Karnataka news paper

ಕೋಟಿ ಜನರ ಹೃದಯ ಕದ್ದ ’ರಾಧೆ ಶ್ಯಾಮ್‌’ ಸಿನಿಮಾದ ಹಾಡು…


ಪ್ರಭಾಸ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ’ರಾಧೆ ಶ್ಯಾಮ್‌’ ಚಿತ್ರದ  ’ನಗುಮೊಮು ಥಾರಲೆ’
ರೊಮ್ಯಾಂಟಿಕ್‌ ಹಾಡನ್ನು ಯುಟ್ಯೂಬ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 

ಈ ವಿಡಿಯೊ ಬಿಡುಗಡೆಯಾಗಿ 10 ದಿನಗಳು ಕಳೆದರೂ ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪ್ರಭಾಸ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿರುವ ಈ ಹಾಡನ್ನು 80ರ ದಶಕದಲ್ಲಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. 

ಹಾಡಿನಲ್ಲಿ ಪ್ರಭಾಸ್‌ ಹಾಗೂ ಪೂಜಾ ಹೆಗ್ಡೆ ವಿವಿಧ ಉಡುಪುಗಳ ಮೂಲಕ ಗಮನ ಸೆಳೆಯುವುದು ವಿಶೇಷ. ’ನಗುಮೊಮು ಥಾರಲೆ’ ಹಾಡನ್ನು ಕೃಷ್ಣ ಕಾಂತ್‌ ಬರೆದಿದ್ದು, ಜಸ್ಟಿನ್‌ ಪ್ರಭಾಕರನ್‌ ರಾಗ ಸಂಯೋಜನೆ ಮಾಡಿದ್ದಾರೆ. ಸಿದ್ದ್ ಶ್ರೀರಾಮ್‌ ಈ ರೋಮ್ಯಾಂಟಿಕ್‌ ಹಾಡಿಗೆ ಧನಿಯಾಗಿದ್ದಾರೆ. 

ತೆಲುಗಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರ ಮುಂದಿನ ವರ್ಷ ಜನವರಿ 14ರಂದು ಬಿಡುಗಡೆಯಾಗಲಿದೆ.

ಓದಿ: 

ರಾಧಾಕೃಷ್ಣ ಕುಮಾರ್ ರಾಧೆ ಶ್ಯಾಮ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಓದಿ: 



Read More…Source link