ಹೈಲೈಟ್ಸ್:
- ಬಿಜೆಪಿ ಸಮಾರಂಭದಲ್ಲಿ ‘ಪುಷ್ಪ’ ಚಿತ್ರದ ಡೈಲಾಗ್ ಹೊಡೆದ ರಾಜಕಾರಣಿ
- ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ
- ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ‘ಪುಷ್ಪ’
ಬಿಜೆಪಿ ಉಸ್ತುವಾರಿ ಹೇಳಿದ್ದೇನು?
ಆಂಧ್ರಪ್ರದೇಶದಲ್ಲಿ ನಡೆದ ಪ್ರಜಾ ಆಗ್ರಹ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಆಂಧ್ರಪ್ರದೇಶದ ಸಹ ಉಸ್ತುವಾರಿ ಸುನೀಲ್ ದಿಯೋದರ್ ಮಾತನಾಡುತ್ತಾ, ನಾನು ಸಹ ಪುಷ್ಪ ಸಿನಿಮಾ ನೋಡಿದೆ. ನಾನು ಜಗನ್ ಮೋಹನ್‌ರೆಡ್ಡಿಯವರಿಗೆ ಕೇಳುತ್ತಿದ್ದೇನೆ. ಬಿಜೆಪಿ ಅಂದ್ರೆ ಫ್ಲವರ್ ಅಂದುಕೊಂಡೆಯಾ ಅಲ್ಲ, ಬಿಜೆಪಿ ಅಂದ್ರೆ ಫೈಯರ್ ಎಂದಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸಿನಿಮಾ
‘ಪುಷ್ಪ’ ಸಿನಿಮಾ ಆರಂಭದಿಂದಲೂ ಹಾಡು, ಡ್ಯಾನ್ಸ್, ಡೈಲಾಗ್, ಟ್ರೈಲರ್‌ನಿಂದ ಭಾರೀ ಕುತೂಹಲ ಮೂಡಿಸಿತ್ತು. ಐದು ಭಾಷೆಗಳಲ್ಲಿ ರಿಲೀಸ್ ಆಗಿರುವ ‘ಪುಷ್ಪ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ನಟಿ ಸಮಂತಾ ಅವರ ‘oo antava oo oo antava’ ಹಾಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಇನ್ನು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಸ್ಟೆಪ್‌ಗಳನ್ನು ಸಾಕಷ್ಟು ಜನರು ಅನುಕರಣೆ ಮಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದರು.
Pushpa: ‘’ಸುಕುಮಾರ್ ಇಲ್ಲದೆ ನಾನೇನೂ ಅಲ್ಲ’’ ಅಂತ್ಹೇಳಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್
ಭರ್ಜರಿ ಕಲೆಕ್ಷನ್
‘ಪುಷ್ಪ’ ಚಿತ್ರ ಇದುವರೆಗೂ 275 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಜನವರಿ 6 ರವರೆಗೆ 325 ರಿಂದ 350 ಕೋಟಿ ರೂಪಾಯಿ ಗಳಿಕೆ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ನಿರ್ಮಾಪಕರು ಹೇಳಿಕೆ ನೀಡಿದ್ದಾರೆ. ಮೊದಲ ದಿನದ ಗಳಿಕೆಯಷ್ಟೇ 11ನೇ ದಿನವೂ ಕಲೆಕ್ಷನ್ ಆಗುತ್ತಿದೆ ಎಂದು ನಿರ್ದೇಶಕ ಸುಕುಮಾರ್ ಹೇಳಿದ್ದಾರೆ.
ಹೆಚ್ಚು ಭಾಷೆಯಲ್ಲಿ ರಿಲೀಸ್ ಆಗಲಿದೆ ‘ಪುಷ್ಪ 2’
‘ದಕ್ಷಿಣ ಭಾರತಕ್ಕೆ ಧನ್ಯವಾದಗಳು. ಬರೀ ಡಿಜಿಟಲ್ ಮಾಧ್ಯಮದ (ಯೂಟ್ಯೂಬ್ ಸೆಟಲೈಟ್) ಮೂಲಕ ಮಾತ್ರವಲ್ಲ ಖುದ್ದಾಗಿ ಥಿಯೇಟರ್ ಗೆ ಬಂದು ಪ್ರೀತಿಯನ್ನು ಹಂಚುತ್ತೇವೆ ಎಂದು ನೀವು ಸಾಬೀತು ಪಡಿಸಿದ್ದಿರಿ. ಪುಷ್ಪ 2 ಚಿತ್ರವನ್ನು ಭಾರತದ ಅತೀ ಹೆಚ್ಚು ಭಾಷೆಯಲ್ಲಿ ರಿಲೀಸ್ ಮಾಡುವುದರ ಮೂಲಕ ದೇಶದಲ್ಲಿ ಹಿಂದೆಂದು ಆಗಿರದ ಸಾಹಸವನ್ನು ಮಾಡಲು ನಾನು ಯೋಜನೆಯನ್ನು ಮಾಡುತ್ತಿದ್ದೇನೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
‘ಪುಷ್ಪ’ ಪಾರ್ಟ್ 2ರಲ್ಲಿ ‘ಡಾಲಿ’ ಧನಂಜಯ್ ನಟಿಸುತ್ತಾರೋ, ಇಲ್ಲವೋ? ಸುಕುಮಾರ್ ನೀಡಿದ್ರು ಸ್ಪಷ್ಟನೆ
ನಟ ಡಾಲಿ ಧನಂಜಯ, ಫಹಾದ್ ಫಾಸಿಲ್, ಸುನೀಲ್, ಅಜಯ್ ಘೋಷ್, ರಮೇಶ್ ರಾವ್, ಅನಸೂಯಾ ಭಾರದ್ವಾಜ್, ಶತ್ರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ, ಸುಕುಮಾರ್ ನಿರ್ದೇಶನ, Mirosław Kuba Brożek ಕ್ಯಾಮರಾ ಕೆಲಸ, ಕಾರ್ತಿಕ್ ಶ್ರೀನಿವಾಸ್ ಸಂಕಲನ ಈ ಚಿತ್ರಕ್ಕಿದೆ.