Karnataka news paper

ಶುಕ್ರವಾರದ ಟಾಪ್‌ ಟ್ರೆಂಡಿಂಗ್‌ ಷೇರು – ಆಟೊಮೋಟಿವ್‌ ಆಕ್ಸೆಲ್ಸ್‌


ತಾಂತ್ರಿಕ ಚಾರ್ಟ್‌ ನೋಡಿದಾಗ ಇಂದು ಅಂದರೆ ಶುಕ್ರವಾರ ಷೇರು ಸಾಕಷ್ಟು ಗೂಳಿ ಜಿಗಿತದ ಪ್ರವೃತ್ತಿಯನ್ನು ತೋರಿಸಿದೆ. ಅದು ಇಂದು ತನ್ನ 52 ವಾರಗಳ ಗರಿಷ್ಠ ಮಟ್ಟವಾದ ರೂ. 1,598 ಅನ್ನು ತಲುಪಿದೆ ಮತ್ತು ಸುಮಾರು ಶೇಕಡಾ ಒಂದರಷ್ಟು ಏರಿಕೆ ಕಂಡಿದೆ.

ಡಿಸೆಂಬರ್ ಆರಂಭದ ವಾರದಲ್ಲಿ, ಷೇರು 200 ಡಿಎಂಎ ಬೆಂಬಲದ ಮಟ್ಟದಲ್ಲಿ ತನ್ನ ಬೇಸ್‌ ರಚಿಸಿಕೊಂಡು ಅಲ್ಲಿಂದ ಸುಮಾರು ಶೇ. 28ರಷ್ಟು ಏರಿಕೆ ಕಂಡಿದೆ. ಆರ್‌ಎಸ್‌ಐ ಗೂಳಿ ಜಿಗಿತದ ವಲಯದಲ್ಲಿದೆ ಮತ್ತು ಟ್ರೆಂಡ್ ಸೂಚಕ ಎಡಿಕ್ಸ್‌ 25ಕ್ಕಿಂತ ಹೆಚ್ಚಿರುವುದಲ್ಲದೆ ಏರಿಕೆಯಾಗುತ್ತಿದೆ. ಏರುತ್ತಿರುವ ಎಡಿಎಕ್ಸ್‌ ಪ್ರಬಲ ಟ್ರೆಂಡ್‌ನ ಸೂಚನೆಯಾಗಿದೆ. ಮೇಲಾಗಿ, ಎಂಎಸಿಡಿ ಹಿಸ್ಟೋಗ್ರಾಮ್ ಕೂಡ ಏರುತ್ತಿದೆ. ಇದು ತನ್ನ ಏರುಗತಿಯನ್ನು ಮುಂದುವರಿಸುವ ಷೇರಿನ ಅಪಾರ ಸಾಮರ್ಥ್ಯವನ್ನು ಸೂಚಿಸುತ್ತದೆ. ಎಲ್ಡರ್ ಇಂಪಲ್ಸ್ ಸಿಸ್ಟಮ್ ಹೊಸ ಖರೀದಿಯ ಸಂಕೇತವನ್ನು ನೀಡುತ್ತಿದೆ. ಮ್ಯಾನ್ಸ್‌ಫೀಲ್ಡ್ ರಿಲೇಟಿವ್ ಸ್ಟ್ರೆಂತ್ ಇಂಡಿಕೇಟರ್‌ ಸೂಚಿಸುವಂತೆ ಷೇರು ವಿಶಾಲ ಮಾರುಕಟ್ಟೆ ಸೂಚ್ಯಂಕವನ್ನು ಮೀರಿಸಿದೆ. ಇದರ ಜತೆಗೆ ಸಾಪ್ತಾಹಿಕ ಚಾರ್ಟ್‌ನಲ್ಲಿ ವಾಲ್ಯೂಮ್‌ಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ, ತಾಂತ್ರಿಕ ಸೂಚಕಗಳ ಬುಲಿಶ್ ಸೂಚನೆಯನ್ನು ಮೌಲ್ಯೀಕರಿಸುತ್ತದೆ.

2021ರಲ್ಲಿ ಸುಮಾರು 53.40 ಪ್ರತಿಶತದಷ್ಟು ಆದಾಯವನ್ನು ನೀಡಿರುವುದರಿಂದ, ಅಲ್ಪಾವಧಿಯ ಮತ್ತು ಮಧ್ಯಮ ಅವಧಿಯಲ್ಲಿಯೂ ಷೇರು ತನ್ನ ಸಹವರ್ತಿ ಕಂಪನಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಈ ತ್ರೈಮಾಸಿಕದಲ್ಲಿಯೂ ಹೂಡಿಕೆದಾರರಿಗೆ ಕಂಪನಿಯ ಷೇರುಗಳು ಶೇ. 26ರಷ್ಟು ಉತ್ತಮ ಆದಾಯವನ್ನು ನೀಡಿವೆ.

ಆಟೊಮೋಟಿವ್ ಆ್ಯಕ್ಸಲ್ಸ್ ಲಿಮಿಟೆಡ್ ಆಟೊಮೋಟಿವ್ ಆ್ಯಕ್ಸಲ್‌ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಇದು ತನ್ನ ಉತ್ಪನ್ನಗಳನ್ನು ದೇಶೀಯ ಹಾಗೂ ಜಾಗತಿಕ ಟ್ರಕ್‌ಗಳು ಮತ್ತು ಬಸ್‌ಗಳ ತಯಾರಕರಿಗೆ ಒದಗಿಸುತ್ತದೆ. ಸಣ್ಣ ಮತ್ತು ಮಧ್ಯಮಾವಧಿಯಲ್ಲಿ ಆಟೋಮೋಟಿವ್ ಕಂಪನಿ ತೋರಿಸಿರುವ ಉನ್ನತ ಕಾರ್ಯಕ್ಷಮತೆಯನ್ನು ಪರಿಗಣಿಸಿದಾಗ ಮತ್ತು ತಾಂತ್ರಿಕ ವಿಶ್ಲೇಷಣೆಯೂ ಇದನ್ನು ಮತ್ತಷ್ಟು ಮೌಲ್ಯೀಕರಿಸುವುದರಿಂದ ಮುಂಬರುವ ದಿನಗಳಲ್ಲಿ ಷೇರುಗಳು ತನ್ನ ಏರುಗತಿಯ ಪ್ರವೃತ್ತಿಯನ್ನು ಮುಂದುವರಿಸುವ ನಿರೀಕ್ಷೆಯಿದೆ.

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.



Read more…