Karnataka news paper

ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಗೆ ಚಪ್ಪಲಿ ತೋರಿಸಿದ ಹಾಲಿ ಶಾಸಕ ಭೀಮಾ ನಾಯ್ಕ್- ವಿಡಿಯೋ ವೈರಲ್ 


The New Indian Express

ಹೊಸಪೇಟೆ: ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಮತದಾನದ ವೇಳೆ ನಡೆದ ಗಲಾಟೆಯಲ್ಲಿ ಹಾಲಿ ಶಾಸಕ ಭೀಮಾ ನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ನಡುವಿನ ಗಲಾಟೆ ವಿಡಿಯೋ ವೈರಲ್ ಆಗಿದೆ.

ಗಲಾಟೆ ವೇಳೆಯಲ್ಲಿ ಶಾಸಕ ಭೀಮಾ ನಾಯ್ಕ ಚಪ್ಪಲಿ ಹಿಡಿದು ಮಾಜಿ ಶಾಸಕ ನೇಮಿರಾಜ ನಾಯ್ಕಗೆ ಅವಾಚ್ಯವಾಗಿ ನಿಂಧಿಸುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಶಾಸಕರ ನಡಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ,ತನಿಖೆ ಕೈಗೊಂಡಿದ್ದಾರೆ.





Read more