Karnataka news paper

‘ಪವನ್‌ ಪರಾಕ್ರಮ’, ಬುಲ್ಸ್‌ ಆರ್ಭಟಕ್ಕೆ ದಿಕ್ಕಾಪಾಲಾದ ಹರಿಕೇನ್ಸ್‌!


ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ನಡೆಯುತ್ತಿರುಯವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌.
  • ಹರಿಯಾಣ ಸ್ಟೀಲರ್ಸ್‌ ತಂಡವನ್ನು 42-28 ಅಂಕಗಳಿಂದ ಮಣಿಸಿದ ಬುಲ್ಸ್‌.
  • ಪಂದ್ಯದ ಅತ್ಯುತ್ತಮ ರೇಡರ್‌ ಆಘಿ ಹೊರಹೊಮ್ಮಿದ ಬೆಂಗಳೂರು ನಾಯಕ ಪವನ್.

ಬೆಂಗಳೂರು: ನಾಯಕ ಪವನ್‌ ಕುಮಾರ್‌ ಸೆಹ್ರಾವತ್‌ (22 ಅಂಕ) ಅವರ ಮಿಂಚಿನ ಆಟದ ಫಲವಾಗಿ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್‌ ತಂಡದ ಸವಾಲು ಹತ್ತಿಕ್ಕಿ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಜಯ ದಾಖಲಿಸಿದೆ.

ವೈಟ್‌ಫೀಲ್ಡ್‌ನ ಶೆರ್ಟನ್‌ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ನಡೆದ 2ನೇ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ 2018ರ ಆವೃತ್ತಿಯ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ಬರೋಬ್ಬರಿ 42-28 ಅಂಕಗಳಿಂದ ಹರಿಯಾಣ ಹರಿಕೇನ್ಸ್‌ ತಂಡಕ್ಕೆ ಸೋಲುಣಿಸಿತು.

ಪವನ್‌ ಕುಮಾರ್‌ ಅವರ ಭರ್ಜರಿ ರೇಡಿಂಗ್‌ನಿಂದಾಗಿ ಬುಲ್ಸ್‌ ತಂಡ ಪ್ರಥಮಾರ್ಧದಲ್ಲಿ19-13ರ ಮುನ್ನಡೆ ಗಳಿಸಿತು. ಮೊದಲ ಹತ್ತು ನಿಮಿಷಗಳೊಳಗೆ 11-6ರ ಮೇಲುಗೈ ಪಡೆದ ಬೆಂಗಳೂರು ತಂಡ, ಬಳಿಕ ಮುನ್ನಡೆಯನ್ನು 16-8ಕ್ಕೆ ಹಿಗ್ಗಿಸಿಕೊಂಡಿತು. ಉತ್ತರಾರ್ಧದಲ್ಲೂ ಸ್ಟೀಲರ್ಸ್‌ ತಂಡಕ್ಕೆ ಚೇತರಿಸಿಕೊಳ್ಳಲು ಬುಲ್ಸ್‌ ಆಟಗಾರರು ಅವಕಾಶ ನೀಡಲಿಲ್ಲ. ಸ್ಟೀಲರ್ಸ್‌ ಪರ ವಿಕಾಶ್‌ ಕಂಡೋಲಾ ಹೋರಾಟ ನಡೆಸಿದರೂ ಕೇವಲ 7 ಅಂಕಗಳನ್ನು ಗಳಿಸಲಷ್ಟೇ ಶಕ್ತರಾದರು.

ಬೆಂಗಾಲ್‌ ವಾರಿಯರ್ಸ್‌ ಮೇಲೆ ದಬಾಂಗ್‌ ಡೆಲ್ಲಿ ದರ್ಬಾರ್‌!

ಈ ಜಯದೊಂದಿಗೆ ಬೆಂಗಳೂರು ತಂಡ ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ದಾಖಲಿಸುವ ಮೂಲಕ ಒಟ್ಟು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. 18 ಅಂಕಗಳನ್ನು ಗಳಿಸಿರುವ ದಬಾಂಗ್‌ ಡೆಲ್ಲಿ ಮೊದಲ ಸ್ಥಾನದಲ್ಲಿದೆ.

