Karnataka news paper

ಸದ್ದು ಮಾಡುತ್ತಿದೆ ಶಿವರಾಜ್ ಕೆ.ಆರ್.ಪೇಟೆ ಧಮಾಕ ಸಿನಿಮಾದ ‘ತುಕಾಲಿ’ ಹಾಡು: ನವೀನ್ ಸಜ್ಜು ಕಂಠಸಿರಿಯಲ್ಲಿ ಹೊಸ ಫಿಲಾಸಫಿ 


Online Desk

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯನಟರಾಗಿ ಬೇರೂರುತ್ತಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕಾ ಸಿನಿಮಾದ ‘ತುಕಾಲಿ’ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 

ಇದನ್ನೂ ಓದಿ: ‘ಗಜಾನನ and ಗ್ಯಾಂಗ್’ ಫೆ.4ಕ್ಕೆ ಬೆಳ್ಳಿತೆರೆಗೆ ಎಂಟ್ರಿ‌: ಗ್ಯಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ರಘು, ಬ್ರೋ ಗೌಡ 

‘ತುಕಾಲಿ ಜೀವನ’ ಎನ್ನುವ ಹೆಸರಿನ ಕಚಗುಳಿ ಇಡುವ ಈ ಹಾಡು ಆನಂದ್ ಆಡಿಯೊ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ಲಕ್ಷ್ಮೀ ರಮೇಶ್ ಅವರು ಈ ಹಾಡನ್ನು ರಚಿಸಿದ್ದು, ಗಾಯಕ‌ ನವೀನ್ ಸಜ್ಜು ದನಿಯಾಗಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಇದನ್ನೂ ಓದಿ: ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ ‘ಬಿಜಿನೆಸ್ ಐಕಾನ್’ ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯ

ಈ ಹಿಂದೆ ಸಿಂಪಲ್ ಸುನಿ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮೀ ರಮೇಶ್ ಧಮಾಕಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನ ಹೊಣೆ ಹೊತ್ತಿದ್ದಾರೆ.  

ಇದನ್ನೂ ಓದಿ: ಬೆಂಗಳೂರು: ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್!

ಕಾಮಿಡಿ ಕಿಲಾಡಿ ಶೋ ಮೂಲಕವೇ ಗುರುತಿಸಿಕೊಂಡಿರುವ ನಯನಾ ಶರತ್ ‘ಧಮಾಕ’ ಸಿನಿಮಾದಲ್ಲಿ ಶಿವರಾಜ್ ಕೆ.ಆರ್ ಪೇಟೆ ಜೊತೆ ನಟಿಸ್ತಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಕನ್ನಡ ಚಿತ್ರಗಳ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣಾ ಸಮಯದ ಚಿತ್ರ: ಓಟಿಟಿಯಲ್ಲೂ ಶಿವಣ್ಣನ ‘ಭಜರಂಗಿ 2’ ದಾಖಲೆ

ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಹಾಲೇಶ್ ಸಿನಿಮೆಟೊಗ್ರಫಿ, ವಿನಯ್ ಕೂರ್ಗ್ ಸಂಕಲನ ಧಮಾಕಾ ಸಿನಿಮಾದಲ್ಲಿದೆ.

ಇದನ್ನೂ ಓದಿ: ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಿರುವುದು ಸಂತಸ ನೀಡಿದೆ: ದಿಗಂತ್ ‘ಹುಟ್ಟುಹಬ್ಬದ ಶುಭಾಶಯಗಳು’



Read more…