ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಪ್ರಸ್ತುತ ದಿನಗಳಲ್ಲಿ ಮಧ್ಯಮ ವರ್ಗಕ್ಕೆ ಮನೆ ಕಟ್ಟುವುದು ದೊಡ್ಡ ಸವಾಲಾಗಿದೆ. ಕಬ್ಬಿಣ, ಸಿಮೆಂಚ್, ಮರಳು ಮತ್ತಿತರ ವಸ್ತುಗಳ ಬೆಲೆ ಚಿನ್ನದ ದರದೊಂದಿಗೆ ಪೈಪೋಟಿ ನಡೆಸುತ್ತಿವೆ.
ಅಪೌಷ್ಟಿಕ ಮಕ್ಕಳಿಗೆ ಸ್ಪಿರುಲಿನಾ ‘ಬೂಸ್ಟರ್’, ಪ್ರೊಟೀನ್‌ಯುಕ್ತ ಬಿಸ್ಕೆಟ್ ವಿತರಣೆಗೆ ಕ್ರಮ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿಣದ ದರ ಶೇ.55ರಷ್ಟು ಹೆಚ್ಚಾಗಿದೆ. ಈ ಕುರಿತು ಅಧ್ಯಯನ ನಡೆಸಿ ಕಟ್ಟಡ ನಿರ್ಮಾಣ ವೆಚ್ಚ ತಗ್ಗಿಸುವಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗಿದೆ. ಬಿದಿರು ಕೂಡ ಭಾರ ತಡೆಯಬಲ್ಲದು ದೇಶದ ಯಾವುದೇ ಪ್ರದೇಶದಲ್ಲಿ ಬಿದಿರು ಬಳಸಿ ಮನೆ ನಿರ್ಮಿಸಬಹುದಾಗಿದ್ದು, ಪ್ರಸ್ತುತ ಒಂದು ಅಂತಸ್ತಿನ ಕಟ್ಟಡಕ್ಕೆ ಇದು ಹೆಚ್ಚು ಸೂಕ್ತವಾಗಿದೆ ಎಂಬುದು ತಂತ್ರಜ್ಞಾನ ಸಂಶೋಧಿಸಿದ ವಿದ್ಯಾರ್ಥಿಗಳ ಅಭಿಪ್ರಾಯ.

ವಿದ್ಯಾರ್ಥಿಗಳು
”ಒಂದು ಟನ್ ಕಬ್ಬಿಣ ತಯಾರಿಸಲು ಸುಮಾರು 2.4 ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್ ಪರಿಸರ ಸೇರುತ್ತದೆ, ಅದೇ ನಾವು ಬಿದಿರನ್ನು ಬಳಸಿ ತಯಾರಿಸಿದ ಸ್ಪ್ಯಾಬ್‌ಗಳೂ ಅಷ್ಟೇ ಗಟ್ಟಿಯಾಗಿದ್ದು, ಸುಮಾರು 700 ಕೆ.ಜಿ.ಯಷ್ಟು ಭಾರ ತಡೆದುಕೊಳ್ಳುವಲ್ಲಿ ಸಮರ್ಥವಾಗಿದೆ” ಎಂಬುದು ಯೋಜನೆಯ ರೂವಾರಿ, ವಿದ್ಯಾರ್ಥಿ ನಿಶಾಂತ್ ಅವರ ಅಭಿಪ್ರಾಯ.
ಕಮಿಷನ್ ಆಸೆಗಾಗಿ ರೋಗಿಗಳನ್ನು ‘108’ ಆಂಬ್ಯುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ಜಾಲ ಸಕ್ರಿಯ!
ಅವರ ಈ ಪ್ರಯೋಗಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯು ವರ್ಷದ ಉತ್ತಮ ಆವಿಷ್ಕಾರ ಎಂದು ಪರಿಗಣಿಸಿದೆ. ಅಲ್ಲದೆ ಈ ತಂತ್ರಜ್ಞಾನಕ್ಕೆ ಭೌತಿಕ ಹಕ್ಕು ಸ್ವಾಮ್ಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ನಿಶಾಂತ್, ಕಾರ್ತಿಕ್ ಎಂ.ಪಿ. ಮತ್ತು ಮಹೇಂದ್ರ ಹಳಮಂಡಗೆ, ಚಿರಾಗ್ ಎಚ್. ಆರ್. ಯೋಜನೆ ರೂವಾರಿಗಳಾಗಿದ್ದು, ಉಕ್ಕಿನ ಬದಲಿಗೆ ಸ್ಥಳೀಯವಾಗಿ ಲಭ್ಯವಿರುವ ಬಿದಿರನ್ನು ಬಳಸಿ ಈ ಆವಿಷ್ಕಾರ ಮಾಡಿದ್ದಾರೆ.