ಜಯದ ಹಳಿಗೆ ಮುಂಬಾ
ವಿ. ಅಜಿತ್‌ (11 ಅಂಕ) ಮತ್ತು ಅಭಿಷೇಕ್‌ ಸಿಂಗ್‌ (10 ಅಂಕ) ಅವರ ಸ್ಥಿರ ಪ್ರದರ್ಶನದಿಂದಾಗಿ ಯು ಮುಂಬಾ ತಂಡ ಟೂರ್ನಿಯ 21ನೇ ಪಂದ್ಯದಲ್ಲಿ37-28 ಅಂಕಗಳ ಅಂತರದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿತು. ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದ ಮುಂಬಾ, ದ್ವಿತೀಯ ಪಂದ್ಯದಲ್ಲಿ ಸೋತರೆ, 3ನೇ ಪಂದ್ಯದಲ್ಲಿ ಡ್ರಾ ಫಲಿತಾಂಶ ಕಂಡಿತ್ತು.

ಹರಿಯಾಣ ಸ್ಟೀಲರ್ಸ್‌, ಪಟನಾ ಪೈರೇಟ್ಸ್‌ಗೆ ಒಲಿದ ಜಯ!

ಶುಕ್ರವಾರದ ಪಂದ್ಯಗಳು
ತಮಿಳ್‌ ತಲೈವಾಸ್‌ ವರ್ಸಸ್‌ ಪುಣೇರಿ ಪಲ್ಟನ್‌
ಪಂದ್ಯ ಆರಂಭ: ರಾತ್ರಿ 7.30
ಪಟನಾ ಪೈರೇಟ್ಸ್‌ ವರ್ಸಸ್‌ ಬೆಂಗಾಲ್‌ ವಾರಿಯರ್ಸ್‌
ಪಂದ್ಯ ಆರಂಭ: ರಾತ್ರಿ 8.30

‘ಪವನ್‌ ಪವರ್‌’, ಬೆಂಗಾಲ್‌ ಎದುರು ರೋಚಕ ಜಯ ದಾಖಲಿಸಿದ ಬುಲ್ಸ್‌!

ಬೆಂಗಳೂರು ಬುಲ್ಸ್‌ ಪಂದ್ಯಗಳ ವೇಳಾಪಟ್ಟಿ
ಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ
ಬೆಂಗಳೂರು ಬುಲ್ಸ್‌ vs ಯು ಮುಂಬಾ (ಡಿ.22)
ಬೆಂಗಳೂರು ಬುಲ್ಸ್‌ vs ತಮಿಳ್‌ ತಲೈವಾಸ್‌ (ಡಿ.24)
ಬೆಂಗಳೂರು ಬುಲ್ಸ್‌ vs ಬೆಂಗಾಲ್‌ ವಾರಿಯರ್ಸ್‌ (ಡಿ.26)
ಬೆಂಗಳೂರು ಬುಲ್ಸ್‌ vs ಹರಿಯಾಣ ಸ್ಟೀಲರ್ಸ್‌ (ಡಿ.30)
ಬೆಂಗಳೂರು ಬುಲ್ಸ್‌ vs ತೆಲುಗು ಟೈಟನ್ಸ್‌ (ಜ.01)
ಬೆಂಗಳೂರು ಬುಲ್ಸ್‌ vs ಪುಣೇರಿ ಪಲ್ಟನ್‌ (ಜ.02)
ಬೆಂಗಳೂರು ಬುಲ್ಸ್‌ vs ಜೈಪುರ ಪಿಂಕ್‌ ಪ್ಯಾಂಥರ್ಸ್‌ (ಜ.06)
ಬೆಂಗಳೂರು ಬುಲ್ಸ್‌ vs ಯುಪಿ ಯೋಧಾ (ಜ.09)
ಬೆಂಗಳೂರು ಬುಲ್ಸ್‌ vs ದಬಾಂಗ್‌ ಡೆಲ್ಲಿ (ಜ.12)
ಬೆಂಗಳೂರು ಬುಲ್ಸ್‌ vs ಗುಜರಾತ್‌ ಜಯಂಟ್ಸ್‌ (ಜ.14)
ಬೆಂಗಳೂರು ಬುಲ್ಸ್‌ vs ಪಟನಾ ಪೈರೇಟ್ಸ್‌ (ಜ.16)



Read more