Karnataka news paper

ಪುಷ್ಪ ಸಿನಿಮಾ: ಅಲ್ಲು ಅರ್ಜುನ್‌ ಅಡ್ಡದಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್‌


ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರ ಡೇವಿಡ್‌ ವಾರ್ನರ್‌ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ವಿವಿಧ ರೀತಿಯ ಫೋಟೊಗಳು, ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಸದಾ ಹತ್ತಿರವಾಗಿರುತ್ತಾರೆ.

ಭಾರತದಲ್ಲಿ ಐಪಿಎಲ್‌ ಆಡುತ್ತಿರುವ ವಾರ್ನರ್‌, ಭಾರತೀಯ ಸಿನಿಮಾಗಳ ಬಗ್ಗೆ ವಿಡಿಯೊಗಳನ್ನು ಮಾಡಿ, ಭಾರತದಲ್ಲಿ ಅಭಿಮಾನಿಗಳ ಬಳಗವನ್ನು ಕೂಡ ಸಂಪಾದಿಸಿದ್ದಾರೆ. 

ತೆಲುಗಿನ ಪುಷ್ಪ ಸಿನಿಮಾದ ವಿಡಿಯೊ ಮೂಲಕ ವಾರ್ನರ್‌ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ ಸಿನಿಮಾ ಹಾಡನ್ನು ಅನುಕರಿಸಿ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಇದು ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. 

’ಬಿಡ್ಡ ಇದು ನಾ ಅಡ್ಡ’ ಹಾಡನ್ನು ಅನುಕರಿಸಿ ವಿಡಿಯೊ ಮಾಡಿದ್ದಾರೆ. ಅದರಲ್ಲಿ ಅಲ್ಲು ಅರ್ಜುನ್‌ ಅವರಂತೆ ನಟಿಸಿರುವುದು ವಿಶೇಷ. ಅವರಂತೇ ಉಡುಪುಗಳನ್ನು ತೊಟ್ಟು ಡ್ಯಾನ್ಸ್‌ ಮಾಡಿದ್ದಾರೆ. 

ಈ ವಿಡಿಯೊವನ್ನು ಲಕ್ಷಾಂತರ ಜನರು ಇಷ್ಟಪಟ್ಟಿದ್ದಾರೆ., ಕ್ರಿಕೆಟಿಗರು ಮತ್ತು ಸಿನಿಮಾರಂಗದ ಗಣ್ಯರು ಕೂಡ ಕಮೆಂಟ್‌ಗಳನ್ನು ಮಾಡಿದ್ದಾರೆ.





Read More…Source link