Karnataka news paper

ವಿರುಷ್ಕಾ ಬಾಡಿಗಾರ್ಡ್‌ ‘ಸೋನು’ಗೆ ಕೋಟಿ ಗಟ್ಟಲೆ ವೇತನ!


ಹೈಲೈಟ್ಸ್‌:

  • ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ಅವರ ಬಾಡಿಗಾರ್ಡ್ ವೇತನ ಬಹಿರಂಗ.
  • ಬಾಡಿಗಾರ್ಡ್‌ ಪ್ರಕಾಶ್‌ ಸಿಂಗ್‌ಗೆ ಸಿಗುತ್ತಿದೆ ವಾರ್ಷಿಕವಾಗಿ ಕೋಟಿ ಗಟ್ಟಲೆ ಹಣ.
  • ಹೈ ಪ್ರೊಫೈಲ್‌ ಸೆಲೆಬ್ರಿಟಿಗಳ ಬಾಡಿಗಾರ್ಡ್‌ಗಳಿಗೆ ಹರಿಯುತ್ತಿದೆ ಹಣದ ಹೊಳೆ.

ಹೊಸದಿಲ್ಲಿ: ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಜನಮೆಚ್ಚುಗೆ ಗಿಟ್ಟಿಸಿರುವ ಜೋಡಿ ಆಗಿದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್‌ ಮತ್ತು ಬಾಲಿವುಡ್‌ ಬೆಡಗಿ ಅನುಷ್ಕಾ ಜೋಡಿಗೆ ಪ್ರತ್ಯೇಕ ಅಭಿಮಾನಿಗಳೇ ಇದ್ದಾರೆ.

ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಯನ್ನು ‘ವಿರುಷ್ಕಾ‘ ಎಂದೇ ಕರೆಯುವುದುಂಟು. ಆಗಾಗ ಈ ಜೋಡಿ ತಮ್ಮ ಸೋಷಿಯಲ್‌ ಮೀಡಿಯಾಗಳ ಮೂಲಕ ಕ್ಯೂಟ್‌ ಕಪಲ್‌ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

ಅಂದಹಾಗೆ ಈ ರೀತಿಯ ಹೈ ಪ್ರೊಫೈಲ್‌ ಸೆಲೆಬ್ರಿಟಿಗಳು ತಮ್ಮ ಖಾಸಗಿ ಜೀವನಕ್ಕೆ ದಕ್ಕೆಯಾಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸುತ್ತಾರೆ. ಪ್ರಮುಖವಾಗಿ ರಕ್ಷಣೆ ವಿಚಾರದಲ್ಲಿ ಬಾಡಿಗಾರ್ಡ್‌ಗಳ ನೇಮಕ ಮಾಡಿ ವಾರ್ಷಿಕವಾಗಿ ಕೋಟಿ ಕೋಟಿ ರೂ. ಮೊತ್ತದಲ್ಲಿ ಹಣದ ಹೊಳೆ ಹರಿಸುತ್ತಾರೆ. ವಿರುಷ್ಕಾ ಜೋಡಿ ಕೂಡ ತಮ್ಮ ಪರ್ಸನಲ್‌ ಬಾಟಿಗಾರ್ಡ್‌ಗೆ ಭಾರಿ ವೇತನ ನೀಡುತ್ತಿರುವುದು ಇದೀಗ ಬಹಿರಂಗವಾಗಿದೆ.

‘ವಿರಾಟ್‌ ಇಲ್ಲದೇ ಇದ್ದರೂ ರೋಹಿತ್‌ ಏಷ್ಯಾ ಕಪ್‌ ಗೆದ್ದುಕೊಟ್ಟಿದ್ದಾರೆ’ ಎಂದ ಗಂಗೂಲಿ!

ಅನುಷ್ಕಾ ಮತ್ತು ವಿರಾಟ್‌ ತಮ್ಮ ಪರ್ಸನಲ್‌ ಬಾಡಿ ಗಾರ್ಡ್‌ ಆಗಿ ಪ್ರಕಾಶ್‌ ಸಿಂಗ್‌ ಅಲಿಯಾಸ್‌ ಸೋನು ಎಂಬುವವರನ್ನು ನೇಮಕ ಮಾಡಿಕೊಂಡಿದ್ದಾರೆ. ವಿರುಷ್ಕಾ ಜೋಡಿ ಎಲ್ಲಿಗೇ ಹೊರಟರು ಅವರ ಹಿಂದೆ ಪ್ರಕಾಶ್‌ ಸಿಂಗ್‌ ಅವರನ್ನು ಕಾಣಬಹುದಾಗಿದೆ. ಪ್ರಕಾಶ್‌ ಸಿಂಗ್‌ ಅವರ ಈ ಸೇವೆ ಸಲುವಾಗಿ ವಿರುಷ್ಕಾ ಜೋಡಿ ವಾರ್ಷಿಕವಾಗಿ ಬರೋಬ್ಬರಿ 1.2 ಕೋಟಿ ರೂ. ವೇತನ ನೀಡುತ್ತಿದೆ ಎಂದು ಡಿಎನ್‌ಎ ವರದಿ ಮಾಡಿದೆ.

