ಹೈಲೈಟ್ಸ್:
- ಮೊದಲ ಬಾರಿಗೆ ವಿಡಿಯೋ ಆಲ್ಬಂ ಸಾಂಗ್‌ನಲ್ಲಿ ರಚಿತಾ ರಾಮ್ ಮಿಂಚಿಂಗ್
- ರಚಿತಾ ರಾಮ್ ಜೊತೆಗೆ ಹೆಜ್ಜೆ ಹಾಕಿದ ಚಂದನ್ ಶೆಟ್ಟಿ
- ಅದ್ದೂರಿ ವೆಚ್ಚದ ‘ಲಕಲಕ ಲ್ಯಾಂಬೋರ್ಗಿನಿ’ ಹಾಡು ರಿಲೀಸ್
‘ಹೊಸವರ್ಷದ ಆರಂಭದಲ್ಲಿ ಹೊಸ ಗೀತೆ ಬಿಡುಗಡೆ ಮಾಡುವುದು ವಾಡಿಕೆ. ಕಳೆದ ನಾಲ್ಕು ವರ್ಷಗಳಿಂದ ಹೊಸವರ್ಷಕ್ಕೆ ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್, ಪಾರ್ಟಿ ಫ್ರೀಕ್.. ಈಗ ‘ಲಕ ಲಕ ಲ್ಯಾಂಬೋರ್ಗಿನಿ’ ರಿಲೀಸ್ ಮಾಡಿದ್ದೇವೆ. ರೈತ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಲು ಮುಂದಾದರು. ಈ ಹಾಡನ್ನು ಈ ಹಿಂದೆಯೇ ರಿಲೀಸ್ ಮಾಡಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಉದ್ದೇ ಕೂಡ ಇತ್ತು. ಆದರೆ ಕೊರೊನಾದಿಂದ ಸಾಧ್ಯವಾಗಲಿಲ್ಲ. ನಾನು ಇಲ್ಲಿಯವರೆಗೂ ಮಾಡಿರುವ ಸಾಂಗ್‌ನಲ್ಲೇ ಅಪಾರವೆಚ್ಚದ ಹಾಡು ಇದು’ ಎನ್ನುತ್ತಾರೆ ಚಂದನ್ ಶೆಟ್ಟಿ.
‘ನಾನು ಅನೇಕ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್‌ಗೆ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೀನಿ. ಮಕ್ಕಳು ಹುಟ್ಟುಹಬ್ಬಕ್ಕೆ ಚಾಕೊಲೇಟ್, ಬಿಸ್ಕತ್ತು, ಗಿಫ್ಟ್ ಮುಂತಾದವುಗಳನ್ನು ಕೇಳುತ್ತಾರೆ. ಆದರೆ ಬಿಂದ್ಯಾ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, 100 ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು’ ಎಂದು ಹೇಳಿದರು ನಿರ್ದೇಶಕ ನಂದ ಕಿಶೋರ್.
‘ಮಕ್ಕಳು ಬರ್ತ್‌ಡೇ ಚಾಕೊಲೇಟ್ ಕೇಳ್ತಾರೆ, ಆದ್ರೆ ಈ ಹುಡುಗಿ ಆಲ್ಬಂ ಸಾಂಗ್ ಕೇಳಿದ್ದಾಳೆ’- ನಂದ ಕಿಶೋರ್
ನನ್ನ ಆಲೋಚನೆಯಲ್ಲಿ ಇದು ಇರಲ್ಲಿಲ್ಲ. ನನ್ನ ಮಗಳು ಬಿಂದ್ಯಾಳನ್ನು ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ‘ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು’ ಎಂದು ಆಸೆಪಟ್ಟಳು. ನಂತರ ಕೆ. ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿದೆ. ಈ ಹಾಡು ನಿರ್ಮಾಣವಾಗಲು ನನ್ನ ಮಗಳು ಬಿಂದ್ಯಾ ಕಾರಣ. ಚಂದನ್ ಶೆಟ್ಟಿ, ರಚಿತಾ ರಾಮ್ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ’ ಎಂದರು ಮಾಹಿತಿ ನೀಡುತ್ತಾರೆ ಕೇಶವ್.
‘ಲಕ ಲಕ ಲಾಂಬೋರ್ಗಿನಿ’ ಮೂಲಕ 10 ರೂಪಾಯಿಗೆ ಸ್ವರ್ಗ ತೋರಿಸಿದ ರಚಿತಾ & ಚಂದನ್ ಶೆಟ್ಟಿ
ಈ ಹಾಡಿಗೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದರೆ, ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಈ ಹಾಡಿಗೆ ಮುರಳಿ ಅವರ ನೃತ್ಯ ನಿರ್ದೇಶನವಿದ್ದರೆ ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ, ನಿರ್ಮಾಪಕ ಕೇಶವ್ ಅವರ ಪತ್ನಿ ಇಂದಿರಾ, ನಿರ್ಮಾಪಕ ಕೆ. ಮಂಜು ಅವರು ಉಪಸ್ಥಿತರಿದ್ದರು.
‘ಲಕ ಲಕ ಲಾಂಬೋರ್ಗಿನಿ’ ಮೂಲಕ 10 ರೂಪಾಯಿಗೆ ಸ್ವರ್ಗ ತೋರಿಸಿದ ರಚಿತಾ & ಚಂದನ್ ಶೆಟ್ಟಿ