Karnataka news paper

ಬಿಳಿ ಕೂದಲಿಟ್ಟುಕೊಂಡು ಹಸೆಮಣೆ ಏರಿದ ನಟನ ಮಗಳು; ಸಮಸ್ಯೆಯೇ ಬರಲಿಲ್ಲ ಎಂದ ದಿಲೀಪ್ ಜೋಶಿ


ಹೈಲೈಟ್ಸ್‌:

  • ಬಿಳಿ ಕೂದಲಿನಲ್ಲಿ ಹಸೆಮಣೆ ಏರಿದ ನಿಯತಿ ಜೋಶಿ
  • ಮಗಳ ಬಗ್ಗೆ ಹೆಮ್ಮೆಪಟ್ಟುಕೊಂಡ ನಟ ದಿಲೀಪ್ ಜೋಶಿ
  • ನಿಯತಿ ಸಹಜತೆ ಮೆಚ್ಚಿದ ಜನರು

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಿಳಿ ಕೂದಲಿಟ್ಟುಕೊಂಡು ಹಸೆಮಣೆ ಏರಿದ್ದ ಹುಡುಗಿಯೊಬ್ಬಳ ಫೋಟೋ ಭಾರೀ ವೈರಲ್ ಆಗಿತ್ತು. ನಟ ದಿಲೀಪ್ ಜೋಶಿ ಪುತ್ರಿ ಯಾವುದೇ ಹೇರ್ ಕಲರ್ ಮಾಡಿಸಿಕೊಳ್ಳದೆ ಸಹಜವಾಗಿಯೇ ಮಧು ಮಗಳಾಗಿ ತಾಳಿ ಕಟ್ಟಿಸಿಕೊಂಡಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕುರಿತು ನಟ ದಿಲೀಪ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಖವಾಡ ಹಾಕಿಕೊಳ್ಳೋದು ಬೇಡ: ದಿಲೀಪ್ ಜೋಶಿ

ಈ ಕುರಿತು ಮಾತನಾಡಿರುವ ದಿಲೀಪ್ ಜೋಶಿ ಅವರು, “ಬಿಳಿ ಕೂದಲು ಇಟ್ಟುಕೊಂಡು ನನ್ನ ಮಗಳು ಹಸೆಮಣೆ ಏರಿದ್ದು ನಮಗೆ ಸಮಸ್ಯೆಯೇ ಆಗಲಿಲ್ಲ. ಈ ವಿಚಾರಕ್ಕೆ ಜನರು ಪ್ರತಿಕ್ರಿಯೆ ನೀಡುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ಈ ಬಗ್ಗೆ ನಮ್ಮ ಮನೆಯಲ್ಲಿ ಎಂದಿಗೂ ಚರ್ಚೆಯೂ ಆಗಿರಲಿಲ್ಲ. ಎಲ್ಲರೂ ಮಗಳ ನಿರ್ಧಾರಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿರೋದು ಖುಷಿ ತಂದಿದೆ. ನನ್ನ ಮಗಳು ಅನೇಕರಿಗೆ ಪ್ರೇರಣೆ ನೀಡುವಂತೆ ಮಾಡಿದ್ದಾಳೆ ಎಂದು ನನಗೆ ಖುಷಿಯಾಗಿದೆ. ಮಾಸ್ಕ್ ಹಾಕಿಕೊಳ್ಳುವ ಬದಲು ನಾವು ಹೇಗಿದ್ದೇವೋ ಹಾಗೆ ನಮ್ಮನ್ನು ಪ್ರದರ್ಶಿಸಿಕೊಳ್ಳೋದು ಉತ್ತಮ” ಎಂದಿದ್ದಾರೆ.

ಕ್ಯಾಮರಾ ಮುಂದೆ ಬರಲು ನಿಯತಿ ಇಷ್ಟಪಡಲ್ಲ

ದಿಲೀಪ್ ಜೋಶಿ ಮಗಳು ನಿಯತಿ ಎಂದಿಗೂ ಕ್ಯಾಮರಾ ಮುಂದೆ ಬಂದಿರಲಿಲ್ಲ. ಮದುವೆ ಫೋಟೋ ವೈರಲ್ ಆಗಿದ್ದು ನಿಯತಿಗೆ ದೊಡ್ಡ ಶಾಕ್ ಆಗಿದೆಯಂತೆ. “ಆರಂಭದಲ್ಲಿ ಜನರು ಅವಳ ಬಗ್ಗೆ ಮಾತನಾಡಿದಾಗ ನಿಯತಿ ಅಷ್ಟೇನೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಅವಳು ಲೊ ಪ್ರೊಫೈಲ್ ಇಟ್ಟುಕೊಳ್ಳಲು ಬಯಸುತ್ತಾಳೆ. ಆದರೆ ಸೋಶಿಯಲ್ ಮೀಡಿಯಾವನ್ನು ನಾವು ಕಂಟ್ರೋಲ್ ಮಾಡಲು ಆಗೋದಿಲ್ಲ. ಆದರೆ ಈಗ ವೈರಲ್ ಆಗಿರೋದು ಪಾಸಿಟಿವ್ ವಿಚಾರ. ನಾಲ್ಕು ಜನರನ್ನು ಪ್ರೇರಣೆ ಆಗುವಂತೆ ಬಾಳಿದರೆ ಅದೇ ಶ್ರೇಷ್ಠ ಎಂದು ನಾನು ಭಾವಿಸುತ್ತೇನೆ” ಎಂದು ದಿಲೀಪ್ ಜೋಶಿ ಹೇಳಿದ್ದಾರೆ.

