Personal Finance
ಡಿಸೆಂಬರ್ 31 ರ ಒಳಗೆ ನೀವು ಹಲವಾರು ಕಾರ್ಯಗಳನ್ನು ಮಾಡಬೇಕಾಗಿದೆ. ಅಂದರೆ ನಿಮ್ಮ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಹಲವು ಯೋಜನೆಗಳ ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ. ಇತ್ತೀಚೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇ ನಾಮಿನೇಷನ್‌ಗೆ ಸಂಬಂಧಿಸಿದ ಮಹತ್ವದ ಸೂಚನೆಯನ್ನು ನೀಡಿದೆ. ಹಾಗೆಯೇ ಪಿಎಫ್ ಖಾತೆ ಹೊಂದಿರುವವರು ತಮ್ಮ ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಲು ಕೊನೆಯ ದಿನಾಂಕ 31, 2021 ಎಂದು ಹೇಳಿದೆ. ಆದರೆ ನೀವು ಈ ದಿನಾಂಕ ಕಳೆದ ಬಳಿಕವೂ ಇ ನಾಮಿನಿ ಸೇರ್ಪಡ ಮಾಡಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ…
ನೀವು ಕೊನೆಯ ದಿನಾಂಕದ ಬಳಿಕವೂ ಇ ನಾಮಿನಿಯನ್ನು ಸೇರ್ಪಡೆ ಮಾಡಬಹುದು ಎಂಬ ವಿಚಾರವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿದೆ. ನಿಮ್ಮ ಪಿಎಫ್ ಖಾತೆಗೆ ನಾಮಿನಿ ಸಲ್ಲಿಕೆ ಮಾಡಲು ಯಾವುದೇ ಕೊನೆಯ ದಿನಾಂಕ ಇಲ್ಲ ಎಂದು ಇಪಿಎಫ್‌ಒ ತಿಳಿಸಿದೆ. ಅಂದರೆ ಇ ನಾಮಿನಿ ಸಲ್ಲಿಕೆ ಮಾಡುವವರು ಡಿಸೆಂಬರ್ 31ರ ಬಳಿಕವೂ ಇ ನಾಮಿನಿಯನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.
ಗೂಗಲ್ ಪೇನಲ್ಲಿ ಹೆಚ್ಚುವರಿ ಯುಪಿಐ ಐಡಿ ರಚಿಸುವುದು ಹೇಗೆ?, ಇಲ್ಲಿದೆ ಮಾಹಿತಿ
ಆದರೆ ಇಂದೇ ನೀವು ಇ ನಾಮಿನಿಯನ್ನು ಸಲ್ಲಿಕೆ ಮಾಡಿದರೆ ನಿಮಗೆ ಅತೀ ಸರಳವಾದ ರೀತಿಯಲ್ಲಿ ಪ್ರಕ್ರಿಯೆ ನಡೆಯಲಿದೆ. ಈಗ ನೀವು ಇ ನಾಮಿನಿ ಸೇರ್ಪಡೆ ಮಾಡಿದರೆ ಸರಳ, ಪೇಪರ್ ದಾಖಲೆಗಳ ಅಗತ್ಯವಿಲ್ಲದೆ, ಯಾವುದೇ ಪರಸ್ಪರ ಸಂಪರ್ಕವಿಲ್ಲದೆಯೇ ಸೇರ್ಪಡೆ ಮಾಡಬಹುದು. ನೀವು ಎಷ್ಟು ಶೀಘ್ರವಾಗಿ ಇ ನಾಮಿನಿಯನ್ನು ಸೇರ್ಪಡೆ ಮಾಡಿಕೊಳ್ಳುತ್ತೀರೋ ನಿಮಗೆ ಪಿಎಫ್ ಪಡೆಯಲು, ಪಿಂಚಣಿ ಪಡೆಯಲು, ವಿಮೆ ಪಡೆಯಲು ಅಷ್ಟು ಸುಲಭವಾಗಲಿದೆ. ನೀವು ಆನ್‌ಲೈನ್ ಮೂಲಕವೂ ಇ ನಾಮಿನಿಯನ್ನು ಸೇರ್ಪಡೆ ಮಾಡಬಹುದು. ಹಾಗಾದರೆ ಹೇಗೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ…

ನಿಮ್ಮ PF ಖಾತೆಗೆ ಇ-ನಾಮಿನೇಷನ್ ಸಲ್ಲಿಸುವುದು ಹೇಗೆ?
* ಮೊದಲು EPFO ವೆಬ್‌ಸೈಟ್ epfindia.gov.in. ಗೆ ಭೇಟಿ ನೀಡಿ
* ‘Services’ ಆಯ್ಕೆಯ ಕೆಳಗೆ ‘For Employees’ ಅನ್ನು ಆಯ್ಕೆ ಮಾಡಿ
* ‘Member UAN/Online Service (OCS/OTCP)’ ಆಯ್ಕೆಯನ್ನು ಕ್ಲಿಕ್ ಮಾಡಿ
* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ
* ‘Manage’ ಪೇಜ್‌ನಲ್ಲಿ e-nomination ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಈಗ ‘Provide Details’ ಪುಟವು ತೆರೆಯಲಿದೆ
* ಆ ಬಳಿಕ ‘Save’ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಕುಟುಂಬದ ಡಿಕ್ಲೆರೇಷನ್ ಹಾಗೂ ಕುಟುಂಬದ ವಿವರಗಳನ್ನು ಸೇರಿಸಲು ಅಥವಾ ನಾಮಿನಿ ವಿವರಗಳನ್ನು ಬದಲಾಯಿಸಲು, ‘yes’ ಎಂದು ಕ್ಲಿಕ್ ಮಾಡಿ
* ‘Add Family Details’ ಮೇಲೆ ಕ್ಲಿಕ್ ಮಾಡಿ
* ‘Nomination Details’ ಕ್ಲಿಕ್ ಮಾಡಿ ನಾಮಿನಿಯ ಎಲ್ಲಾ ಮಾಹಿತಿಯನ್ನು ಇಲ್ಲಿ ಸಲ್ಲಿಕೆ ಮಾಡಿ
* ನೀವು ಹೆಚ್ಚು ನಾಮಿನಿಯನ್ನು ಸೇರ್ಪಡೆ ಮಾಡಲು ಬಯಸಿದರೆ ‘Add New’ ಆಯ್ಕೆ ಮಾಡಿ
* ಹೆಚ್ಚುವರಿ ನಾಮಿನಿಗಳ ಮಾಹಿತಿಯನ್ನು ಉಲ್ಲೇಖ ಮಾಡಿ
* ಬಳಿಕ ‘Save EPF Nomination’ ಮೇಲೆ ಕ್ಲಿಕ್ ಮಾಡಿ
* ನಂತರ ಒಟಿಪಿ ಪಡೆಯಲು ‘E-sign’ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ಹಾಕಿದರೆ ನಿಮ್ಮ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮೆಸೇಜ್ ಸ್ಕ್ರೀನ್ ಮೇಲೆ ಬರಲಿದೆ
English summary
You Can File e-Nomination For PF Account Even After 31st December: How, Here’s details
You Can File e-Nomination For PF Account Even After 31st December: How, Here’s details
Story first published: Thursday, December 30, 2021, 15:07 [IST]