Karnataka news paper

ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ: ಜನವರಿ 1 ರಿಂದ ದರ ಪರಿಷ್ಕರಣೆ ಅನ್ವಯ


The New Indian Express

ಬೆಂಗಳೂರು: ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ ಮತ್ತು ಸಫಾರಿ ವೀಕ್ಷಣೆಯ ಪ್ರವೇಶ ದರವನ್ನು ಜನವರಿ 1 ರಿಂದ ಪರಿಷ್ಕರಿಸಲಾಗುತ್ತಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿಗಳ ಪೋಷಣೆ, ಆಹಾರ ನಿರ್ವಹಣೆ, ಸಫಾರಿ ವೀಕ್ಷಣೆಗೆ ಕರೆದೊಯ್ಯುವ ಪ್ರವಾಸದ್ಯೋಮ ಇಲಾಖೆ ವಾಹನದ ಇಂಧನ ಮತ್ತು ಇತರೆ ಆಡಳಿತ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮೃಗಾಲಯ ಮತ್ತು ಸಫಾರಿ ವೀಕ್ಷಣೆಗೆ ಪ್ರವೇಶ ಶುಲ್ಕವನ್ನು ಪರಿಷ್ಕರಿಸುವುದು ಸೂಕ್ತವೆಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪರಿಷ್ಕೃತ ದರ ಇಂತಿದೆ.





Read more