The New Indian Express
ನವದೆಹಲಿ: ಕನ್ನಡದ ಡಿಎಸ್ ನಾಗಭೂಷಣ್, ಖ್ಯಾತ ಲೇಖಕಿ ನಮಿತಾ ಗೋಖಲೆ, ಟಿಎಂಸಿ ಶಾಸಕ ಬ್ರಾತ್ಯಾ ಬಸು ಮತ್ತು ಖ್ಯಾತ ಪಂಜಾಬಿ ಬರಹಗಾರ ಖಾಲಿದ್ ಹುಸೇನ್ ಸೇರಿದಂತೆ 20 ಮಂದಿಯ ಹೆಸರನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಘೋಷಿಸಲಾಗಿದೆ.
ಡಿಎಸ್ ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇನ್ನು ಬಸು ಬೇವಿನ ಗಿಡದ ಅವರ ಓಡಿ ಹೋದ ಕೃತಿಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ತೊಗಲ ಚೀಲದ ಕರ್ಣ ಮಹಾ ಕಾವ್ಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಏಳು ಕವನ ಸಂಕಲನಗಳು, ಎರಡು ಕಾದಂಬರಿಗಳು, ಐದು ಸಣ್ಣ ಕಥೆಗಳು, ಎರಡು ನಾಟಕಗಳು ಮತ್ತು 20 ಭಾರತೀಯ ಭಾಷೆಗಳಲ್ಲಿ ಜೀವನ ಚರಿತ್ರೆ, ಆತ್ಮಚರಿತ್ರೆ, ವಿಮರ್ಶೆ ಮತ್ತು ಮಹಾಕಾವ್ಯ ವಿಭಾಗಗಳಿಂದ ತಲಾ ಒಂದು ಪುಸ್ತಕಕ್ಕೆ ಪ್ರಶಸ್ತಿ ನೀಡಲಾಗುತ್ತದೆ.
ಗೋಖಲೆ ಅವರ ‘Things To Leave Behind’ ಕಾದಂಬರಿ ಮತ್ತು ಬಸು ಮತ್ತು ಹುಸೇನ್ ಅವರ ಕ್ರಮವಾಗಿ ನಾಟಕ ಮತ್ತು ಕಿರು ಕಥೆಗಳಿಗಾಗಿ ಪ್ರಶಸ್ತಿ ಸಂದಿದೆ. ತಮ್ಮ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಗೋಖಲೆ ಟ್ವೀಟರ್ ಮೂಲಕ ತಿಳಿಸಿದ್ದಾರೆ.
Deeply honoured by the Sahitya Akademi Award for English, 2021 for my novel Things To Leave Behind. Feel a deep sense of pride and gratitude to belong to the vibrant Indian literatures. #ManyLanguagesOneLiterature @sahityaakademi @PenguinIndia @JaipurLitFest pic.twitter.com/RbNuJdtAXv
— Namita Gokhale (@NamitaGokhale_) December 30, 2021
ಗುಜರಾತಿ, ಮಣಿಪುರಿ ಮತ್ತು ಉರ್ದು ಭಾಷೆಗಳಲ್ಲಿನ ಪ್ರಶಸ್ತಿಯನ್ನು ತದನಂತರ ಪ್ರಕಟಿಸಲಾಗುವುದು, ಪ್ರಶಸ್ತಿ ವಿಜೇತರಿಗೆ 1,00,000 ರೂ. ನಗದು ಸನ್ಮಾನವನ್ನು ಒಳಗೊಂಡಿರಲಿದೆ ಎಂದು ಸಾಹಿತ್ಯ ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ.