The New Indian Express
ಬೆಂಗಳೂರು: ಭಾರತೀಯ ದೂರವಾಣಿ ಕೈಗಾರಿಕೆ(ಐಟಿಐ) ನಿಗಮ ನೌಕರರು ನಡೆಸುತ್ತಿರುವ ಮುಷ್ಕರ 29ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆ ವೇಳೆಯೇ ಅವರು ಕುವೆಂಪು ಜಯಂತಿಯನ್ನು ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ನಡೆಸುತ್ತಿದ್ದ ವೈದ್ಯರನ್ನು ಎಳೆದೊಯ್ದು ಬಂಧಿಸಿದ ದೆಹಲಿ ಪೊಲೀಸರು
ಕಾರ್ಖಾನೆ ಮುಂಭಾಗದಲ್ಲೇ ಐಟಿಐ ನೌಕರರು ಬಾಕಿ ಉಳಿಸಿಕೊಂಡಿರುವ ಸಂಬಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ಪ್ರಾರಂಭಿಸಿದ್ದರು.
ಇದನ್ನೂ ಓದಿ: ಬೆಳಗಾವಿ: ಮಾಧ್ಯಮದವರಿಗೆ ಸುವರ್ಣ ವಿಧಾನಸೌಧ ಪ್ರವೇಶಕ್ಕೆ ನಿರ್ಭಂಧ, ಪತ್ರಕರ್ತರಿಂದ ಧರಣಿ
ಹಲವು ನೌಕರರಿಗೆ ಡಿ.1ರಿಂದ ಕಾರ್ಖಾನೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಕ್ರಮಕ್ಕೆ ಮುಂದಾಗಿದ್ದಕ್ಕೆ ಕಾರಣ ಅವರ ಕಾಂಟ್ರಾಕ್ಟ್ ಅವಧಿ ಮುಗಿದಿದ್ದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕಚ್ಚಾ ವಸ್ತುಗಳ ಬೆಲೆ ಏರಿಕೆ: ಪೀಣ್ಯ ಕೈಗಾರಿಕಾ ಸಂಘದಿಂದ ಪ್ರತಿಭಟನೆ
ಆದರೆ ಅದಕ್ಕೆ ಮುನ್ನ ಯಾರಿಗೂ ನೋಟಿಸ್ ನೀಡಲಾಗಿಲ್ಲ ಎಂದು ಮುಷ್ಕರ ನಿರತ ನೌಕರರು ಆರೋಪಿಸಿದ್ದಾರೆ. ಕೈಬಿಡಲಾದವರಲ್ಲಿ ಅನೇಕರು ಕಳೆದ ೩೫ ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ.
ಇದನ್ನೂ ಓದಿ: ನಾಯಕರ ಮೇಲೆ ಲಾಠಿ ಚಾರ್ಜ್: ಪಿಎಫ್ಐ-ಎಸ್ ಡಿಪಿಐ ಪ್ರತಿಭಟನೆ, 9 ಪೊಲೀಸರಿಗೆ ಗಾಯ, 3 ದಿನ ನಿಷೇಧಾಜ್ಞೆ ಜಾರಿ