Karnataka news paper

ಅಸ್ಟ್ರಾಜೆನೆಕಾ: ಬ್ರಿಟನ್‌ನಲ್ಲಿ ವರ್ಷಾಚರಣೆ


ಲಂಡನ್‌: ಕೋವಿಡ್-19ರ ವಿರುದ್ಧದ ಅಸ್ಟ್ರಾಜೆನೆಕಾ ಲಸಿಕೆಯನ್ನು ಅಂಗೀಕರಿಸಿ ವರ್ಷವಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಗುರುವಾರ ವಾರ್ಷಿಕೋತ್ಸವ ಆಚರಿಸಿದೆ. ಒಪ್ಪಂದದ ಭಾಗವಾಗಿ ಈ ಲಸಿಕೆಯನ್ನು ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್‌ ಹೆಸರಿನಲ್ಲಿ ಸಿದ್ಧಪಡಿಸಿ, ನಿರ್ವಹಿಸುತ್ತಿದೆ.   

ಜಾಗತಿಕವಾಗಿ ಕೋವಿಡ್‌ನಿಂದ ಲಕ್ಷಾಂತರ ಜನರ ಜೀವ ಉಳಿಸಲು ನೆರವಾಗಿರುವ ಅಸ್ಟ್ರಾಜೆನೆಕಾ ಲಸಿಕೆಯನ್ನು ತಯಾರಿಸಿದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಕೃತಜ್ಞತೆ ಸಲ್ಲಿಸಿದ್ದಾರೆ.



Read more from source