Karnataka news paper

ಕೊಪ್ಪಳ: ಆಂಜನಾದ್ರಿ ಬೆಟ್ಟಕ್ಕೆ ಭಕ್ತರ ದಂಡು, ಆದಾಯ ಗಣನೀಯ ಏರಿಕೆ


ಕೊಪ್ಪಳ: ದೇಶದಾದ್ಯಂತ ಭಕ್ತರನ್ನು ಹೊಂದಿರುವ ಆಂಜನೇಯನ ಜನ್ಮದ ದೇವಸ್ಥಾನಕ್ಕೆ ಒಂದೇ ತಿಂಗಳಲ್ಲಿ 18 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ, ಹಲವು ನಿರ್ಬಂಧದ ಮಧ್ಯೆ ದಾಖಲೆ ಪ್ರಮಾಣದ ಹಣವು ಆಂಜನೇಯನ ಹುಂಡಿಯಲ್ಲಿ ಸಂಗ್ರಹವಾಗದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಬೆಟ್ಟದಲ್ಲಿರುವ ಆಂಜನೇಯನ ದೇವಸ್ಥಾನವು ಹನುಮನ ಜನ್ಮ ಸ್ಥಳವಾಗಿದೆ, ಈ ಸ್ಥಳಕ್ಕೆ ಕಳೆದ 6- 7 ವರ್ಷದಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಅಂಜನಾದ್ರಿಗೆ ಈಗ ನಿತ್ಯ ಜನ ಜಾತ್ರೆ ಸೇರುತ್ತದೆ ಇದಕ್ಕೆ ಸಾಕ್ಷಿ ಎಂಬಂತೆ ಆಂಜನೇಯನ ಹುಂಡಿಗೆ ಈ ತಿಂಗಳು 1798498 ರೂಪಾಯಿ ಸಂಗ್ರಹವಾಗಿರುವುದು.

ನ್ಯೂ ಇಯರ್‌ ಆಚರಣೆಗೆ ಬ್ರೇಕ್‌! ಕೊಪ್ಪಳದಲ್ಲಿ ಕೇಕ್‌ ಮಾರಾಟದಲ್ಲಿ ಇಳಿಕೆ, ಬೇಕರಿ ಮಾಲೀಕರಿಗೆ ನಷ್ಟ!

ಕಳೆದ ನವಂಬರ್ 30 ರಂದು ಆಂಜನೇಯ ಹುಂಡಿ ಎಣಿಕೆ ಮಾಡಲಾಗಿತ್ತು, ಆಗ ಲಾಕ್ ಡೌನ್ ನಂತರ 56 ದಿನಗಳಲ್ಲಿ ಹುಂಡಿಯಲ್ಲಿ ಒಟ್ಟು 2348065 ರೂಪಾಯಿ ಸಂಗ್ರಹವಾಗಿತ್ತು, ಈಗ ಡಿಸೆಂಬರ್ ತಿಂಗಳೊಂದರಲ್ಲಿ 1798498 ರೂಪಾಯಿ ಹಾಗು 5 ವಿದೇಶ ನಾಣ್ಯಗಳು ಸಂಗ್ರಹವಾಗಿದೆ.

ಗಂಗಾವತಿ ತಹಸೀಲ್ದಾರ ವಿಎಚ್ ಹೊರಪೇಟಿ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಮಾಡಲಾಯಿತು. ಈಗ ಅಂಜನಾದ್ರಿಯ ಜಗದ್ವಿಖ್ಯಾತವಾಗುತ್ತಿದೆ, ಈ ಮಧ್ಯೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ‌ ದಿನಗಳಲ್ಲಿ ಅಂಜನಾದ್ರಿಯನ್ನು ಆಯೋದ್ಯೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಯೋಧರ ತಾಯಂದಿರ ಪಾದಪೂಜೆ ಮಾಡಿದ ಯುವ ಬ್ರಿಗೇಡ್!

ಈ ಎಲ್ಲಾ ಕಾರಣಕ್ಕಾಗಿ ದಿನೇ ದಿನೇ ಅಂಜನಾದ್ರಿಗೆ ಬರುವ ಭಕ್ತ ಸಂಖ್ಯೆ ದ್ವಿಗುಣವಾಗುತ್ತಿದೆ, ಬರುವ ದಿನಗಳಲ್ಲಿ ಆಂಜನೇಯನ ಹುಂಡಿಗೆ ಇನ್ನಷ್ಟು ಅಪಾರ ಪ್ರಮಾಣದ ಧನ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ಅಂಜನಾದ್ರಿ ಬೆಟ್ಟ

ಅಂಜನಾದ್ರಿ ಬೆಟ್ಟ



Read more