Karnataka news paper

ಸಿಹಿಸುದ್ದಿ: 1 ತಿಂಗಳಲ್ಲಿ ಕೆಜಿಗೆ 8-10 ರೂ. ಇಳಿಕೆ, ಇನ್ನೂ ಇಳಿಕೆ ಸಾಧ್ಯತೆ


News

|

ಕಳೆದ ಒಂದು ತಿಂಗಳಿನಿಂದ ಅಡುಗೆ ಎಣ್ಣೆ ಬೆಲೆಯು ಬಹಳಷ್ಟು ಇಳಿಕೆ ಆಗಿದೆ. ಕಳೆದ ಮೂವತ್ತು ದಿನದಲ್ಲಿ ಅಡುಗೆ ಎಣ್ಣೆ ಬೆಲೆಯು ಕೆಜಿಗೆ 8-10 ರೂ. ಇಳಿಕೆ ಆಗಿದೆ. ರಫ್ತು ತೆರಿಗೆಯು ಇಳಿಕೆ ಆದ ಕಾರಣದಿಂದಾಗಿ ತೈಲ ಬೆಲೆಯು ಇಳಿಕೆ ಆಗಿದೆ. ಇನ್ನು ಮುಂಬರುವ ಕೆಲವು ತಿಂಗಳಲ್ಲಿ ಖಾದ್ಯ ತೈಲ ಬೆಲೆಯು ಕೆಜಿಗೆ ಇನ್ನೂ 3-4 ರೂಪಾಯಿ ಇಳಿಕೆ ಆಗುವ ಸಾಧ್ಯತೆ ಇದೆ. ಅಡುಗೆ ಎಣ್ಣೆ ಬೀಜವು ಸ್ಥಳೀಯವಾಗಿ ಅಧಿಕ ಬೆಳೆದ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿನ ಕೆಲವು ಬೆಳವಣಿಗೆಯಿಂದಾಗಿ ಅಡುಗೆ ತೈಲ ಬೆಲೆಯು ಇನ್ನೂ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕೈಗಾರಿಕಾ ಸಂಸ್ಥೆ ಎಸ್‌ಇಎ ಹೇಳಿದೆ.

ಈ ಬಗ್ಗೆ ಎಸ್‌ಇಎ ಅಧ್ಯಕ್ಷ ಅತುಲ್‌ ಚತುರ್ವೇದಿ, “ಕಳೆದ ಕೆಲವು ತಿಂಗಳುಗಳ ಭಾರತೀಯ ಅಡುಗೆ ತೈಲ ಗ್ರಾಹಕರಿಗೆ ಅಡುಗೆ ತೈಲ ಬೆಲೆ ಏರಿಕೆಯಿಂದಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದರು. ಪಾಮ್‌, ಸೋಯಾ, ಸೂರ್ಯಕಾಂತಿ ಎಲ್ಲಾ ಬೀಜಗಳ ಆಮದು ತೆರಿಗೆಯು ಅಧಿಕವಾಗಿದ್ದ ಕಾರಣದಿಂದಾಗಿ ಕಳೆದ ಕೆಲವು ತಿಂಗಳು ದೇಶದಲ್ಲಿ ಅಡುಗೆ ತೈಲ ಬೆಲೆಯು ಅಧಿಕವಾಗಿತ್ತು,” ಎಂದು ಪ್ರಕಟಣೆಯಲ್ಲಿ ಉಲ್ಲೇಖ ಮಾಡಿದ್ದಾರೆ.

ಸಿಹಿಸುದ್ದಿ: ಹಬ್ಬದ ಸೀಸನ್‌ ನಡುವೆ ಅಡುಗೆ ಎಣ್ಣೆ ಬೆಲೆ ಇಳಿಕೆ

ದೀಪಾವಳಿಗೂ ಮುನ್ನ ಹಬ್ಬದ ಸಂದರ್ಭದಲ್ಲಿ ಅಡುಗೆ ಎಣ್ಣೆಯ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಎಸ್‌ಇಎ ಸಲಹೆ ನೀಡಿದ್ದವು. ಇನ್ನು ಈ ಬಗ್ಗೆ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಚತುರ್ವೇದಿ, “ನಮ್ಮ ಈ ಎಲ್ಲಾ ಕ್ರಮದಿಂದಾಗಿ ಪ್ರಯತ್ನದಿಂದಾಗಿ ಈಗ ಅಡುಗೆ ತೈಲದ ಬೆಲೆಯು ಕಳೆದ ಮೂವತ್ತು ದಿನದಲ್ಲಿ ಕೆಜಿಗೆ ಸುಮಾರು 8-10 ರೂ. ಇಳಿಕೆ ಆಗಿದೆ,” ಎಂದು ತಿಳಿಸಿದ್ದಾರೆ.

