Karnataka news paper

ಉಕ್ರೇನ್‌ ಮೇಲೆ ದಾಳಿ ನಡೆಸಿದರೆ ಗಂಭೀರ ಪರಿಣಾಮ: ರಷ್ಯಾಕ್ಕೆ ಜಿ–7 ಎಚ್ಚರಿಕೆ


Prajavani

ಲಿವರ್‌ಪೂಲ್, ಬ್ರಿಟನ್: ಉಕ್ರೇನ್‌ ಮೇಲೆ ದಾಳಿ ನಡೆಸಿದ್ದೇ ಆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿ–7 ರಾಷ್ಟ್ರಗಳು ರಷ್ಯಾಕ್ಕೆ ಭಾನುವಾರ ಎಚ್ಚರಿಕೆ ನೀಡಿವೆ.

ಇಲ್ಲಿ ನಡೆಯುತ್ತಿರುವ ಜಿ–7 ರಾಷ್ಟ್ರಗಳ ಪ್ರತಿನಿಧಿಗಳ ಶೃಂಗಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ನಿರ್ಣಯದ ಕರಡು ಪ್ರತಿಯನ್ನು ಉಲ್ಲೇಖಿಸಿ ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್‌ ಗಡಿ ಸಮೀಪ ಯೋಧರು ಹಾಗೂ ಶಸ್ತ್ರಾಸ್ತ್ರಗಳ ಜಮಾವಣೆಯನ್ನು ರಷ್ಯಾ ಹೆಚ್ಚುಸುತ್ತಿರುವುದನ್ನು ಶೃಂಗಸಭೆ ಖಂಡಿಸಿತು. ಗಡಿಯಲ್ಲಿ ಉಂಟಾಗಿರುವ ಸಂಘರ್ಷವನ್ನು ಶಮನಗೊಳಿಸಲು ರಷ್ಯಾ ಕೂಡಲೇ ಮುಂದಾಗಬೇಕು ಎಂಬುದಾಗಿ ಶೃಂಗಸಭೆ ಆಗ್ರಹಿಸಿತು ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಈ ಆರೋಪಗಳನ್ನು ರಷ್ಯಾ ತಳ್ಳಿಹಾಕಿದೆ. ಉಕ್ರೇನ್‌ ಮೇಲೆ ದಾಳಿ ನಡೆಸುವ ಯಾವುದೇ ಯೋಜನೆ ಹೊಂದಿಲ್ಲ. ಉಕ್ರೇನ್‌ ಹಾಗೂ ಅಮೆರಿಕ ಇಂಥ ವದಂತಿ ಹಬ್ಬಿಸುತ್ತಿವೆ ಎಂದು ಹೇಳಿದೆ. ತನ್ನ ಗಡಿ ರಕ್ಷಣೆಗಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿಯೂ ರಷ್ಯಾ ಹೇಳಿದೆ.

ಬ್ರಿಟನ್, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಕೆನಡಾ ಹಾಗೂ ಅಮೆರಿಕ  ಜಿ–7 ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ.



Read more from source