ಹೈಲೈಟ್ಸ್:
- ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 12ನೇ ವರ್ಷದ ಪುಣ್ಯತಿಥಿ
- ಅಭಿಮಾನಿಗಳ ಮನದಲ್ಲಿ ಡಾ.ವಿಷ್ಣುವರ್ಧನ್ ಅಮರ
- ಡಾ.ವಿಷ್ಣುವರ್ಧನ್‌ರನ್ನು ಸ್ಮರಿಸಿದ ರಾಜಕಾರಣಿಗಳು, ತಾರೆಯರು
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
“ನಾಡಿನ ಖ್ಯಾತ ಕಲಾವಿದ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಭೌತಿಕವಾಗಿ ಅಭಿನಯ ಭಾರ್ಗವ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಸಹೃದಯತೆ, ಕಲಾವಂತಿಕೆಗಳಿಂದ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ”: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಡಾ.ಕೆ.ಸುಧಾಕರ್
‘’ಕನ್ನಡ ಚಿತ್ರರಂಗದ ಮೇರು ನಟ, ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಪುಣ್ಯತಿಥಿಯಂದು ಅವರಿಗೆ ಭಾವಪೂರ್ಣ ನಮನಗಳು’’
ಸಿ.ಪಿ.ಯೋಗೇಶ್ವರ
‘’ನಾಡಿನ ಖ್ಯಾತ ಕಲಾವಿದ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು’’
ಬಿ.ವೈ.ರಾಘವೇಂದ್ರ
‘’ಕನ್ನಡ ಚಿತ್ರರಂಗದ ಆಪ್ತಮಿತ್ರ, ಮೇರು ಕಲಾವಿದ, ಸಾಹಸ ಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಮನೆಮನಗಳಲ್ಲಿ ಇವರ ಕಲೆ ಎಂದಿಗೂ ಜೀವಂತ. ಇವರ ಅಪಾರ ಭಾಷಾಭಿಮಾನ, ನಾಡಿನ ಮೇಲಿನ ಪ್ರೀತಿ ಮತ್ತು ಅಭಿಮಾನಿಗಳಿಗೆ ನೀಡಿದ ಗೌರವ ಎಲ್ಲರಿಗೂ ಪ್ರೇರಣೆ’’
ಬಿ.ಎಸ್.ಯಡಿಯೂರಪ್ಪ
‘’ನಾಡು ಕಂಡ ಅಪ್ರತಿಮ ಕಲಾವಿದ, ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಆ ಮೇರು ನಟನಿಗೆ ನಮಿಸೋಣ. ತಮ್ಮ ಸಹೃದಯಿ ವ್ಯಕ್ತಿತ್ವ, ಪ್ರತಿಭೆ, ನಟನಾ ಚಾತುರ್ಯ, ಸಾಮಾಜಿಕ ಕಳಕಳಿಯ ಮೂಲಕ ನಾಡು ನುಡಿಗೆ ಅಪಾರ ಸೇವೆ ಸಲ್ಲಿಸಿರುವ ಅವರು ಅಭಿಮಾನಿಗಳ ಪಾಲಿಗೆ ಎಂದೆಂದಿಗೂ ಅಮರರಾಗಿದ್ದಾರೆ’’
ಆರ್.ಅಶೋಕ್
‘’ಕನ್ನಡ ಚಿತ್ರರಂಗದ ದಿಗ್ಗಜ ನಟ, ಅಭಿಮಾನಿಗಳ ಆರಾಧ್ಯ ದೈವ ಡಾ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ದಿನವಾದ ಇಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು’’
ಜಗ್ಗೇಶ್
‘’ಕನ್ನಡ ಮನಗಳ 40 ವರ್ಷ ಕಲೆಯಂಬ ಸಿಹಿ ತಿನಿಸಿ, ಪ್ರೀತಿ ಎಂಬ ಮುದ್ರೆಯೊತ್ತಿ ನಮ್ಮ ಅಗಲಿದರು. ನಮ್ಮಲ್ಲೆ ಇರುವ ಭಾವ ತುಂಬಿದ ಶ್ರೀ ವಿಷ್ಣುರವರು ನಮ್ಮ ಅಗಲಿ ಇಂದಿಗೆ 12ನೇ ವರ್ಷ. ಎಲ್ಲೆ ಇರಲಿ ನಿಮ್ಮ ಆತ್ಮ ಆನಂದ ಸ್ವರೂಪದಲ್ಲಿ ಮಜ್ಜನವಾಗಿರಲಿ..ಹರಿಃಓಂ’’
ಡಾ.ಅಶ್ವತ್ಥನಾರಾಯಣ್.ಸಿ.ಎನ್
‘’ನಾಗರಹಾವು ಚಲನಚಿತ್ರದಲ್ಲಿ ರಾಮಾಚಾರಿಯಾಗಿ ಗುರುತಿಸಿಕೊಂಡು, ಸಾಹಸ ಸಿಂಹನಾಗಿ ಬೆಳೆದು ನಾಡಿನ ಚಿತ್ರರಂಗವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಹೃದಯವಂತ ಡಾ. ವಿಷ್ಣುವರ್ಧನ್ ಅವರ ಪುಣ್ಯ ತಿಥಿಯಂದು ಗೌರವಪೂರ್ವಕ ನಮನಗಳು. ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಮೂಲಕ ಅವರು ಜನಮಾನಸದಲ್ಲಿ ಅಮರರಾಗಿದ್ದಾರೆ’’
ಬಿ.ಸಿ.ಪಾಟೀಲ್
‘’ಮನೋಜ್ಞ ಅಭಿನಯದ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ ಕನ್ನಡ ಚಿತ್ರರಂಗದ ಮೇರು ನಟ, ಅಭಿನಯ ಭಾರ್ಗವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಗೌರವದ ಪ್ರಣಾಮಗಳು’’