Karnataka news paper

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಆಲಮೇಲ, ಭಟ್ಕಳ ಪ.ಪಂ. ಚುನಾವಣಾ ಫಲಿತಾಂಶ ಅತಂತ್ರ


Online Desk

ವಿಜಯಪುರ: ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣ ಮತ್ತು ಉತ್ತರಕನ್ನಡ ಜಿಲ್ಲೆ ಭಟ್ಕಳ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಯಾವ ರಾಜಕೀಯ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರವಾಗಿದೆ.

ಇದನ್ನೂ ಓದಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಎಂ.ಕೆ ಹುಬ್ಬಳ್ಳಿ ಪಕ್ಷೇತರರ ಕಮಾಲ್, ಎಲ್ಲ 14 ವಾರ್ಡ್ ಗಳಲ್ಲಿ ಜಯ

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಅತಂತ್ರವಾಗಿದೆ. ಒಟ್ಟು 19 ಸ್ಥಾನಗಳ ಪೈಕಿ ಬಿಜೆಪಿ 9, ಕಾಂಗ್ರೆಸ್ 7, ಇತರೆ 3 ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. 

ಇದನ್ನೂ ಓದಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಬಿಡದಿ ಪುರಸಭೆ ಮತ್ತೆ ಜೆಡಿಎಸ್ ತೆಕ್ಕೆಗೆ, ಠೇವಣಿ ಕಳೆದುಕೊಂಡ ಬಿಜೆಪಿ

ಅಂತೆಯೇ ಬಿಜೆಪಿ ಶಾಸಕ ಆನಂದ ಮಾಮನಿ ಪ್ರತಿನಿಧಿಸುವ ಕ್ಷೇತ್ರ ಮುನವಳ್ಳಿ ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಒಟ್ಟು 23 ವಾರ್ಡ್ ಗಳ ಪೈಕಿ ಕಾಂಗ್ರೆಸ್- 10, ಬಿಜೆಪಿ- 10, ಜೆಡಿಎಸ್ –1, ಪಕ್ಷೇತರ- 2 ಸ್ಥಾನ ಬಂದಿದೆ. 

ಭಟ್ಕಳದಲ್ಲೂ ಅತಂತ್ರ
ಇನ್ನು ಉತ್ತರಕನ್ನಡ ಜಿಲ್ಲೆ ಭಟ್ಕಳದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಟ್ಕಳ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 4, ಬಿಜೆಪಿ 3, ಪಕ್ಷೇತರರು 5ರಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
 



Read more