ಸೆಲೆಬ್ರಿಟಿ ಬಾಡಿಗಾರ್ಡ್‌ಗಳ ಈ ಭಾರಿ ವೇತನ ಹಲವು ಕಾರ್ಪೊರೇಟ್‌ ಸಂಸ್ಥೆಗಳ ಸಿಇಒಗಳಿಗಿಂತಲೂ ಅಧಿಕ ಎಂಬುದು ಗಮನಾರ್ಹ. ಅಂದಹಾಗೆ ಅನುಷ್ಕಾ ಅವರೊಟ್ಟಿಗೆ ಬಾಡಿಗಾರ್ಡ್‌ ಆಗಿ ಸೋನು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅನುಷ್ಕಾ 2017ರಲ್ಲಿ ವಿರಾಟ್‌ ಕೊಹ್ಲಿ ಅವರನ್ನು ವಿವಾಹವಾದರು. ಅಂದಹಾಗೆ ವಿರಾಟ್‌ಗೆ ಪ್ರತ್ಯೇಕ ಬಾಡಿಗಾರ್ಡ್‌ಗಳು ಕೂಡ ಇದ್ದಾರೆ.

ವಿರಾಟ್‌ ಕೊಹ್ಲಿ ವಿಕೆಟ್‌ ಪಡೆದೇ ಪಡೆಯುತ್ತೇನೆಂದ ಶ್ರೀಲಂಕಾದ ಸ್ಪಿನ್ನರ್‌!

ಅನುಷ್ಕಾ ಅವರ ಬಾಡಿಗಾರ್ಡ್‌ ಆಗಿ ಸೇವೆ ಸಲ್ಲಿಸುತ್ತಿರುವ ಸೋನು ಅವರನ್ನು ಕುಟುಂಬದ ಸದಸ್ಯರಂತೆ ವಿರುಷ್ಕಾ ಜೋಡಿ ಕಾಣುತ್ತದೆ. ಕೊರೊನಾ ವೈರಸ್‌ ಸಂಕಷ್ಟದ ಸಮಯದಲ್ಲೂ ಪಿಪಿಇ ಕಿಟ್‌ ಧರಿಸಿಯೇ ಸೋನು ಭದ್ರತೆ ಕೆಲಸ ನಿಭಾಯಿಸಿದ್ದರು ಎಂಬುದು ವಿಶೇಷ.

ವಿವಾಹ ವಾರ್ಷಿಕೋತ್ಸವ ಆಚರಿಸಿದ ವಿರುಷ್ಕಾ!
ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಡಿಸೆಂಬರ್‌ 11ರಂದು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಜೋಡಿಗೆ ವಮಿಕಾ ಹೆಸರಿನ ಮಗಳಿದ್ದಾರೆ. ವಿರುಷ್ಕಾ ಜೋಡಿಯ ಮಗಳ ಮುಖವನ್ನು ಈವರೆಗೆ ಸಾರ್ವಜನಿಕವಾಗಿ ಬಹಿರಂಗ ಪಡಿಸಲಾಗಿಲ್ಲ. ಈ ವಿಚಾರದಲ್ಲಿ ಖಾಸಗಿತನ ಕಾಯ್ದುಕೊಂಡು ಬಂದಿದ್ದಾರೆ.

ಓಡಿಐ ನಾಯಕತ್ವದಿಂದ ಕೊಹ್ಲಿ ಕೆಳಗಿಳಿಸಿದ ನಿರ್ಧಾರ ಸರಿಯಿದೆ’: ಕೀರ್ತಿ ಅಜಾದ್‌!

ಒಡಿಐ ನಾಯಕತ್ವ ಕಳೆದುಕೊಂಡ ಕೊಹ್ಲಿ
ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೂ ಮುನ್ನ ಖುದ್ದಾಗಿ ಭಾರತ ಟಿ20 ತಂಡದ ನಾಯಕತ್ವ ಬಿಟ್ಟು ಮಾಡಿದ ತಪ್ಪಿಗೆ ಭಾರಿ ಬೆಲೆ ತೆತ್ತಿರುವ ವಿರಾಟ್‌ ಕೊಹ್ಲಿ ಈಗ ಭಾರತ ಒಡಿಐ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಭಾರತ ಟೆಸ್ಟ್ ತಂಡದ ನಾಯಕನಾಗಿ ಮಾತ್ರವೇ ಮುಂದುವರಿಯಲಿದ್ದು, ಒಡಿಐ ಮತ್ತು ಟಿ20 ತಂಡಗಳಲ್ಲಿ ನೂತನ ಕಪ್ತಾನ ರೋಹಿತ್‌ ಶರ್ಮಾ ಅವರ ಅಡಿಯಲ್ಲಿ ಬ್ಯಾಟ್ಸ್‌ಮನ್‌ ಆಗಿ ಸೇವೆ ಸಲ್ಲಿಸಲಿದ್ದಾರೆ. ಭಾರತ ತಂಡ ಡಿ.16ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ತಲಾ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನಾಡಲಿದೆ.



Read more