Karnataka news paper

ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಟ್ರ್ಯಾಕ್ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಂತ್ರಜ್ಞಾನದ ಮೊರೆ!


The New Indian Express

ಬೆಂಗಳೂರು: ದಿನಸಿ ಸಾಮಾನಿನ ಪಟ್ಟಿಯಷ್ಟು ಉದ್ದದ ಟ್ರಾಫಿಕ್ ಉಲ್ಲಂಘನೆಗಳ ಸರಮಾಲೆಯನ್ನು ಹೊಂದಿರುವ ವಾಹನ ಸವಾರರು ಇನ್ನುಮುಂದೆ ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ನಗರದಲ್ಲಿ ಓಡಾಡುವುದು ಕಷ್ಟಕರವಾಗಲಿದೆ. ಅದಕ್ಕೆ ಕಾರಣ ಸಂಚಾರಿ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನವೊಂದಕ್ಕೆ ಮೊರೆ ಹೋಗಿರುವುದು. 

ಇದನ್ನೂ ಓದಿ: ಸಂವಹನದ ಕೊರತೆ ಎಡವಟ್ಟು; ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಸಿಎಂ ಬೆಂಗಾವಲು ವಾಹನ

ಈ ನೂತನ ತಾಂತ್ರಿಕ ವ್ಯವಸ್ಥೆ ರಸ್ತೆ ಮೇಲೆ ಸಾಗುತ್ತಿರುವ ವಾಹನದ ನಂಬರ್ ಪ್ಲೇಟನ್ನು ಗಮನಿಸಿ, ಆ ನಂಬರಿನಲ್ಲಿ ದಂಡ ಶುಲ್ಕ ಬಾಕಿ ಇರುವ ಬಗ್ಗೆ ಜಾಲಾಡುತ್ತದೆ. ಒಂದು ವೇಳೆ ದಂಡ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ ಅದೇ ರಸ್ತೆಯಲ್ಲಿ ಮುಂದೆ ನಿಂತಿರುವ ಸಂಚಾರ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಹೀಗಾಗಿ ಇನ್ನುಮುಂದೆ ಸಂಚಾರಿ ಪೊಲೀಸರು ದಂಡ ಶುಲ್ಕ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಮಾತ್ರವೇ ತಡೆದು ನಿಲ್ಲಿಸುವುದು ಸಾಧ್ಯವಾಗಲಿದೆ. 

ಇದನ್ನೂ ಓದಿ: ಇಂಥವರಿಂದಲೇ ಜಗತ್ತು ಸುಂದರವಾಗಿದೆ: ಫ್ರೆಂಡ್ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್ ಗೆ ಸಚಿನ್ ಭಾವನಾತ್ಮಕ ಸಂದೇಶ

ಈ ನೂತನ ತಾಂತ್ರಿಕತೆ ಉದ್ಘಾಟ್ಘನಾ ಸಮಾರಂಭದಲ್ಲಿ ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ ಸಂಚಾರ ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನದ ನೆರವು ಪಡೆದುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ ಬೆಂಗಳೂರು ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡ ಶುಲ್ಕದ ಒಟ್ಟು ಮೊತ್ತ ನೂರಾರು ಕೋಟಿ ರೂ.ಗಳಷ್ಟಿದೆ ಎಂದರು.

ಇದನ್ನೂ ಓದಿ: ನಗರದ ಜೆಸಿ ರಸ್ತೆಯಲ್ಲಿ ದಿಢೀರ್ ಭೂಕುಸಿತದಿಂದ ಗುಂಡಿ ನಿರ್ಮಾಣ: ವಾಹನ ಸಂಚಾರ ಅಸ್ತವ್ಯಸ್ತ



Read more