Karnataka news paper

ಬುರ್ಖಾ ಧರಿಸಿ ಪ್ರೇಕ್ಷಕರ ಮಧ್ಯೆಯೇ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ ಸಾಯಿ ಪಲ್ಲವಿ


Online Desk

ಹೈದರಾಬಾದ್: ಟಾಲಿವುಡ್ ನಟಿ ಸಾಯಿ ಪಲ್ಲವಿ ತಾವೇ ನಟಿಸಿರುವ ಶ್ಯಾಮ್ ಸಿಂಹ ರಾಯ್ ಸಿನಿಮಾವನ್ನು ಬುರ್ಖಾ ಧರಿಸಿ, ಪ್ರೇಕ್ಷಕರ ಮಧ್ಯೆಯೇ ಕುಳಿತು ನೋಡಿದ್ದಾರೆ.

ಹೌದು ಸಾಯಿ ಪಲ್ಲವಿ ತಮ್ಮ ಸಿನಿಮಾದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯುವ ಸಲುವಾಗಿ ಬುರ್ಖಾ ಧರಿಸಿಕೊಂಡು ಥಿಯೇಟರ್‍ಗ್ ಬಂದು ಸಿನಿಮಾ ವೀಕ್ಷಿಸಿದ್ದಾರೆ.

ಬುರ್ಖಾ ಧರಿಸಿಕೊಂಡು ಬಂದ ಕಾರಣ ಸಾಯಿ ಪಲ್ಲವಿ ಅವರನ್ನು ಪ್ರೇಕ್ಷಕರು ಗುರುತಿಸಲು ಸಾಧ್ಯವಾಗಲಿಲ್ಲ. ಬುರ್ಖಾ ಧರಿಸಿಕೊಂಡು ಬಂದು ಸಿನಿಮಾ ನೋಡುತ್ತಿರುವ ಸಂಪೂರ್ಣ ವಿಡಿಯೋವನ್ನು ಫಿಲ್ಮಿ ಕಾ ಅಡ್ಡ ಎಂಬ ಇನ್ ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮನೆಗೆ ಹೋಗುವ ಮುನ್ನ ಬುರ್ಖಾದ ಮುಖಗವಚವನ್ನು ತೆರೆದು ಮುಖ ತೋರಿಸಿ ನಂತರ ತಮ್ಮ ಕಾರಿನಲ್ಲಿ ಹೋಗಿದ್ದಾರೆ.

‘ಶ್ಯಾಮ್ ಸಿಂಹ ರಾಯ್’ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಾನಿ ದ್ವಿಪಾತ್ರದಲ್ಲಿ ನಟಿಸಿದ್ದರೆ, ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಸಾಯಿ ಪಲ್ಲವಿ ‘ದೇವದಾಸಿ’ಯಾಗಿ ಕಾಣಿಸಿಕೊಂಡಿದ್ದಾರೆ.



Read more…