Karnataka news paper

ಯುಎಇ ಗೋಲ್ಡನ್ ವೀಸಾ ಪಡೆದ ಪ್ರತಿಷ್ಟಿತರ ಸಾಲಿಗೆ ನಟಿ ಅಮಲಾ ಪಾಲ್ ಸೇರ್ಪಡೆ


Online Desk

ದುಬೈ: ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಅಮಲಾ ಪಾಲ್ ಯುಎಇ ಸರ್ಕಾರ ನೀಡುವ ಗೋಲ್ಡನ್ ವೀಸಾಗೆ ಭಾಜನರಾಗಿದ್ದಾರೆ. ಸದಾ ವಿವಾದಗಳಿಗೆ ಹೆಸರುವಾಸಿಯಾಗಿರುವ ಈ ಬೆಡಗಿ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರವಾಗಿದ್ದರು. 

ಇದನ್ನೂ ಓದಿ: ಯುಎಇ ಗೋಲ್ಡನ್ ವೀಸಾ: ಅರ್ಜಿ ಸಲ್ಲಿಸಲು ಯಾರು ಅರ್ಹರು; ವಿದ್ಯಾರ್ಥಿಗಳು, ಉದ್ಯಮಿಗಳು ತಿಳಿಯಬೇಕಾದ್ದು ಏನು?

ಅಮಲಾ, ವೆಬ್ ಸರಣಿಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ದುಬೈ ಸರ್ಕಾರ ಇತ್ತೀಚಿಗೆ ಅಮಲಾ ಪಾಲ್ ಗೆ ಗೋಲ್ಡನ್ ವೀಸಾ ನೀಡಿರುವುದು ವಿಶೇಷ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು ‘ಇಂತಹ ಅಪರೂಪದ ಗೌರವ ಸಿಕ್ಕಿರುವುದು ಸಂತಸ ಹಾಗೂ ಅದೃಷ್ಟವೆಂದೇ ಭಾವಿಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್!

ಯುಎಇ ಕೇವಲ ಸುಂದರ ಹಾಗೂ ಶ್ರೀಮಂತ ದೇಶವಲ್ಲ. ಅಲ್ಲಿನ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಅಮಲಾ ಪಾಲ್‌, ಕನ್ನಡದಲ್ಲಿ ಕಿಚ್ಚ ಸುದೀಪ್‌ ಎದುರು ʼಹೆಬ್ಬುಲಿʼಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಆಕ್ಷನ್ ಸಿನಿಮಾ RRR ಕಥೆ ಶುರುವಾಗಿದ್ದೇ ಲವ್ ಸ್ಟೋರಿಯಾಗಿ; ಆದರೆ ಐಡಿಯಾಗೆ ಪತ್ನಿ ತಣ್ಣೀರು: ರಾಜಮೌಳಿ

ದೀರ್ಘ ಕಾಲ ಯುಎಇ ನಲ್ಲಿ ನೆಲೆಸುವ ಅವಕಾಶ ಸೇರಿದಂತೆ ಹಲವು ಬಗೆಯ ಸವಲತ್ತುಗಳಿರುವ ಗೋಲ್ಡನ್ ವೀಸಾವನ್ನು ಅಲ್ಲಿನ ಸರ್ಕಾರ ಆಯ್ದ ಪ್ರತಿಷ್ಟಿತರಿಗೆ ನೀಡುತ್ತದೆ.

ಇದನ್ನೂ ಓದಿ: ಗುರುತೇ ಸಿಗದ ರೀತಿಯಲ್ಲಿ ಬದಲಾದ ಅಕ್ಕಿನೇನಿ ನಾಗಾರ್ಜುನ ಪುತ್ರ!



Read more…