ಇನ್ನಷ್ಟು ಇಳಿಕೆ ಆಗಲಿದೆ ಅಡುಗೆ ಎಣ್ಣೆ ಬೆಲೆ

ಇನ್ನಷ್ಟು ಇಳಿಕೆ ಆಗಲಿದೆ ಅಡುಗೆ ಎಣ್ಣೆ ಬೆಲೆ

ಅಡುಗೆ ತೈಲ ಬೆಲೆಯನ್ನು ಇಳಿಕೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಉಪಯೋಗ ಉಂಟು ಮಾಡುವ ನಿಟ್ಟಿನಲ್ಲಿ ಎಸ್‌ಇಎ ಕಾರ್ಯ ಪ್ರವೃತ್ತವಾಗಿದೆ. ಆಮದು ಶುಲ್ಕವು ಕಡಿಮೆ ಆಗುತ್ತಿದ್ದಂತೆ ಹಬ್ಬದ ಉಡುಗೊರೆಯಾಗಿ ಗ್ರಾಹಕರಿಗೆ ನಾವು ಸಿಹಿ ಸುದ್ದಿ ನೀಡಿದ್ದೇವೆ. ಅಡುಗೆ ಎಣ್ಣೆ ಬೆಲೆಯನ್ನು ಇನ್ನೂ ಇಳಿಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಅಡುಗೆ ಎಣ್ಣೆ ಬೆಲೆಯು ಕೆಜಿಗೆ 3-4 ರೂಪಾಯಿ ಇಳಿಕೆ ಮಾಡುವ ಸಾಧ್ಯತೆ ಇದೆ. ಈ ಹಬ್ಬದ ಸಂದರ್ಭದಲ್ಲಿ ನಮ್ಮ ಗ್ರಾಹಕರಿಗೆ ಇದು ಸಂತಸವನ್ನು ನೀಡಲಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಬೆಳೆ ಹೆಚ್ಚಳವಾದ್ದಂತೆ ಬೆಲೆ ಇಳಿಕೆ

ಬೆಳೆ ಹೆಚ್ಚಳವಾದ್ದಂತೆ ಬೆಲೆ ಇಳಿಕೆ

ಸೋಯಾಬಿನ್‌ ಬೆಳೆಯು ಸುಮಾರು 120 ಲಕ್ಷ ಟನ್‌ ಆಗಿದೆ. ನೆಲಗಡಲೆ ಬೆಳೆಯು 80 ಲಕ್ಷ ಟನ್‌ ಆಗಿದೆ. ಬೆಳೆಯು ಅಧಿಕವಾದ ಹಿನ್ನೆಲೆಯಿಂದಾಗಿ ಅಡುಗೆ ಎಣ್ಣೆ ಬೆಲೆಯು ಕಡಿಮೆ ಆಗುವ ಸಾಧ್ಯತೆ ಬಗ್ಗೆ ಚತುರ್ವೇಧಿ ಉಲ್ಲೇಖ ಮಾಡಿದ್ದಾರೆ. “ಅತೀ ಮುಖ್ಯವಾದ ಅಂಶ ಏನೆಂದರೆ ಸಾಸಿವೆ ಬೆಲೆ ಹೆಚ್ಚಳವಾಗಿದೆ ಎಂದು ತಿಳಿಯುತ್ತಿದ್ದಂತೆ ರೈತರು ಎಚ್ಚೆತ್ತಿದ್ದಾರೆ. ಎಂದಿಗಿಂತಲೂ ಅಧಿಕವಾಗಿ ಸಾಸಿವೆ ಬೆಳೆಯನ್ನು ರೈತರು ಬೆಳೆದಿದ್ದಾರೆ. 77.62 ಲಕ್ಷ ಹೆಕ್ಟೇರ್‌ಗಳಲ್ಲಿ ಸಾಸಿವೆ ಬೆಳೆಯು ಬೆಳೆಯಲಾಗಿದೆ. ಈ ಬೆಲೆಯು ಸುಮಾರು ಶೇಕಡ ಮೂವತ್ತರಷ್ಟು ಅಧಿಕವಾಗಿದೆ. ಇದರಿಂದಾಗಿ ಮುಂದಿನ ವರ್ಷವು ಸ್ಥಳೀಯವಾಗಿ ಸಾಸಿವೆ ಎಣ್ಣೆ ಲಭ್ಯತೆಯು 8 ರಿಂದ 10 ಲಕ್ಷ ಆಗಲಿದೆ ಎಂದು ಕೂಡಾ ಈ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಬೇಡಿಕೆ ಹಾಗೂ ಉತ್ಪಾದನೆ ನಡುವೆ ಭಾರೀ ಅಂತರ!

