Karnataka news paper

ಬಾಲ್ಯದ ಗೆಳೆಯ ವಿಕ್ಕಿಯ ಮದುವೆ ಮಾಡಿ, ಸಫಾರಿ ಮಾಡಿದ ನಟಿ ಮಾಳವಿಕಾ


ಜೈಪುರ: ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಅವರ ಬಾಲ್ಯ ಗೆಳತಿ ಹಾಗೂ ನಟಿ ಮಾಳವಿಕಾ ಮೋಹನನ್‌ ಅವರು ರಾಜಸ್ಥಾನಲ್ಲಿ ಸಫಾರಿ ಮಾಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಓದಿ: 

ವಿಕ್ಕಿ ಕೌಶಲ್‌ ಹಾಗೂ ನಟಿ ಕತ್ರಿನಾ ಕೈಫ್‌ ಮದುವೆಯಲ್ಲಿ ಭಾಗವಹಿಸಿದ್ದ ಮಾಳವಿಕಾ, ವಿವಾಹ ಕಾರ್ಯಕ್ರಮ ಮುಗಿದ ಬಳಿಕ ಇಲ್ಲಿನ ರಣತಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ ಸಹೋದರನೊಂದಿಗೆ ಸಫಾರಿ ಮಾಡಿದ್ದಾರೆ.

ಮಾಳವಿಕಾ ಅವರು ಸಹೋದರನೊಂದಿಗೆ ಸಫಾರಿ ಮಾಡಿರುವ ವಿಡಿಯೊಗಳು ಹಾಗೂ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರ ಪಕ್ಕದಲ್ಲೇ ಹುಲಿ ಹಾದು ಹೋಗಿರುವುದು ವಿಶೇಷ. ಅದರ ಚಿತ್ರ ಹಾಗೂ ವಿಡಿಯೊವನ್ನು ಶೇರ್‌ ಮಾಡಿದ್ದಾರೆ.

ಮಾಳವಿಕಾ ಅವರಿಗೆ ವಿಕ್ಕಿ ಕೌಶಲ್‌ ಅವರು ಮದುವೆಗೆ ಆಮಂತ್ರಣ  ನೀಡಿದ್ದರು. ಅವರು ಆಹ್ವಾನಿಸಿದ್ದ ಕೆಲವೇ ಜನರಲ್ಲಿ ಮಾಳವಿಕಾ ಕೂಡ ಒಬ್ಬರು. 

ಓದಿ: 

ಕತ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ಇಲ್ಲಿನ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಗುರುವಾರ ಮದುವೆಯಾದರು.  ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ನಡೆದಿತ್ತು.





Read More…Source link