Karnataka news paper

ಮುಜರಾಯಿ ದೇಗುಲಗಳ ಕೋಟ್ಯಂತರ ಹಣವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲು ಸರ್ಕಾರ ಹೊರಟಿದೆ; ಡಿಕೆಶಿ


ಬೆಂಗಳೂರು: ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಕೋಟ್ಯಾಂತರ ರೂಪಾಯಿ ಹಣ ಇದೆ. ಅದನ್ನ ಬಿಜೆಪಿ ಕಾರ್ಯಕರ್ತರಿಗೆ ನೀಡಲು ರಾಜ್ಯ ಬಿಜೆಪಿ ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೂಡ ಹಿಂದೂಗಳು, ನಮಗೂ ಸಂಸ್ಕೃತಿ ಇದೆ. ಜನರ ಕಲ್ಯಾಣಕ್ಕೆ ಬೇಕಾದ ಕಾನೂನು ಮಾಡಿಲ್ಲ. ಗೋಹತ್ಯೆ, ಮತಾಂತರ,ದೇಗುಲ ಕಾಯ್ದೆ ತರ್ತಿದ್ದಾರೆ. ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಭಾವನಾತ್ಮಕ ವಿಚಾರ ಮುಂದಿಡ್ತಿದ್ದಾರೆ. ದೇಗುಲಗಳು ಈಗ ಹೇಗಿವೆಯೋ ಹಾಗೆಯೇ ಇರಬೇಕು. ದೇವಸ್ಥಾನಕ್ಕೆ ಕೈ ಹಾಕಿದರೆ ಸುಟ್ಟು ಹೋಗ್ತಾರೆ ಎಂದು ಕಿಡಿಕಾರಿದರು.
ಲೋಕಲ್ ಎಲೆಕ್ಷನ್‌ ರಿಸಲ್ಟ್‌ನಿಂದ ಪುಟಿದೆದ್ದ ಕಾಂಗ್ರೆಸ್‌; ಜ.3ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾವೇಶ
ದೇವಾಲಯಗಳಿಗೆ ಕೈ ಹಾಕ್ತಿದ್ದಾರೆ ಅಂದ್ರೆ ಎಷ್ಟು ಕಠೋರ ಹೃದಯ ಅವರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್,. ನಾವು ಹಿಂದು ವಿರೋಧಿಗಳಲ್ಲ. ಬಿಜೆಪಿಯವರು ಹಿಂದೂ ವಿರೋಧಿಗಳು. ನಾವು ಹಿಂದುಗಳ ಪರವಾಗಿಯೇ ಇದ್ದೇವೆ. ಹಿರಿಯ ನಾಯಕರ ಜೊತೆ ಮಾತನಾಡ್ತೇನೆ. ಇದನ್ನ ಖಡಾಖಂಡಿತವಾಗಿಯೂ ವಿರೋಧಿಸುತ್ತೇವೆ. ಬನಶಂಕರಿ, ಕಬ್ಬಾಳಮ್ಮ ದೇವಾಲಯ ಇವೆ. ಅರ್ಚಕರು ಅವರ ಪಾಡಿಗೆ ಅವರು ಕೆಲಸ ಮಾಡ್ತಿಲ್ವೇ? ಯಾಕೆ ಇವರು ದೇಗುಲಗಳಿಗೆ ಕೈಹಾಕಬೇಕು ಎಂದು ರಾಜ್ಯ ಸರ್ಕಾರದ ನಡೆಗೆ ಡಿಕೆಶಿ ಖಂಡನೆ ವ್ಯಕ್ತಪಡಿಸಿದರು.



Read more