ಬೇಡಿಕೆ ಹಾಗೂ ಉತ್ಪಾದನೆ ನಡುವೆ ಭಾರೀ ಅಂತರ!

“ಜಾಗತಿಕವಾಗಿಯೇ ಅಡುಗೆ ತೈಲ ಬೆಲೆಯು ಇಳಿಕೆ ಆಗುತ್ತಿದೆ. ಅಡುಗೆ ತೈಲ ಬೆಲೆಯು ಇನ್ನೂ ಕೂಡಾ ಹೆಚ್ಚು ಇಳಿಕೆ ಆಗುತ್ತದೆ ಎಂದು ನಮಗೆ ಭಾವಿಸುತ್ತದೆ,” ಎಂದು ಎಸ್‌ಇಎ ಅಧ್ಯಕ್ಷ ಅತುಲ್‌ ಚತುರ್ವೇದಿ ಅಭಿಪ್ರಾಯಿಸಿದ್ದಾರೆ. ಎಸ್‌ಇಎ ಪ್ರಕಾರ, “ಭಾರತದಲ್ಲಿ ಒಟ್ಟಾಗಿ 22-22.5 ಮಿಲಿಯನ್‌ ಟನ್‌ ಅಡುಗೆ ತೈಲವನ್ನು ಉಪಯೋಗ ಮಾಡಲಾಗುತ್ತದೆ. ಈ ಪೈಕಿ ಶೇಕಡ 65 ರಷ್ಟು ಅಡುಗೆ ಎಣ್ಣೆಯು ಆಮದಿನ ಮೇಲೆ ಅವಲಂಬಿತವಾಗಿದೆ. ಭಾರತ ದೇಶದಲ್ಲಿ ಬೇಡಿಕೆ ಹಾಗೂ ಉತ್ಪಾದನೆ ನಡುವೆ 13-15 ಮಿಲಿಯನ್‌ ಟನ್‌ ಅಂತರವಿದೆ.”

ಅಡುಗೆ ತೈಲ ಆಮದು ಬೆಲೆ ಹಠಾತ್‌ ಹೆಚ್ಚಳ

ಅಡುಗೆ ತೈಲ ಆಮದು ಬೆಲೆ ಹಠಾತ್‌ ಹೆಚ್ಚಳ

ಕಳೆದ ಎರಡು ಮಾರುಕಟ್ಟೆ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್‌) ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣದಿಂದಾಗಿ ಆಮದು ಕಡಿಮೆ ಆಗಿದೆ. ಸರಿಸುಮಾರು 13 ಮಿಲಿಯನ್‌ ಟನ್‌ ಆಮದು ಕಡಿಮೆ ಆಗಿದೆ. “2019-20 ರಲ್ಲಿ ಅಡುಗೆ ತೈಲ ಆಮದು 13.2 ಮಿಲಿಯನ್‌ ಟನ್‌ಗೆ ಇಳಿಕೆ ಕಂಡಿದೆ. ಅಂದರೆ ಸುಮಾರು 71,600 ಕೋಟಿ ರೂಪಾಯಿಯ ಅಡುಗೆ ತೈಲ ಆಮದು ಆಗಿದೆ. 2020-21 ರಲ್ಲಿ ಭಾರತವು ಅಷ್ಟೇ ಪ್ರಮಾಣದಲ್ಲಿ ಅಡುಗೆ ತೈಲವನ್ನು ಆಮದು ಮಾಡಿಕೊಂಡಿದೆ. ಆದರೆ ಅದರೆ ಬೆಲೆ, ಆಮದು ವೆಚ್ಚವು ಶೇಕಡ 63 ಹೆಚ್ಚಳವಾಗಿದೆ. ಅಂದರೆ 2020-21 ರಲ್ಲಿ 13.2 ಮಿಲಿಯನ್‌ ಟನ್‌ಗೆ 1.17 ಲಕ್ಷ ಕೋಟಿ ರೂಪಾಯಿ ವ್ಯಯಿಸಲಾಗಿದೆ. ಜಾಗತಿಕವಾಗಿ ಅಡುಗೆ ತೈಲ ಬೆಲೆ ಏರಿಕೆಯ ಕಾರಣದಿಂದಾಗಿ ಈ ರೀತಿಯಾಗಿ ದರವು ಹಠಾತ್‌ ಹೆಚ್ಚಳ ಕಂಡಿದ್ದವು,” ಎಂದು ಎಸ್‌ಇಎ ಕಳೆದ ತಿಂಗಳು ಮಾಹಿತಿ ನೀಡಿದೆ.

English summary

Edible oil prices down Rs 8-10 per kg in last 30 days, may fall further Says Industry

Edible oil prices down Rs 8-10 per kg in last 30 days, may fall further Says Industry.

Story first published: Sunday, December 12, 2021, 18:30 [IST]



Read more…