Karnataka news paper

ಜನಪ್ರಿಯ ಧಾರಾವಾಹಿ ವಿರುದ್ಧ ದೂರು ದಾಖಲು; ವಿವಾದಕ್ಕೆ ಕಾರಣವಾಯ್ತು ಆ ದೃಶ್ಯ


ಹೈಲೈಟ್ಸ್‌:

  • ಧಾರಾವಾಹಿಯಲ್ಲಿನ ದೃಶ್ಯ ನೋಡಿ ಸಿಟ್ಟಾದ ಪ್ರೇಕ್ಷಕರು
  • ಧಾರಾವಾಹಿ ತಂಡದ ವಿರುದ್ಧ ದೂರು ದಾಖಲಾಯ್ತು
  • ಧಾರಾವಾಹಿಯಲ್ಲಿ ದೂರು ನೀಡುವಂತಹ ಕಂಟೆಂಟ್ ಏನಿತ್ತು?

ಜನಪ್ರಿಯ ಧಾರಾವಾಹಿ ವಿರುದ್ಧ ದೂರು ದಾಖಲಾಗಿದೆ. ಚೆನ್ನೈ ಪೊಲೀಸ್ ಕಮಿಷನರ್ ಆಫೀಸ್‌ನಲ್ಲಿ ‘ಭಾಗ್ಯಲಕ್ಷ್ಮೀ‘ ಧಾರಾವಾಹಿ ವಿರುದ್ಧ ದೂರು ನೀಡಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಧಾರಾವಾಹಿ ಪ್ರೋಮೋ ನೋಡಿದವರು ಸಿಟ್ಟಾಗಿ ದೂರು ನೀಡಿದ್ದಾರೆ. ಹಾಗಾದರೆ ಅದರಲ್ಲಿ ಏನಿತ್ತು?

ಧಾರಾವಾಹಿಯ ಪ್ರೋಮೋದಲ್ಲಿ ಏನಿತ್ತು?
ಈ ಪ್ರೋಮೋನಲ್ಲಿ ಶಾಲೆಯಲ್ಲಿ ಹುಡುಗಿಗೆ ಟೀಚರ್ ಲೈಂಗಿಕ ದೌರ್ಜನ್ಯ ನೀಡುತ್ತಿದ್ದು, ಅದರಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಹೀಗಾಗಿ ನಿರ್ದೇಶಕರು, ಧಾರಾವಾಹಿ ತಂಡದ ವಿರುದ್ಧ ದೂರು ದಾಖಲಿಸಲಾಗಿದೆ. ಈ ದೃಶ್ಯವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗಿದೆ. ಈ ದೃಶ್ಯ ಟಿವಿಯಲ್ಲಿ ಪ್ರಸಾರ ಮಾಡಿದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಬಹುಬೇಗ ವೈರಲ್ ಆಗುತ್ತಿದೆ. ಹೀಗಾಗಿ ತಕ್ಷಣ ಆ ಧಾರಾವಾಹಿ ದೃಶ್ಯ ತೆಗೆದು ಹಾಕಬೇಕು ಎಂದು ಹೇಳಲಾಗುತ್ತಿದೆ.

ವಿಜಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿಗೆ ಇನ್ನೂ ಎರಡು ಹೆಸರಿದೆ

Telecom Regulatory Authority of India ಹಾಗೂ IBಗೆ ಈ ಕೇಸ್‌ನ್ನು ವರ್ಗಾವಣೆ ಮಾಡಲಾಗಿದೆ. ರೇಷ್ಮಾ ಪಸುಪಲೆಟಿ ( Reshma Pasupuleti ), ನೇಹಾ ಮೆನನ್, ಕೆ ಎಸ್ ಸುಚಿತ್ರಾ, ಪ್ರಿಯಾ, ರಿತಿಕಾ ತಮಿಳ್ ಸೆಲ್ವಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. Bhakyalakshmi, Baakiyalakshmi ಎಂದು ಕೂಡ ಈ ಧಾರಾವಾಹಿಯನ್ನು ಕರೆಯಲಾಗುತ್ತದೆ. ತಮಿಳಿನ ವಿಜಯ ಟಿವಿಯಲ್ಲಿ 2020ರಿಂದ ಈ ಧಾರಾವಾಹಿ ಪ್ರಸಾರ ಆಗುತ್ತಲಿದೆ. ಶಿವ ಶೇಖರ್ ಈ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಸುಚಿತ್ರಾ ಎಂಬುವವರು ಈ ಧಾರಾವಾಹಿಯಲ್ಲಿ ಭಾಗ್ಯಲಕ್ಷ್ಮೀ ಪಾತ್ರ ಮಾಡುತ್ತಿದ್ದಾರೆ.

