Karnataka news paper

ಮಹಿಳೆಯ ಲೈಂಗಿಕತೆ ವಿಚಾರದಲ್ಲಿ ಮೂಗು ತೂರಿಸದಂತೆ ನಿಮ್ಮ ಮಗನಿಗೆ ಕಲಿಸಿ: ಸಮಂತಾ


ಬೆಂಗಳೂರು: ಲೈಂಗಿಕತೆಯ ವಿಚಾರದಲ್ಲಿ ಮಹಿಳೆಯರನ್ನು ಆಕ್ಷೇಪಿಸುವ ಕುರಿತು ನಟಿ ಸಮಂತಾ ರೂತ್‌ ಪ್ರಭು ಅವರು ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿರುವ ಅವರು, ‘ಲೈಂಗಿಕತೆಯ ವಿಚಾರದಲ್ಲಿ ಮಗಳಿಗೆ ಬುದ್ದಿ ಹೇಳಿಕೊಡಬೇಡಿ. ಅದರ ಬದಲು ಮಹಿಳೆಯರನ್ನು ನಿಯಂತ್ರಿಸದಂತೆ ಮಗನಿಗೆ ಕಲಿಸಿಕೊಡಿ. ಏಕೆಂದರೆ, ನಿಮ್ಮ ಮಗಳಿಗೆ ಲೈಂಗಿಕತೆಯ ಹಕ್ಕನ್ನು ನಿರಾಕರಿಸುವುದು, ಅವಳನ್ನು ವಸ್ತುವನ್ನಾಗಿಸುವ ಇನ್ನೊಂದು ಮಾರ್ಗವಾಗಿದೆ’ ಎಂದು ಸಮಂತಾ ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದೆ ನಟಿ ಸಮಂತಾ ರುತ್ ಪ್ರಭು ಅವರು ಅಲ್ಲು ಅರ್ಜುನ್ ನಟನೆಯ ‘ಪುಷ್ಪ‘ ಚಿತ್ರದಲ್ಲಿ ‘ಊ ಅಂಟಾವಾ’ ಎಂಬ ಐಟಂ ಡ್ಯಾನ್ಸ್‌ನಲ್ಲಿ ಕುಣಿದು ಸುದ್ದಿಯಾಗಿದ್ದರು. ಅವರ ಮಾದಕ ನೃತ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರು ವಿರೋಧದ ಮಾತುಗಳನ್ನು ಕೇಳುವ ಜತೆಗೆ ಟ್ರೋಲ್‌ಗೆ ಒಳಗಾಗಿದ್ದರು.

ಟೀಕೆಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರಿಸಿದ್ದ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. 

ಸಮಂತಾ ಅವರು ಇತ್ತೀಚೆಗೆ ನಟ ನಾಗಾ ಚೈತನ್ಯರಿಂದ ವಿಚ್ಛೇದನ ಪಡೆದಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.



Read More…Source link