ಮನಮೋಹನ್ ನಂದ ಎಂಬುವರು ಅಮೆರಿಕಕ್ಕೆ ಪ್ರಯಾಣ ಮಾಡುವುದಕ್ಕೆ ಮುನ್ನ ಓವರ್‌ಸೀಸ್ ಮೆಡಿಕ್ಲೇಮ್ ಬಿಸಿನೆಸ್ ಆ್ಯಂಡ್ ಹಾಲಿಡೇ ಪಾಲಿಸಿಯನ್ನು ಖರೀದಿಸಿದ್ದರು. ಅಮೆರಿಕಕ್ಕೆ ಬಂದ ನಂತರ ಹೃದಯಾಘಾತವಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಯ ವೆಚ್ಚವನ್ನು ಭರಿಸಲು ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಒಪ್ಪಿರಲಿಲ್ಲ. ಆರೋಗ್ಯ ಪರಿಸ್ಥಿತಿಯನ್ನು ಮೊದಲೇ ತಿಳಿಸಿರಲಿಲ್ಲ ಎಂದು ಕಾರಣ ಮುಂದಿಟ್ಟಿತ್ತು. ಮೆಡಿಕ್ಲೇಮ್ ಪಾಲಿಸಿಯ ಉದ್ದೇಶವು ಅನಾರೋಗ್ಯ ಆದ ಸಂದರ್ಭದಲ್ಲಿ ವಿಮೆ ಪರಿಹಾರವನ್ನು ಪಡೆಯುವುದಾಗಿದೆ. ಅನಾರೋಗ್ಯವು ಅನಿರೀಕ್ಷಿತವಾಗಿ, ವಿದೇಶದಲ್ಲಾದರೂ ಬರಬಹುದು. ಅನಿರೀಕ್ಷಿತವಾಗಿ ಅನಾರೋಗ್ಯವಾದರೆ ಪರಿಹಾರದಿಂದ ಹೊರಗಿಡಲಾಗುವುದು ಎಂಬ ಅಂಶವು ಪಾಲಿಸಿಯಲ್ಲೂ ಇಲ್ಲ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.
ಪಾಲಿಸಿದಾರರ ಈಗಿನ ಕಾಯಿಲೆಗೆ ವಿಮೆ ಕ್ಲೇಮ್ ನಿರಾಕರಿಸುವಂತಿಲ್ಲ; ಸುಪ್ರೀಂ ಕೋರ್ಟ್
ಹೊಸದಿಲ್ಲಿ: ವಿಮೆ ಕಂಪನಿಗಳು ಪಾಲಿಸಿದಾರರಿಗೆ ಈಗ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಭರಿಸುವುದಕ್ಕೆ ಸಂಬಂಧಿಸಿದ ಮೆಡಿಕ್ಲೇಮ್ ಅನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.