Karnataka news paper

ಷೆರುಪೇಟೆಯಲ್ಲಿ ಸಕ್ರಿಯವಾಗಿರುವ ಈ ಷೇರುಗಳು ಶುಕ್ರವಾರವೂ ಟ್ರೆಂಡ್‌ ಆಗಲಿವೆ!



ಹೊಸದಿಲ್ಲಿ: ಗುರುವಾರದಂದು ಷೇರುಮಾರುಕಟ್ಟೆಯ ಬಹುತೇಕ ಜಾಗತಿಕ ಸೂಚ್ಯಂಕಗಳು ಸ್ಥಿರವಾಗಿಯೇ ಉಳಿದವು. ಬಿಎಸ್‌ಇ ಸೆನ್ಸೆಕ್ಸ್ ಕೇವಲ 12 ಅಂಕ ಇಳಿಕೆ ಕಂಡು 57,794.32 ಪಾಯಿಂಟ್ಸ್‌ಗೆ ತಲುಪಿದೆ. ಅಲ್ಲದೆ, 50 ಸೂಚ್ಯಂಕವು 17,203.95 ಪಾಯಿಂಟ್ಸ್‌ಗಿಂತ ಮೇಲೆಯೇ ವಹಿವಾಟು ಮುಗಿಸಿತಾದರೂ, 9 ಅಂಕಗಳ ಕುಸಿತದೊಂದಿಗೆ ಮುಕ್ತಾಯವಾಯಿತು. ನಿಫ್ಟಿ 50 ಸೂಚ್ಯಂಕದಲ್ಲಿ ಟಾಪ್ ಗೇನರ್‌ಗಳಲ್ಲಿ ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಡಾ. ರೆಡ್ಡೀಸ್ ಲ್ಯಾಬೊರೇಟರಿ, ವಿಪ್ರೋ ಮತ್ತು ಸಿಪ್ಲಾ ಸೇರಿವೆ. ಬಜಾಜ್ ಆಟೋ, ರಿಲಯನ್ಸ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಇಂದು ಕೆಂಪು ಬಣ್ಣದಲ್ಲಿ ಕಂಡುಬಂದವು.

ಶುಕ್ರವಾರ ಈ ಷೇರುಗಳ ಮೇಲೆ ಕಣ್ಣಿಡಿ

ಪನಾಚೆ ಡಿಜಿಲೈಫ್‌ (Panache Digilife)
ಪನಾಚೆ ಡಿಜಿಲೈಫ್‌ ಕಂಪನಿಯು ಇಸ್ರೇಲ್ ಮೂಲದ Mobileye ವಿಷನ್ ಟೆಕ್ನಾಲಜೀಸ್ ಜೊತೆಗೆ ಭಾರತೀಯ ಮಾರುಕಟ್ಟೆಗೆ ರೆಟ್ರೋಫಿಟ್ ಸುರಕ್ಷತಾ ಸಲಕರಣೆಗಳ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದೆ. ಇಸ್ರೇಲಿ ಕಂಪನಿಯು ಇಸ್ರೇಲ್ ಮೂಲದ ಸ್ವಾಯತ್ತ ಡ್ರೈವಿಂಗ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಗಾಗಿ ದೃಷ್ಟಿ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಉತ್ಪಾದನಾ ಅವಕಾಶಗಳ ವಿಷಯದಲ್ಲಿ ಪನಾಚೆ ಈ ಸಂಬಂಧಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ, ಇದು ಸ್ವಾವಲಂಬಿ ಭಾರತ ನೀತಿಯ ಭಾಗವಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಸರ್ಕಾರ ಪ್ರೋತ್ಸಾಹಿಸುವುದರಿಂದ ಕಾಲಾನಂತರದಲ್ಲಿ ತೆರೆದುಕೊಳ್ಳಬಹುದು.

ರಾಮ ಸ್ಟೀಲ್ ಟ್ಯೂಬ್ಸ್
ರಾಮಾ ಸ್ಟೀಲ್ ಟ್ಯೂಬ್ಸ್ ಲಿಮಿಟೆಡ್ (RSTL), ಸ್ಟೀಲ್ ಟ್ಯೂಬ್ ಉದ್ಯಮದಲ್ಲಿ ಪ್ರಮುಖ ಉತ್ಪಾದಕ ಕಂಪನಿ. ಇದು ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ (UPPCL) ನಿಂದ ಒಟ್ಟು 4.33 ಕೋಟಿ ರೂಪಾಯಿ ಮೊತ್ತದ ಆರ್ಡರ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರಾಥಮಿಕವಾಗಿ ತಲಾ 580 ಮೆಟ್ರಿಕ್‌ ಟನ್‌ನ 2500 ವಿದ್ಯುತ್ ಕಂಬಗಳ ಪೂರೈಕೆಗೆ ಆದೇಶವಾಗಿದೆ. ಈ ಆರ್ಡರ್‌ಗಳು RSTLನ ಆರ್ಡರ್ ಬುಕ್ ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ. RSTL 2O ಶೇಕಡಾ ರಫ್ತು ದರವನ್ನು ಹೊಂದಿದೆ ಮತ್ತು 16 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸ್ತುತವಾಗಿದೆ.

52 ವಾರಗಳ ಗರಿಷ್ಠ ಮಟ್ಟ ತಲುಪಿದ ಷೇರುಗಳು:
ಟೆಕ್ ಮಹೀಂದ್ರಾ ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಗುರುವಾರ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಶುಕ್ರವಾರ, ಡಿಸೆಂಬರ್ 31, 2021 ರಂದು ಸ್ಟಾಕ್ ಗಮನದಲ್ಲಿ ಉಳಿಯುವ ಸಾಧ್ಯತೆಯಿದೆ.

ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ.
ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.

ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್‌ ಸ್ಟ್ರೀಟ್‌ ಇನ್ವೆಸ್ಟ್‌ಮೆಂಟ್‌ ಜರ್ನಲ್‌ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್‌ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.



Read more…