Personal Finance
ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಸುಮಾರು 18 ತಿಂಗಳ ಡಿಎ ಬಾಕಿಯನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಿಂದಾಗಿ ತಮ್ಮ ಬಾಕಿ ಹಣವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಲು ಕೇಂದ್ರ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಈ ಹೊಸ ವರ್ಷದಲ್ಲಿ ಎರಡು ಲಕ್ಷ ಸಿಗಲಿಯೇ ಎಂಬ ಸುದ್ದಿ ಆಗುತ್ತಿದೆ.
ಹೌದು ಕೇಂದ್ರ ಸರ್ಕಾರವು ಸುಮಾರು 18 ತಿಂಗಳ ಡಿಎಯನ್ನು ಸರ್ಕಾರಿ ನೌಕರರಿಗೆ ನೀಡಬೇಕಾಗಿದೆ. ಇದು ಸರಿ ಸುಮಾರು ಎರಡು ಲಕ್ಷ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಹೊಸ ವರ್ಷದಲ್ಲಿ ಈ ಡಿಎ ಬಾಕಿ ಹಣ ಎರಡು ಲಕ್ಷ ರೂಪಯಿ ಲಭಿಸುವ ಸಾಧ್ಯತೆ ಇದೆಯೇ ಎಂದು ನೌಕರರು ಕಾಯುತ್ತಿದ್ದಾರೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಡಿಎ ಹೆಚ್ಚಳವಾದಂತೆ ಆಗಲಿದೆ ವೇತನ ಹೆಚ್ಚಳ
ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ನೀಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಈ ತುಟ್ಟಿ ಭತ್ಯೆಯನ್ನು ಶೇಕಡ 17 ರಿಂದ ಶೇಕಡ 31 ಕ್ಕೆ ಏರಿಕೆ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಅಧಿಕವಾಗಿದೆ. ಆದರೆ ಈವರೆಗೂ ಡಿಎ ಬಾಕಿ ನೌಕರರ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ.

ಹೊಸ ವರ್ಷಕ್ಕೆ ಡಿಎ ಜಮೆ ಆಗುತ್ತಾ?
ಈ ನಡುವೆ ಹೊಸ ವರ್ಷದಲ್ಲಿ ಡಿಎ ಬಾಕಿ ಹಣ ಸರ್ಕಾರಿ ನೌಕರರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ವರದಿ ಆಗಿದೆ. ಡಿಎ ಬಾಕಿಯನ್ನು ಸರ್ಕಾರವು ಜಮೆ ಮಾಡಿದರೆ, ಈ ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸುಮಾರು ಎರಡು ಲಕ್ಷ ರೂಪಾಯಿ ದೊರೆಯುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಡಿಎ ಬಾಕಿಯನ್ನು ನೌಕರರ ಖಾತೆಗೆ ಜಮೆ ಮಾಡುವ ವಿಚಾರವಾಗಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದೆ.
ಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ
ಎಷ್ಟು ತುಟ್ಟಿಭತ್ಯೆ ಅಥವಾ ಡಿಎ ಲಭಿಸಲಿದೆ?
ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ ನ ಶಿವ ಗೋಪಾಲ್ ಮಿಶ್ರಾರ ಪ್ರಕಾರ, ಶ್ರೇಣಿ ಒಂದರ ನೌಕರರಿಗೆ ಸುಮಾರು ರೂಪಾಯಿ 11,880ರಿಂದ 37,554ರವೆಗೆ ಡಿಎ ಲಭಿಸಲಿದೆ. ಈ ಸಂದರ್ಭದಲ್ಲೇ ಶ್ರೇಣಿ 13 ರ ಹಾಗೂ 14 ರ ನೌಕರರಿಗೆ ಮೂಲ ವೇತನ ರೂಪಾಯಿ 1,23,100ರಿಂದ ರೂಪಾಯಿ 2,15,900 ಆಗಿದ್ದರೆ, ಸುಮಾರು 1,44,200-2,18,200 ರೂಪಾಯಿವರೆಗೆ ಡಿಎ ಲಭಿಸಲಿದೆ.
English summary
Central govt employees to get upto Rs 2 lakh in New Year as 18-months DA arrears?
Central govt employees to get upto Rs 2 lakh in New Year as 18-months DA arrears?.
Story first published: Thursday, December 30, 2021, 12:43 [IST]