Karnataka news paper

ಪಿನಾಕ ರಾಕೆಟ್ ವ್ಯವಸ್ಥೆಯ ವಿಸ್ತರಿತ ವ್ಯಾಪ್ತಿಯ ಪರೀಕ್ಷೆ ಯಶಸ್ವಿ


Source : The New Indian Express

ಪೋಖ್ರಾನ್: ಪಿನಾಕ ರಾಕೆಟ್ ವ್ಯವಸ್ಥೆಯ ವಿಸ್ತರಿತ ವ್ಯಾಪ್ತಿಯ ಸರಣಿ ಪರೀಕ್ಷೆ ಯಶಸ್ವಿಯಾಗಿದೆ.
 
ಈ ಬಗ್ಗೆ ರಕ್ಷಣಾ ಸಚಿವಾಲಯದಿಂದ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಪೋಖ್ರಾನ್ ಪ್ರದೇಶದಲ್ಲಿ ಫೈರಿಂಗ್ ರೇಂಜ್ ನ್ನು ಮೂರು ದಿನಗಳ ಕಾಲ ವಿವಿಧ ಹಂತಗಳಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು, ನಿರೀಕ್ಷಿತ ಫಲಿತಾಂಶಗಳು ದೊರೆತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಡಿಆರ್ ಡಿಒ ತಂತ್ರಜ್ಞಾನದ ವರ್ಗಾವಣೆಯ ಬಳಿಕ ಖಾಸಗಿ ಸಂಸ್ಥೆ ಪಿನಾಕ (ಇಆರ್)  ನ್ನು ನಿರ್ಮಿಸಿವೆ. ವಿವಿಧ ಶ್ರೇಣಿಗಳಲ್ಲಿ, ವಿವಿಧ ಸಿಡಿತಲೆ ಸಾಮರ್ಥ್ಯದೊಂದಿಗೆ ಪಿನಾಕ ರಾಕೆಟ್ ಗಳ ವಿಸ್ತರಿತ ಶ್ರೇಣಿಗಳನ್ನು ಪರೀಕ್ಷೆ ನಡೆಸಲಾಗಿದೆ. ಪಿನಾಕ ಎಂಕೆ-I ರಾಕೆಟ್ ವ್ಯವಸ್ಥೆ 40 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದರೆ, ಪಿನಾಕ II 60 ಕಿ.ಮೀ ದೂರವಿರುವ ಗುರಿ ತಲುಪಲು ಸಮರ್ಥವಾಗಿದೆ. 

ಇನ್ನು ಹೊಸದಾಗಿ ಪರೀಕ್ಷೆಗೊಳಗಾಗಿರುವ ಪಿನಾಕ-ಇಆರ್ (ಎಂಕೆ-1 ಆವೃತ್ತಿ) ನ ಶ್ರೇಣಿ ಇದುವರೆಗೂ ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ. 24 ರಾಕೆಟ್ ಗಳನ್ನು ವಿವಿಧ ಶ್ರೇಣಿ ಹಾಗೂ ಸಿಡಿತಲೆಗಳ ಸಾಮರ್ಥ್ಯಗಳ ಮೂಲಕ ಪರೀಕ್ಷೆಗೊಳಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. 



Read more