Karnataka news paper

ನಾಳೆಯಿಂದ ಎಟಿಎಂ ನಿಯಮ ಬದಲಾವಣೆ: ಈ 5 ವಿಷಯ ತಿಳಿದಿರಿ


Personal Finance

|

ನಾಳೆಯಿಂದ ಅಂದರೆ ಹೊಸ ವರ್ಷದಿಂದ ಎಟಿಎಂನ ವಿತ್‌ಡ್ರಾ ಶುಲ್ಕವು ದುಬಾರಿ ಆಗಲಿದೆ. 2022 ರಿಂದ ಎಟಿಎಂಗಳಿಂದ ನಗದು ಹಿಂಪಡೆಯುವುದು ಹೆಚ್ಚು ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ ಎಟಿಎಂ ಬಳಕೆದಾರರು ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ಮೀರಿದರೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗು‌ತ್ತದೆ.

1 ಜನವರಿ 2022 ರಿಂದ, ಉಚಿತ ಮಾಸಿಕ ಮಿತಿಯು ಮುಗಿದ ನಂತರ ಬ್ಯಾಂಕ್ ಗ್ರಾಹಕರು ತಮ್ಮ ಎಟಿಎಂ ವಹಿವಾಟುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂಗಳಲ್ಲಿ ನಗದು ಹಿಂಪಡೆಯುವ ಶುಲ್ಕವನ್ನು 1 ಜನವರಿ 2022 ರಿಂದ ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿದೆ.

ಈ ದಿನದಿಂದ ಎಚ್‌ಡಿಎಫ್‌ಸಿ ವಹಿವಾಟು ಶುಲ್ಕ ಬದಲಾವಣೆ: ಎಷ್ಟು ಪರಿಶೀಲಿಸಿ

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ನಗದು ಮತ್ತು ನಗದುರಹಿತ ಎಟಿಎಂಗೆ ಹೆಚ್ಚಿದ ಶುಲ್ಕಗಳ ಕುರಿತು ತಮ್ಮ ವೆಬ್‌ಸೈಟ್ ಮೂಲಕ ತಿಳಿಸಿದೆ. ಈ ನಡುವೆ ನೀವು ಈ ಐದು ವಿಚಾರಗಳನ್ನು ತಿಳಿಯಲೇ ಬೇಕಾಗಿದೆ. ಏನದು? ತಿಳಿಯಲು ಮುಂದೆ ಓದಿ…

ನಾಳೆಯಿಂದ ಎಟಿಎಂ ನಿಯಮ ಬದಲಾವಣೆ: ಈ 5 ವಿಷಯ ತಿಳಿದಿರಿ

ನೀವು ತಿಳಿಯಬೇಕಾದ ಐದು ವಿಚಾರಗಳು

* ಜನವರಿ ಒಂದರಿಂದ ಎಟಿಎಂ ನಗದು ಹಿಂಪಡೆಯುವ ನಿಯಮಗಳು ಬದಲಾವಣೆ: ಜನವರಿ 2022 ರಿಂದ ಉಚಿತ ಮಾಸಿಕ ಅನುಮತಿಸುವ ಮಿತಿಯನ್ನು ಮೀರಿ ನಗದು ಮತ್ತು ನಗದು ರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಕೇಂದ್ರ ಬ್ಯಾಂಕ್ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

* 1 ಜನವರಿ 2022 ರಿಂದ, ಗ್ರಾಹಕರು ಮಾಸಿಕ ಉಚಿತ ವಹಿವಾಟು ಮಿತಿಯನ್ನು ಮೀರಿದರೆ ರೂಪಾಯಿ 20 ರ ಬದಲಿಗೆ ಪ್ರತಿ ವಹಿವಾಟಿಗೆ ರೂಪಾಯಿ 21 ಅನ್ನು ಪಾವತಿಸಬೇಕಾಗುತ್ತದೆ.

