Karnataka news paper

WATCH: ಹತ್ತು ರೂಪಾಯಿಗೆ ಸ್ವರ್ಗ ತೋರಿಸಲು ಬಂದ ಚಂದನ್‌ ಶೆಟ್ಟಿ, ರಚಿತಾ ರಾಮ್‌


ರ‍್ಯಾಪ್‌ ಹಾಡುಗಳ ಮೂಲಕ ಯುವ ಹೃದಯಗಳಿಗೆ ಲಗ್ಗೆ ಹಾಕುವ ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಈಗ ಹೊಸತೊಂದು ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ.

ನೂತನ ವರ್ಷ(2022) ಸ್ವಾಗತಿಸುವ ಸಂದರ್ಭದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಯುಟ್ಯೂಬ್‌ನಲ್ಲಿ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಚಂದನವನದ ನಟಿ ರಚಿತಾ ರಾಮ್‌ ಈ ಹಾಡಿನಲ್ಲಿ ಚಂದನ್‌ ಶೆಟ್ಟಿ ಜತೆಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ. ಈ ಜೋಡಿ ಅಭಿಮಾನಿಗಳಿಗೆ ಕೇವಲ ₹10ಗಳಲ್ಲಿ ಸ್ವರ್ಗ ತೋರಿಸಲು ಮುಂದಾಗಿದೆ! 

ವಿಡಿಯೊ ಸಾಂಗ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 18.5ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದು ವಿಶೇಷ. ಹಾಡಿನಲ್ಲಿ ಬಾಲ ಕಲಾವಿದೆ ಬಿಂದ್ಯಾ ಕೆ. ಗೌಡ, ರಚಿತಾ ರಾಮ್‌, ಚಂದನ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 

ಈ ಮ್ಯೂಸಿಕ್​ ವಿಡಿಯೊವನ್ನು ಆರ್​. ಕೇಶವ್​ ನಿರ್ಮಾಣ ಮಾಡಿದ್ದಾರೆ. ಶೇಖರ್​ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​ ಸಂಕಲನ, ಮುರಳಿ ಮಾಸ್ಟರ್​ ನೃತ್ಯ ನಿರ್ದೇಶನ, ಮೋಹನ್​ ಬಿ. ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ನಂದಕಿಶೋರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. 



Read More…Source link