ಬಿಳಿ ಕೂದಲಿಟ್ಟುಕೊಂಡು ಹಸೆಮಣೆ ಏರಿದ ನಟನ ಮಗಳು; ಸಮಸ್ಯೆಯೇ ಬರಲಿಲ್ಲ ಎಂದ ದಿಲೀಪ್ ಜೋಶಿ

ಇಂತಿ ನಿಮ್ಮ ಆಶಾ‘ ಧಾರಾವಾಹಿಯ ರಿಮೇಕ್ ಇದು ( inthi nimma asha serial )
ಕನ್ನಡದ ‘ಇಂತಿ ನಿಮ್ಮ ಆಶಾ’ ಧಾರಾವಾಹಿಯ ರಿಮೇಕ್ ಇದಾಗಿದ್ದು, ತೆಲುಗು, ಮರಾಠಿ, ಮಲಯಾಳಂನಲ್ಲಿಯೂ ಪ್ರಸಾರವಾಗುತ್ತಿದೆ. ಮಲಯಾಳಂನಲ್ಲಿ ಈ ಧಾರಾವಾಹಿ ಬಹಳ ಕಡಿಮೆ ಸಮಯದಲ್ಲಿ ನಂಬರ್ 1 ಸ್ಥಾನ ಪಡೆದಿದೆ. ‘Kalyana Veedu’ ಎಂಬ ಶೋನಲ್ಲಿಯೂ ಕೂಡ ಕೆಲ ತಿಂಗಳುಗಳ ಹಿಂದೆ ಗ್ಯಾಂಗ್ ರೇಪ್ ಕುರಿತಂತೆ ಎಪಿಸೋಡ್ ಪ್ರಸಾರ ಮಾಡಲಾಗಿತ್ತು. ಆಗಲೂ ಕೂಡ ಇದೇ ರೀತಿಯಲ್ಲಿ ಕೇಸ್ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ಈ ದೃಶ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು, ಅಷ್ಟೇ ಅಲ್ಲದೆ ಕ್ಷಮೆ ಕೇಳುವಂತೆ ತೀರ್ಪು ಹೊರಡಿಸಿತ್ತು. ಆದರೆ ಈ ಬಗ್ಗೆ ಧಾರಾವಾಹಿ ತಂಡವಾಗಲೀ, ಟಿವಿ ವಾಹಿನಿಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

6 ತಿಂಗಳ ಗರ್ಭಿಣಿಯಾಗಿದ್ರೂ ಧಾರಾವಾಹಿ ಶೂಟಿಂಗ್ ತಪ್ಪಿಸುತ್ತಿಲ್ಲ ನಟಿ ಪೂಜಾ ಬ್ಯಾನರ್ಜಿ

ಪ್ರೇಕ್ಷಕರ ಮನವಿ ಏನು?
ಇತ್ತೀಚೆನ ದಿನಗಳಲ್ಲಿ ಸಿನಿಮಾಗಳಂತೆ ಧಾರಾವಾಹಿಗಳು ಅದ್ದೂರಿಯಾಗಿ ಪ್ರಸಾರ ಆಗುತ್ತಿವೆ, ಹಾಗೆಯೇ ಕಂಟೆಂಟ್ ಕೂಡ ಸ್ವಲ್ಪ ಬೋಲ್ಡ್ ಆಗಿರುತ್ತದೆ. ಮಕ್ಕಳು ಕೂಡ ಪಾಲಕರ ಜೊತೆ ಧಾರಾವಾಹಿ ನೋಡುವುದರಿಂದ ಅಶ್ಲೀಲ, ಅಸಭ್ಯವಾದ ರೀತಿಯಲ್ಲಿ ಎಪಿಸೋಡ್ ಇರಬಾರದು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.



Read more