ಹೈಲೈಟ್ಸ್:
- 2021ರ ವರ್ಷದ ಟೆಸ್ಟ್ ಪ್ಲೇಯಿಂಗ್ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ.
- ಈ ತಂಡದಲ್ಲಿ ರೋಹಿತ್ ಸೇರಿದಂತೆ ನಾಲ್ವರು ಭಾರತೀಯರು ಆಯ್ಕೆ.
- ಶ್ರೀಲಂಕಾ ತಂಡದ ದಿಮುತ್ ಕರುಣಾರತ್ನೆಗೆ ನಾಯಕತ್ವದ ಜವಾಬ್ದಾರಿ.
ಟೀಮ್ ಇಂಡಿಯಾ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಅವರಿಗೆ ಇನಿಂಗ್ಸ್ ಆರಂಭಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಅವಕಾಶ ಕಲ್ಪಿಸಿದೆ. 2021ರ ವರ್ಷದಲ್ಲಿ ಏಷ್ಯಾ ಹೊರಗಡೆ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಬಳಿಕ ಪ್ರಸಕ್ತ ವರ್ಷದಲ್ಲಿ ಎರಡನೇ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ.
ಭಾರತದ ರಿಷಭ್ ಪಂತ್ ಅವರಿಗೆ ವಿಕೆಟ್ ಕೀಪರ್ ಸ್ಥಾನಕ್ಕೆ ಅವಕಾಶ ನೀಡಲಾಗಿದೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್‌ನಲ್ಲಿ 97, ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅಜೇಯ 89 ಹಾಗೂ ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್‌ನಲ್ಲಿ 91 ಚೆಚ್ಚಿದ್ದರು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಅವರ ಬ್ಯಾಟಿಂಗ್‌ನಿಂದಾಗಿ ಹಲವರು ಪಂತ್ ಅವರನ್ನು ಆಡಮ್ ಗಿಲ್‌ಕ್ರಿಸ್ಟ್‌ಗೆ ಹೋಲಿಸಿದ್ದರು.
‘ಬ್ಯಾಟಿಂಗ್ ತುಂಬಾ ಕಠಿಣವಾಗಿತ್ತು’ : ಟೆಸ್ಟ್ ಗೆದ್ದ ಬಗ್ಗೆ ಕೊಹ್ಲಿ ಹೇಳಿದ್ದಿದು!
ಇನ್ನು ಪ್ರಸಕ್ತ ಆವೃತ್ತಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿರುವ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಕ್ರಮವಾಗಿ 54 ಮತ್ತು 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಪ್ರಮುಖ ಕೀ ಬ್ಯಾಟ್ಸ್‌ಮನ್ ಆಗಿರುವ ಮಾರ್ನಸ್ ಲಾಬುಶೇನ್ ಅವರು ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸತತ ವೈಫಲ್ಯ ಅನುಭವಿಸಿರುವ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಮುಖ ಕೀ ವೇಗಿಗಳಾದ ಜಸ್‌ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
‘ಸೆಂಚೂರಿಯನ್ ಶೈನ್’, ಭಾರತದ ಸಾಧನೆಗೆ ಮೆಚ್ಚುಗೆಯ ಸುರಿಮಳೆಗೈದ ದಿಗ್ಗಜರು!
ಶ್ರೀಲಂಕಾ ತಂಡದ ದಿಮುತ್ ಕರುಣಾರತ್ನೆ ಅವರನ್ನು ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲದೆ ನಾಯಕತ್ವವನ್ನು ಶ್ರೀಲಂಕಾ ಆರಂಭಿಕನಿಗೆ ನೀಡಲಾಗಿದೆ. ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ನಾಲ್ಕನೇ ಕ್ರಮಾಂಕಕ್ಕೆ 2021ರ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿರುವ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಆರಿಸಲಾಗಿದೆ.
ಪಾಕಿಸ್ತಾನದ ಫವಾದ್ ಅಲಾಮ್ ಹಾಗೂ ರಿಷಭ್ ಪಂತ್ ಕ್ರಮವಾಗಿ 5 ಮತ್ತು 6ನೇ ಕ್ರಮಾಂಕಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ಪಿನ್ನರ್‌ಗಳಾಗಿ ಭಾರತ ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್‌ಗೆ ಚಾನ್ಸ್ ನೀಡಲಾಗಿದೆ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಶಾಕ್ ನೀಡಿದ ಕ್ವಿಂಟನ್ ಡಿ ಕಾಕ್!
ವೇಗದ ಬೌಲಿಂಗ್ ವಿಭಾಗದಲ್ಲಿ ಕೈಲ್ ಜೇಮಿಸನ್‌ಗೆ ಅವಕಾಶ ನೀಡಲಾಗಿದೆ. ಇವರು ಈ ವರ್ಷ ಆಡಿರುವ ಐದು ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಅವರು ತಂಡಕ್ಕೆ ನೆರವಾಗಲಿದ್ದಾರೆ. ಇವರ ಜೊತೆಗೆ ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ(9 ಪಂದ್ಯಗಳಿಂದ 47 ವಿಕೆಟ್‌ಗಳು) ಹಾಗೂ ಹಸನ್ ಅಲಿ (8 ಪಂದ್ಯಗಳಿಂದ 41 ವಿಕೆಟ್) ಅವರನ್ನು ಆಯ್ಕೆ ಮಾಡಲಾಗಿದೆ.
2021ರ ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ XI: ರೋಹಿತ್ ಶರ್ಮಾ, ದಿಮುತ್ ಕರುಣಾರತ್ನೆ (ನಾಯಕ), ಮಾರ್ನಸ್ ಲಾಬುಶೇಬನ್, ಜೋ ರೂಟ್, ಫವಾದ್ ಆಲಮ್, ರಿಷಭ್ ಪಂತ್ (ವಿ.ಕೆ), ರವಿಚಂದ್ರನ್ ಅಶ್ವಿನ್, ಕೈಲ್ ಜೇಮಿಸನ್, ಅಕ್ಷರ್ ಪಟೇಲ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