗೊಂದು ಮುಳುಗಿದ ಕಾರಣ ಅದರಲ್ಲಿದ್ದ ನಾಲ್ವರು ಸಾವಿಗೀಡಾಗಿದ್ದಾರೆ. ಇತರ ಏಳು ಮಂದಿ ಕಾಣೆಯಾಗಿದ್ದಾರೆ.
ನಾಪತ್ತೆಯಾಗಿರುವ ಏಳು ಮಂದಿಗಾಗಿ ಶೋಧ ನಡೆದಿದೆ ಎಂದು ಸಾರಿಗೆ ಸಚಿವಾಲಯದ ಬೈಹೈ ರಕ್ಷಣಾ ಘಟಕ ಹೇಳಿದೆ.
ಒಟ್ಟು 14 ಮಂದಿ ಚಾಲನಾ ಸಿಬ್ಬಂದಿ ಹಡಗಿನಲ್ಲಿದ್ದರು. ಈವರೆಗೆ ಮೂವರನ್ನು ರಕ್ಷಿಸಲಾಗಿದೆ ಎಂದು ಷಿನ್‌ಹುವಾ ಸುದ್ದಿಸಂಸ್ಥೆ ತಿಳಿಸಿದೆ.