Karnataka news paper

ಅಮಿತಾಭ್ ಬಚ್ಚನ್ ಬಂಗಲೆಯನ್ನು ಬಾಡಿಗೆಗೆ ಪಡೆದ ನಟಿ ಕೃತಿ ಸನೊನ್


ಬೆಂಗಳೂರು: ನಟಿ ಕೃತಿ ಸನೊನ್ ಅವರು ಮುಂಬೈಯ ಅಂಧೇರಿಯಲ್ಲಿ ಹೊಸ ಬಂಗಲೆಗೆ ತೆರಳಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಮಾಲೀಕತ್ವದ ಬಂಗಲೆ ಅದಾಗಿದ್ದು, ಕೃತಿ ಸನೊನ್ ಪ್ರತಿ ತಿಂಗಳು ₹10 ಲಕ್ಷ ಬಾಡಿಗೆ ನೀಡಲಿದ್ದಾರೆ.

‘ಮನಿ ಕಂಟ್ರೊಲ್’ ವರದಿ ಪ್ರಕಾರ ಕೃತಿ ಎರಡು ವರ್ಷದ ಅವಧಿಗೆ ಬಂಗಲೆ ಬಾಡಿಗೆಯ ಒಪ್ಪಂದ ಮಾಡಿಕೊಂಡಿದ್ದಾರೆ.

ಬಂಗಲೆಯನ್ನು ಬಾಡಿಗೆಗೆ ಪಡೆದಿರುವುದಕ್ಕೆ ಅವರು ₹60 ಲಕ್ಷ ಭದ್ರತಾ ಠೇವಣಿಯನ್ನು ಕೂಡ ನೀಡಿದ್ದಾರೆ.

ಪಶ್ಚಿಮ ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿನ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿ ಬಂಗಲೆಯಿದ್ದು, ನಾಲ್ಕು ಕಾರು ಪಾರ್ಕಿಂಗ್ ಇದೆ.

ಅಮಿತಾಭ್ ಮತ್ತು ಅಭಿಷೇಕ್ ಅವರು ಜುಹುವಿನಲ್ಲಿ ಮತ್ತೊಂದು ಕಟ್ಟಡವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಾಡಿಗೆಗೆ ನೀಡಿದ್ದಾರೆ.





Read More…Source link