* ಸ್ವಂತ ಬ್ಯಾಂಕ್‌ನಲ್ಲಿ ಉಚಿತ ಎಟಿಎಂ ವಹಿವಾಟಿನ ಮಾಸಿಕ ಮಿತಿ: ಆದಾಗ್ಯೂ, ಬ್ಯಾಂಕ್ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ಹೊಂದಿದ್ದಾರೆ. ಅದು ಹಣಕಾಸು ಮತ್ತು ಹಣಕಾಸುೇತರ ವಹಿವಾಟುಗಳನ್ನು ಒಳಗೊಂಡಿದೆ. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ ರೂಪಾಯಿ 21 ಅನ್ನು ಪಾವತಿ ಮಾಡಬೇಕಾಗು‌ತ್ತದೆ.

ಮುಂದಿನ ತಿಂಗಳು ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕ ದುಬಾರಿ: ಹೊಸ ದರ ಪರಿಶೀಲಿಸಿ

* ಇತರ ಬ್ಯಾಂಕ್‌ನಲ್ಲಿ ಉಚಿತ ಎಟಿಎಂ ವಹಿವಾಟಿನ ಮಾಸಿಕ ಮಿತಿ: ಇದಲ್ಲದೆ, ಬ್ಯಾಂಕ್ ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ. ಅಂದರೆ ಮೆಟ್ರೋ ಕೇಂದ್ರಗಳಲ್ಲಿ ಮೂರು ವಹಿವಾಟುಗಳು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ ಐದು ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಇದು ಕೂಡಾ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿದೆ. ಈ ಮಿತಿಯನ್ನು ಮೀರಿದರೆ ಪ್ರತಿ ವಹಿವಾಟಿಗೆ ಅಧಿಕ ಹಣ ಪಾವತಿ ಮಾಡಬೇಕಾಗುತ್ತದೆ.

* ಬದಲಾವಣೆ ಯಾಕೆ ನಡೆಯುತ್ತಿದೆ: ಜೂನ್ 2019 ರಲ್ಲಿ ಆರ್‌ಬಿಐ ಸ್ಥಾಪಿಸಿದ ಸಮಿತಿಯ ಸಲಹೆಗಳ ಆಧಾರದ ಮೇಲೆ ಈ ಬದಲಾವಣೆಯನ್ನು ಘೋಷಣೆ ಮಾಡಲಾಗಿದೆ. ಎಟಿಎಂ ಶುಲ್ಕಗಳು ಮತ್ತು ಶುಲ್ಕಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘದ ಮುಖ್ಯ ಕಾರ್ಯನಿರ್ವಾಹಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಎಟಿಎಂ ವಹಿವಾಟುಗಳಿಗಾಗಿ ಇಂಟರ್ಚೇಂಜ್ ರಚನೆಯ ಮೇಲೆ ನಿರ್ದಿಷ್ಟ ಗಮನವನ್ನು ಹೊಂದಿದೆ. “ಹೆಚ್ಚಿನ ಇಂಟರ್‌ಚೇಂಜ್ ಶುಲ್ಕವನ್ನು ಸರಿದೂಗಿಸಲು ಮತ್ತು ವೆಚ್ಚದಲ್ಲಿ ಸಾಮಾನ್ಯ ಹೆಚ್ಚಳವನ್ನು ನೀಡುವುದಕ್ಕಾಗಿ, ಪ್ರತಿ ವಹಿವಾಟಿಗೆ ಗ್ರಾಹಕ ಶುಲ್ಕವನ್ನು ರೂಪಾಯಿ 21 ಕ್ಕೆ ಹೆಚ್ಚಳ ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ. ಈ ಹೆಚ್ಚಳವು ಜನವರಿ 1, 2022 ರಿಂದ ಜಾರಿಗೆ ಬರಲಿದೆ,” ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.

English summary

New ATM cash withdrawal rules from Jan 1,2021: 5 things to know

New ATM cash withdrawal rules from Jan 1,2021: 5 things to know.



Read more…