ಪ್ರತಿ ಡ್ರೆಸ್‌ನಲ್ಲಿಯೂ ಟ್ರೋಲ್ ಆಗುತ್ತಿರುವ ಬಿಗ್ ಬಾಸ್ ಸ್ಪರ್ಧಿ; ಔಟ್ ಆಫ್ ಫ್ಯಾಷನ್ ಎಂದ ನೆಟ್ಟಿಗರು

ಎಲ್ಲರ ಮಧ್ಯೆ ವಿಭಿನ್ನವಾಗಿ ಕಾಣುವ ನಿಯತಿ ಜೋಶಿ
ನಾವು ಹೇಗಿದ್ದೇವೆಯೋ ಹಾಗೆ ನಮ್ಮನ್ನು ಪ್ರದರ್ಶನ ಮಾಡಿಕೊಳ್ಳುವುದು ಒಳ್ಳೆಯದು, ಅದನ್ನು ನಿಯತಿ ಸಾಬೀತು ಮಾಡಿದ್ದಾರೆ. ನಮ್ಮನ್ನು ನಾವು ನಂಬೋದು ಉತ್ತಮ ಎಂದು ಕೆಲವರು ನಿಯತಿ ಮದುವೆ ಬಗ್ಗೆ ಕಾಮೆಂಟ್ ಮಾಡಿದ್ದರು. ಕೆಲವರು ಯಾಕೆ ಬಿಳಿ ಕೂದಲು ಅಂತ ಕೇಳಿದ್ದಾರೆ, ಅದಕ್ಕೆ ಇನ್ನೊಬ್ಬ ನೆಟ್ಟಿಗರಿಂದ ಉತ್ತರವೂ ಸಿಕ್ಕಿತ್ತು. ಸಾಮಾನ್ಯವಾಗಿ ಯಾವುದೇ ಹುಡುಗಿಗೆ ಮದುವೆಯಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದಿರುತ್ತದೆ. ಅಂತೆಯೇ ವಿಧ ವಿಧವಾದ ಮೇಕಪ್ ಮಾಡಿಕೊಳ್ಳುವುದುಂಟು, ಡಯೆಟ್ ಮಾಡುತ್ತ ಸ್ಲಿಮ್ ಆಗುತ್ತಾರೆ, ಮದುವೆ ದಿನ ಹತ್ತಿರ ಬಂದರಂತೂ ಹೇಗೆ ಚೆನ್ನಾಗಿ ಕಾಣಿಸಿಕೊಳ್ಳಲು ಸಾಧ್ಯವೋ ಅಷ್ಟು ಚೆನ್ನಾಗಿ ಕಾಣಿಸಿಕೊಳ್ಳಲು ಪ್ರಯತ್ನಮಾಡುತ್ತಾರೆ. ಆದರೆ ಅವರಿಗೆಲ್ಲ ಹೋಲಿಕೆ ಮಾಡಿ ನೋಡಿದರೆ ನಿಯತಿ ನಿಜಕ್ಕೂ ವಿಭಿನ್ನವಾಗಿ ಕಾಣುತ್ತಾರೆ. ನಿಯತಿ ಸಹಜವಾಗಿ ಇರೋದು ಅನೇಕರಿಗೆ ಮೆಚ್ಚುಗೆಯಾಗಿದೆ.

ನವರಾತ್ರಿಗೆ ರಿಲೀಸ್ ಮಾಡಿದ ಹಾಡಿನಲ್ಲಿ ದೇವಿ ಪದ ಬಳಕೆ; ಬಿಗ್ ಬಾಸ್ ಸ್ಪರ್ಧಿಗೆ ಪ್ರಾಣ ಬೆದರಿಕೆ

ಸಿನಿಮಾ, ಧಾರಾವಾಹಿಗಳಲ್ಲಿ ದಿಲೀಪ್ ಜೋಶಿ ನಟನೆ
ಮೈನೆ ಪ್ಯಾರ್ ಕಿಯಾ ಸಿನಿಮಾದಲ್ಲಿ ದಿಲೀಪ್ ಜೋಶಿ ನಟಿಸಿದ್ದರು. ಅಂದಿನಿಂದ ಅವರು ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. Taarak Mehta Ka Ooltah Chashmah ಶೋನಲ್ಲಿ ದಿಲೀಪ್ ಜೋಶಿ ನಟಿಸಿದ್ದಾರೆ. “ಇದೊಂದು ಕಾಮಿಡಿ ಶೋ. ಇದನ್ನು ದಿಲೀಪ್ ಬಹಳ ಎಂಜಾಯ್ ಮಾಡಿಕೊಂಡು ಮಾಡುತ್ತಿದ್ದಾರಂತೆ. ನನಗೆ ಕೆಲಸದಲ್ಲಿ ಎಂಜಾಯ್‌ಮೆಂಟ್, ಆಸಕ್ತಿ ಇಲ್ಲ ಎಂದರೆ ನಾನು ಮುಂದಕ್ಕೆ ಹೋಗ್ತೀನಿ” ಎಂದು ದಿಲೀಪ್ ಜೋಶಿ ಹೇಳಿದ್ದಾರೆ.



Read more