Karnataka news paper

2021ರಲ್ಲಿ ನಟಿ ಕರೀನಾ ಅವರ ‘ಅತ್ಯುತ್ತಮ ಸಂಗತಿ’ ಯಾವುದು ಗೊತ್ತೇ?


ನವದೆಹಲಿ: ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಅವರು ತಮ್ಮ ಮಕ್ಕಳ ಫೋಟೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. 

ತಮ್ಮ ಎರಡನೇ ಮಗುವಿನ ಮುದ್ದಾದ ಫೋಟೊವನ್ನು ಶುಕ್ರವಾರ ಪೋಸ್ಟ್‌ ಮಾಡಿದ್ದಾರೆ.   

ಹಂಚಿಕೊಂಡಿರುವ ಫೋಟೊದೊಂದಿಗೆ ಟಿಪ್ಪಣಿ ಬರೆದಿರುವ ಕರೀನಾ, ‘ಇವನ ಎರಡು ಹಲ್ಲುಗಳು… 2021ರ ಅತ್ಯುತ್ತಮ ಸಂಗತಿ’ ಎಂದು ತಿಳಿಸಿದ್ದಾರೆ. 

#31stDecember, #MeraBeta ಮತ್ತು #Blessed ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿರುವ ಅವರು ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. 





Read More…Source link